ಅಭಿಮಾನದ ಹುಚ್ಚು.. ಕೈ ಮೇಲೆ ಪವಿತ್ರಾ ಗೌಡ ಟ್ಯಾಟೂ: ಸಿನಿಮಾದಲ್ಲಿ ನಟಿಸಿ ಫೇಮಸ್ ಆಗ್ಲಿಲ್ಲ ನಟಿ!

ಅಭಿಮಾನದ ಹುಚ್ಚು.. ಕೈ ಮೇಲೆ ಪವಿತ್ರಾ ಗೌಡ ಟ್ಯಾಟೂ: ಸಿನಿಮಾದಲ್ಲಿ ನಟಿಸಿ ಫೇಮಸ್ ಆಗ್ಲಿಲ್ಲ ನಟಿ!

Published : Aug 13, 2025, 05:15 PM IST

ನೆಚ್ಚಿನ ನಟ, ನಟಿಯರ ಟ್ಯಾಟೂಗಳನ್ನ ಕೈಮೇಲೆ, ಮೈಮೇಲೆ ಹಾಕಿಸಿಕೊಳ್ಳೋ ಅಭಿಮಾನಿಗಳನ್ನ ನೋಡಿದ್ದೀರಿ. ಇಲ್ಲೊಬ್ಬ ಅಭಿಮಾನಿ ಪವಿತ್ರಾ ಗೌಡ ಫೋಟೋವನ್ನ ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

ಪವಿತ್ರಾ ಗೌಡ ನಾಲ್ಕಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ರೂ ಆಕೆ ಹೆಸರು ಜನರಿಗೆ ಗೊತ್ತಿರಲಿಲ್ಲ. ಆದ್ರೆ ರೇಣುಕಾಸ್ವಾಮಿ ಮರ್ಡರ್ ಕೇಸ್​​ ಬಳಿಕ ದರ್ಶನ್​ರಷ್ಟೇ ಫೇಮಸ್ ಆಗಿದ್ದಾರೆ ಪವಿತ್ರಾ. ಅದಕ್ಕೆ ಸಾಕ್ಷಿ ಬೇಕಾ..? ಈ ಸ್ಟೋರಿ ನೋಡಿ. ನೆಚ್ಚಿನ ನಟ, ನಟಿಯರ ಟ್ಯಾಟೂಗಳನ್ನ ಕೈಮೇಲೆ, ಮೈಮೇಲೆ ಹಾಕಿಸಿಕೊಳ್ಳೋ ಅಭಿಮಾನಿಗಳನ್ನ ನೋಡಿದ್ದೀರಿ. ಇಲ್ಲೊಬ್ಬ ಅಭಿಮಾನಿ ಪವಿತ್ರಾ ಗೌಡ ಫೋಟೋವನ್ನ ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇದನ್ನ ಖುದ್ದು ಪವಿತ್ರಾ ಗೌಡ ಶೇರ್ ಮಾಡಿ, ನಿಮ್ಮ ಅಭಿಮಾನಕ್ಕೆ ಶರಣು ಕಣಯ್ಯಾ ಅಂದಿದ್ದಾರೆ. ಅಂದಹಾಗೆ ಈತ ದರ್ಶನ್ ಅಭಿಮಾನಿ, ಈಗ ಪವಿತ್ರಾ ಗೌಡಗೂ ಅಭಿಮಾನಿ ಆಗಿದ್ದಾನೆ. ತನ್ನ ಅಭಿಮಾನ ವ್ಯಕ್ತಪಡಿಸೋಕೆ ಅಕ್ಕನ ಫೋಟೋನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡು, ಪವಿತ್ರಾ ಗೌಡಗೆ ತೋರಿಸಿದ್ದಾನೆ. ಅದನ್ನ ನೋಡಿ ಪವಿತ್ರಾ ನಾಚಿ ನೀರಾಗಿದ್ದಾರೆ.

ಹೌದು ಪವಿತ್ರಾ ಗೌಡ 4 ಕನ್ನಡ ಒಂದು ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ರು. ಆದ್ರೆ ಸಿನಿಮಾದಲ್ಲಿ ನಟಿಸೋವಾಗ ಅಭಿಮಾನಿ ಇರಲಿ ಗುರುತಿಸಿ ಮಾತನಾಡಿಸೋರು ಕೂಡ ದಿಕ್ಕಿರಲಿಲ್ಲ. ದರ್ಶನ್ ಜೊತೆ ನಂಟು ಬೆಳೆದ ಮೇಲೆ ಪವಿತ್ರಾ ಹೆಸರು ಕೊಂಚ ಚಾಲ್ತಿಗೆ ಬಂತು. ಇನ್ನೂ ರೇಣುಕಾಸ್ವಾಮಿ ಮರ್ಡರ್ ಕೇಸ್ ಬಳಿಕವಂತೂ ಪವಿತ್ರಾ ದೇಶಾದ್ಯಂತ ಫೇಮಸ್ ಆಗಿದ್ದು ಸುಳ್ಳಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಪವಿತ್ರಾಗೆ ಲಕ್ಷಗಟ್ಟಳೇ ಫಾಲೋವರ್ಸ್ ಆಗಿದ್ದಾರೆ. ತನ್ನ ಫಾಲೋವರ್ಸ್ ಕಣ್ಣುಕುಕ್ಕುವಂತೆ ಪವಿತ್ರಾ ರೀಲ್ಸ್ ಕೂಡ ಹಾಕ್ತಾ ಇರ್ತಾರೆ. ಇಂಥಾ ರೀಲ್ಸ್ ನೋಡಿ ಫೀಲ್ ಆಗಿರೋ ಅಭಿಮಾನಿಯೊಬ್ಬ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಆದ್ರೆ ಇದನ್ನ ನೋಡಿರೋ ದರ್ಶನ್ ಫ್ಯಾನ್ಸ್ ‘ಹುಷಾರ್ ಕಣಪ್ಪಾ ಇದನ್ನ ನಮ್ಮ ಬಾಸ್ ನೋಡಿದ್ರೆ  ನಿನ್ ಗತಿ ಏನಾಗುತ್ತೋ ಗೊತ್ತಿಲ್ಲ’ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ..!

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more