Aug 26, 2023, 9:50 AM IST
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ(harshika poonacha) ಹಾಗೂ ಭುವನ್ ಪೊನ್ನಣ್ಣ(bhuvan ponnanna) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹರ್ಷಿಕಾ ಪೂಣಚ್ಚ ಅವರು ಸುಂದರವಾದ ರೆಡ್ ಸೀರೆಯಲ್ಲಿ ಮಿಂಚಿದ್ದಾರೆ. ಆಗಸ್ಟ್ 24ಕ್ಕೆ ಹೊಸ ಬಾಳಿಗೆ ಕಾಲಿಟ್ಟಿರುವ ಹರ್ಷಿಕಾ ಭುವನ್ ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಕೊಡವ ಸಂಪ್ರದಾಯದಂತೆ ಇವರಿಬ್ಬರ ಮದುವೆ ನಡೆದಿದೆ. ಮದುವೆ(Marriage) ವಿಡಿಯೋ ರಿವೀಲ್ ಆಗಿದ್ದು, ಎರಡೂ ಕುಟುಂಬಗಳು ಸಂಭ್ರಮದಿಂದ ಮದುವೆಯಲ್ಲಿ ಭಾಗಿಯಾಗಿರೋದನ್ನು ನೋಡಬಹುದು. ಮದುವೆ ಸಮಾರಂಭಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಟ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿ ದಂಪತಿಗೆ ಶುಭ ಹಾರೈಸಿದರು.
ಇದನ್ನೂ ವೀಕ್ಷಿಸಿ: ಡಾಲಿ ರಿಲೀಸ್ ಮಾಡಿದ್ರು 'ಉತ್ತರಕಾಂಡ' ಮೇಕಿಂಗ್ ಝಲಕ್ !