May 20, 2023, 11:01 AM IST
ಕರೀನಾ ಬಗ್ಗೆಅಚ್ಚರಿಯ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದಾರೆ ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಾಣ ಮೂರ್ತಿ ಮತ್ತು ಪತಿ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಇತ್ತೀಚೆಗಷ್ಟೆ ಬಾಲಿವುಡ್ ನಟಿ ಕರೀನಾ ಕಪೂರ್ ಬಗ್ಗೆ ಹೇಳಿರುವ ಮಾತುಗಳು ವೈರಲ್ ಆಗಿವೆ. ನಾರಾಯಣ ಮೂರ್ತಿ ಬಾಲಿವುಡ್ ಸ್ಟಾರ್ ಕರೀನಾ ಕಪೂರ್ ಅವರ ಒಂದು ಘಟನೆಯನ್ನು ಬಹಿರಂಗ ಪಡಿಸಿದರು. ಈ ವರ್ಷದ ಆರಂಭದಲ್ಲಿ ಐಐಟಿ ಕಾನ್ಪುರದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ, ಬಿಲಿಯನೇರ್ ದಂಪತಿ ಕರೀನಾ ಕಪೂರ್ ಬಗ್ಗೆ ಮಾತನಾಡಿದರು. ಕರೀನಾ ಯಾಕೆ ಈ ರೀತಿ ವರ್ತಿಸಿದರು ಎಂದು ಚರ್ಚಿಸಿದರು. ಕರೀನಾ ವರ್ತನೆ ಕ್ಷಮಿಸಲು ಸಾಧ್ಯವಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದರೆ, ಕರೀನಾ ಸುಸ್ತಾಗಿರಬಹುದು ಎಂದು ಸುಧಾ ಮೂರ್ತಿ ಬೆಂಬಲಕ್ಕೆ ನಿಂತರು. ನಾರಾಯಾಣ ಮೂರ್ತಿ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕರೀನಾ ಕಪೂರ್ ಅವರ ಪಕ್ಕದಲ್ಲೇ ಕುಳಿತಿದ್ದರು ಆಗ ನಡೆದ ಒಂದು ಘಟನೆಯನ್ನು ಬಹಿರಂಗ ಪಡಿಸಿ ಕರೀನಾ ವರ್ತನೆ ಇಷ್ಟವಾಗಿಲ್ಲ ಎಂದು ಹೇಳಿದರು. ನಾರಾಯಣ ಮೂರ್ತಿ, 'ನಾನು ಲಂಡನ್ನಿಂದ ಬರುತ್ತಿದ್ದೆ ಆಗ ನನ್ನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿದ್ದರು. ತುಂಬಾ ಜನರು ಅವರ ಬಳಿ ಬಂದು ಹಲೋ ಹೇಳುತ್ತಿದ್ದರು. ಆದರೆ ಅವರು ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ. ನನೆಗ ಅದು ಆಶ್ಚರ್ಯವಾಯಿತು. ಯಾರೇ ನನ್ನ ಬಳಿ ಬಂದರೂ ನಾನು ಎದ್ದು ನಿಂತು ನಾವು ಒಂದು ನಿಮಿಷ ಅಥವಾ ಅರ್ಧ ನಿಮಿಷ ಮಾತನಾಡಿದೆವು. ಅದನ್ನೇ ಅವರು ನಿರೀಕ್ಷಿಸುತ್ತಿದ್ದರು' ಎಂದು ಹೇಳಿದರು. ನಾರಾಯಣ ಮೂರ್ತಿ ಕರೀನಾ ಕಪೂರ್ ಅವರನ್ನು ಟೀಕಿಸುತ್ತಿದ್ದಂತೆ ಪತ್ನಿ ಸುಧಾ ಮೂರ್ತಿ ಮಧ್ಯ ಬಂದು ಕರೀನಾ ಬೆಂಬಲಕ್ಕೆ ನಿಂತರು. 'ಅವರಿಗೆ ಮಿಲಿಯನ್ ಗಟ್ಟಲೇ ಅಭಿಮಾನಿಗಳು ಇರುತ್ತಾರೆ. ಅವರು ಸುಸ್ತಾಗಿರಬಹುದು' ಎಂದು ಹೇಳಿದರು. ಪ್ರೇಕ್ಷಕರು ಸುಧಾ ಮೂರ್ತಿ ಅವರನ್ನು ಶ್ಲಾಘಿಸಿದರು.
ಇದನ್ನೂ ವೀಕ್ಷಿಸಿ: ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ರಿಷಬ್ ಶೆಟ್ಟಿ ಪುತ್ರಿ : ವಿಡಿಯೋ ವೈರಲ್