
ದುನಿಯಾ ವಿಜಯ್ - ರಾಜ್ ಶೆಟ್ಟಿ ನಟನೆಯ ಲ್ಯಾಂಡ್ ಲಾರ್ಡ್ ಮೂವಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಲ್ಯಾಂಡ್ ಲಾರ್ಡ್ ಬರೀ ಕಮರ್ಷಿಯಲ್ ಸಿನಿಮಾ ಅಲ್ಲ. ಸಮಾಜದಲ್ಲಿ ಕ್ರಾಂತಿ ಕಿಡಿ ಹಚ್ಚುವಂಥಾ ಸಿನಿಮಾ ಅಂತಿದ್ದಾರೆ ಲ್ಯಾಂಡ್ ಲಾರ್ಡ್ ನೋಡಿದವರು.
ರಾಚಯ್ಯನ ಶಾಂತಿ, ಲ್ಯಾಂಡ್ ಲಾರ್ಡ್ ಕ್ರಾಂತಿ..!
ಯೆಸ್ ದುನಿಯಾ ವಿಜಯ್ - ರಚಿತಾ ರಾಮ್ - ರಾಜ್ ಶೆಟ್ಟಿ ನಟಿಸಿರೋ ಲ್ಯಾಂಡ್ ಲಾರ್ಡ್ ಮೂವಿ ಸಖತ್ ಸದ್ದು ಮಾಡ್ತಾ ಇದೆ. ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣೋದ್ರ ಜೊತೆಗೆ ತನ್ನ ಕಂಟೆಂಟ್ ಕಾರಣಕ್ಕೆ ಎಲ್ಲೆಡೆ ಸದ್ದು ಮಾಡ್ತಾ ಇದೆ. ಲ್ಯಾಂಡ್ ಲಾರ್ಡ್ ಮೂವಿ ಆಳಿದವರು ಮತ್ತು ಅಳಿದು ಉಳಿದವರ ನಡುವಿನ ಸಂಘರ್ಷದ ಕಥೆ. ರಾಜ್ ಶೆಟ್ಟಿ ಕ್ರೂರಿ ಜಮೀನ್ದಾರನ ಪಾತ್ರ ಮಾಡಿದ್ರೆ, ಶೋಷಿತ ಜನರ ಪರ ನಿಲ್ಲುವ ರಾಚಯ್ಯನಾಗಿ ವಿಜಯ್ ಮಿಂಚಿದ್ದಾರೆ.
ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು, ನಾಡಿನ ಚಿಂತಕರು , ಸಾಹಿತಿಗಳು ಕೂಡ ಈ ಸಿನಿಮಾವನ್ನ ನೋಡಿ ಮೆಚ್ಚಿಕೊಂಡಿದ್ದಾರೆ. ಇದು ನೋಡಲೇಬೇಕಾದ ಚಿತ್ರ ಅಂತಿದ್ದಾರೆ.ಥಿಯೇಟರ್ ನಲ್ಲಿ ಅಬ್ಬರಿಸೋದ್ರ ಜೊತೆಗೆ ಒಂದು ಸಾಮಾಜಿಕ ಕ್ರಾಂತಿಯ ಕಿಡಿಯನ್ನ ಲ್ಯಾಂಡ್ ಲಾರ್ಡ್ ಹೊತ್ತಿಸ್ತಾ ಇದೆ ಅಂದ್ರೆ ತಪ್ಪಾಗಲ್ಲ..!
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.