Dec 29, 2024, 1:58 PM IST
ಈ ವರ್ಷ ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೂಲಕ ಗೆಲುವಿನ ಟ್ರ್ಯಾಕ್ಗೆ ಮರಳಿದ ಗೋಲ್ಡನ್ ಸ್ಟಾರ್ ಗಣೇಶ್ , ಹೊಸ ವರ್ಷಕ್ಕೆ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾರೆ. ಸೌತ್ ಬಿಗ್ ಪ್ರೊಡಕ್ಷನ್ ಹೌಸ್ ಗಣೇಶ್ ಸಿನಿಮಾಗೆ ಬಂಡವಾಳ ಹೂಡ್ತಾ ಇದ್ದು, ಆ ಗೋಲ್ಡನ್ ಪ್ರಾಜೆಕ್ಟ್ ಕುರಿತ ಡಿಟೈಲ್ಸ್ ಇಲ್ಲಿದೆ ನೋಡಿ.
ಈ ವರ್ಷ ದ್ವಾಪರ ದಾಟುತಾ ಅಂತ ಹಾಡ್ತಾ ಮೊದಲ ಹಿಟ್ ಕೊಟ್ಟಿದ್ದು ಗೋಲ್ಡನ್ ಸ್ಟಾರ್ ಗಣೇಶ್. ಕೃಷ್ಣಂ ಪ್ರಣಯ ಸಖಿ ಸಿನಿಮಾದ ಗೆಲವು ಗಣೇಶ್ ಕರಿಯರ್ಗೆ ಬೂಸ್ಟ್ ಕೊಡೋದ್ರ ಜೊತೆಗೆ ಈ ವರ್ಷ ಸೋಲಿನಲ್ಲೇ ಮುಳುಗಿದ್ದ ಕನ್ನಡ ಇಂಡಸ್ಟ್ರಿಗೂ ಹುರುಪು ತದುಕೊಟ್ತು.
ಇದೀಗ ಹೊಸ ವರ್ಷಕ್ಕೆ ಹೊಸ ಚಿತ್ರಕ್ಕೆ ಗಣೇಶ್ ಸಜ್ಜಾಗ್ತಾ ಇದ್ದು, ಗಣಪನ ಸಿನಿಮಾಗೆ ಸೌತ್ ನ ಬಿಗ್ ಪ್ರೊಡಕ್ಷನ್ ಹೌಸ್ ಬಂಡವಾಳ ಹೂಡ್ತಾ ಇದೆ. ‘ಕಾರ್ತಿಕೇಯ 2’, ‘ವೆಂಕಿ ಮಾಮ’, ‘ಓ ಬೇಬಿ’, ‘ಧಮಾಕಾ’ ನಂತಹ ಬಿಗ್ ಸಿನಿಮಾಗಳನ್ನ ನಿರ್ಮಿಸಿರೋ ಪೀಪಲ್ ಮೀಡಿಯಾ ಫ್ಯಾಕ್ಟರಿ’ ಗಣೇಶ್ ನಟನೆಯ ಮುಂದಿನ ಚಿತ್ರವನ್ನ ನಿರ್ಮಾಣ ಮಾಡಲಿದೆ.
ಹೆಸರಾಂತ ಡ್ಯಾನ್ಸ್ ಕೊರಿಯೋಗ್ರಾಫರ್ ಧನಂಜಯ್ ಈ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಗಣೇಶ್ಗಾಗಿ ವಿಭಿನ್ನ ಕಥೆ ಹೆಣೆದಿರೋ ಧನಂಜಯ್ ಇನ್ನೇನು ಉಳಿದ ತಾರಾಗಣದ ಆಯ್ಕೆಯಲ್ಲಿ ತೊಡಗಿಕೊಂಡಿದ್ದಾರೆ. ಜನವರಿಯಲ್ಲಿ ಈ ಸಿನಿಮಾದ ಆಫೀಷಿಯಲ್ ಅನೌನ್ಸ್ ಮೆಂಟ್ ಆಗಲಿದೆ.