ರಿಯಲ್ ಲೈಫ್‌ನಲ್ಲಿ ಹಸೆಮಣೆ ಏರುತ್ತಿದ್ದಾರೆ ಪ್ರಥಮ್!'ಫಸ್ಟ್ ನೈಟ್ ವಿತ್ ದೆವ್ವ'ಎಂದ ಒಳ್ಳೆ ಹುಡುಗ !

Nov 22, 2023, 12:27 PM IST

ಕರ್ನಾಟಕದ ಅಳಿಯ ಪ್ರಥಮ್ ಮದುವೆ(Marriage) ಆಗ್ತಿದ್ದಾರೆ. ಕುಟುಂಬದವರು ಇಷ್ಟಪಟ್ಟ ಹುಡುಗಿ ಮಂಡ್ಯದ(Mandya) ಭಾನುಶ್ರೀ ಜೊತೆ ಪ್ರಥಮ್ ಹಸೆ ಮಣೆ ಏರುತ್ತಿದ್ದಾರೆ. ನಿಮ್ ಮದ್ವೆ ಯಾವಾಗ  ಹನಿ ಮೂನ್ ಎಲ್ಲಿ ಮಾಡ್ತೀರಾ ಅಂತ ಕೇಳಿದ್ದಕ್ಕೆ ಪ್ರಥಮ್(Pratham) ಫಿಲ್ಟರ್ ಇಲ್ಲದೆ ಈ ರೀತಿ ಹೇಳಿದ್ರು. ಒಳ್ಳೆ ಹುಡುಗ ಪ್ರಥಮ್ ರಿಯಲ್ ಲೈಫ್ನ ಮದುವೆ ಇದೇ ವಾರ ನಡೆಯುತ್ತಿದೆ. ಆದ್ರೆ ಎಲ್ಲಿ ಯಾವಾಗ ಅನ್ನೋದು ಮಾತ್ರ ಗುಟ್ಟಾಗೆ ಇದೆ. ಅಷ್ಟರೊಗಳಗೆ ಪ್ರಥಮ್ ದೆವ್ವದ(Devva) ಜತೆ ಫಸ್ಟ್ ನೈಟ್ ಮಾಡಿಕೊಳ್ತಿದ್ದಾರೆ. ಅರೆ ಇದೇನ್ರಿ ಇದು ಯಾರಾದ್ರು ದೆವ್ವದ ಜತೆ ಫಸ್ಟ್ ನೈಟ್ ಮಾಡ್ಕೊಳ್ತಾರಾ.? ಪ್ರಥಮ್ ಕಥೆ ಏನಿ ಇದು ಅಂತೀರಾ.? ಇದು ನಿಜ ಕಂಡ್ರಿ ಪ್ರಥಮ್ ದೆವ್ವದ ಜತೆ ಫಸ್ಟ್ ನೈಟ್ ಮಾಡ್ಕೊತ್ತಿದ್ದಾರೆ. ಆದ್ರೆ ಇದು ರೀಲ್ನಲ್ಲಿ. ನಟ ಪ್ರಥಮ್ ಫಸ್ಟ್ ನೈಟ್ ವಿತ್ ದೆವ್ವ ಅನ್ನೋ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದ ಮಹೂರ್ಥ ಬೆಂಗಳೂರಿನ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ನಡೆದಿದೆ. ಫಸ್ಟ್ ನೈಟ್ ವಿತ್ ದೆವ್ವ ಹಾರಾರ್ ವಿತ್ ಕಾಮಿಡಿ ಜಾನರ್ ಸಿನಿಮಾ. ನಿಖಿತ, ಮಾನ್ಯ ಸಿಂಗ್ ಹೀರೋಯಿನ್ಸ್ ಆಗಿದ್ದಾರೆ. ಹಿರಿಯ ನಟ ಶ್ರೀನಿವಾಸ ಮೂರ್ತಿ, ಸಂಗೀತಾ, ಹರೀಶ್ ರಾಜ್, ತನುಜಾ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಥಮ್ ಬರೆದ ಕತೆಗೆ ನಿರ್ದೇಶಕ ಪಿ.ವಿ.ಆರ್ ಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಡಿಂಪಲ್ ಕ್ವೀನ್‌ಗೆ 10ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ! ರಚಿತಾ ರಾಮ್‌ಗೆ ಸಿಕ್ತು ಐಶಾರಾಮಿ ರೋಲ್ಸ್ ರಾಯ್..!