Jan 25, 2022, 1:28 PM IST
ಕೈಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ದಾಖಲೆ ಪತ್ರ ಹಿಡಿದುಕೊಂಡು ನಿಂತಿರೋ ಈ ಇಬ್ಬರು ಮಕ್ಕಳು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದವರು. ಅಣ್ಣ ಶಿವರಾಜ್ 4 ನೇ ಕ್ಲಾಸ್ ಓದುತ್ತಿದ್ದರೆ, ತಂಗಿ ಸಂಜನಾ 3ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾಳೆ. ಈ ಪುಟಾಣಿಗಳು ಇಬ್ಬರು ತಮ್ಮ ವಯಸ್ಸಿಗೆ ಮೀರಿದ ಪ್ರತಿಭೆ ಪ್ರದರ್ಶನ ಮಾಡಿ 2022ರ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ. ಅಪ್ಪು ಆರಾಧನೆ ಮಾಡೊ ಇವರಿಬ್ಬರಿಗೂ ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಸ್ಪೂರ್ತಿಯಾಗಿತ್ತು. ಮಕ್ಕಳು ಸಾಮಾನ್ಯ ಜ್ಞಾನದ ಜೊತೆಗೆ ಈವರೆಗೆ ನಟ ಪುನೀತ್ ರಾಜ್ಕುಮಾರ್ ಅಭಿನಯದ ಎಲ್ಲಾ ಸಿನಿಮಾಗಳ ಹೆಸರುಗಳು ಸಹ ಪಟಪಟ ಅಂತ ಹೇಳಿಬಿಡುತ್ತಾರೆ. ಇಬ್ಬರು ಮಕ್ಕಳಿಗೆ ಯುವರತ್ನ ಅಪ್ಪುವಿನ ಕನ್ನಡದ ಕೋಟ್ಯಾಧಿಪತಿಯೇ ಸ್ಫೂರ್ತಿಯಾಗಿತ್ತು ಅಂತರೇ ಮಕ್ಕಳ ತಾಯಿ.
ಪವರ್ ಸ್ಟಾರ್ ಕೊನೇ ಚಿತ್ರ 'ಜೇಮ್ಸ್' ಶೂಟಿಂಗ್ ಕಂಪ್ಲೀಟ್
ಇನ್ನೂ ಶಿವರಾಜ್ ಹಾಗೂ ಸಂಜನಾ ತಲಾ 10 ಸಾವಿರಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಇಂಥದ್ದೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಕೊರೊನಾ ಹಿನ್ನೆಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಪತ್ರಗಳನ್ನು ಪೋಸ್ಟ್ ಮುಖಾಂತರ ಕಳುಹಿಸಲಾಗಿದೆ. ದುರದೃಷ್ಟವಶಾತ್ ಪುನೀತ್ ನಮ್ಮೊಂದಿಗಿಲ್ಲ..ಹೀಗಾಗಿ ನಟ ಶಿವಣ್ಣ ಅಥವಾ ರಾಘಣ್ಣ ಯಾರಾದ್ರೂ ಅಪ್ಪು ಅವರ ಸ್ಥಾನದಲ್ಲಿ ನಿಂತು ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರವನ್ನು ನಮಗೆ ಹಸ್ತಾಂತರಿಸಬೇಕು ಎನ್ನುವ ಬಯಕೆ ಮಕ್ಕಳದು.