
ಡಾ.ವಿಷ್ಣುವರ್ಧನ್, ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಪ್ರೇಮ ಸೇರಿದಂತೆ ದೊಡ್ಡ ತಾರಾಗಣವೇ ತುಂಬಿಕೊಂಡಿದ್ದ ಯಜಮಾನ ಸಿನಿಮಾ ಇದೇ ತಿಂಗಳು ನವೆಂಬರ್ 7 ರಂದು ಮರು ಬಿಡುಗಡೆ ಆಗುತ್ತಿದೆ.
ಡಾ.ವಿಷ್ಣುವರ್ಧನ್, ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಪ್ರೇಮ ಸೇರಿದಂತೆ ದೊಡ್ಡ ತಾರಾಗಣವೇ ತುಂಬಿಕೊಂಡಿದ್ದ ಯಜಮಾನ ಸಿನಿಮಾ ಇದೇ ತಿಂಗಳು ನವೆಂಬರ್ 7 ರಂದು ಮರು ಬಿಡುಗಡೆ ಆಗುತ್ತಿದೆ. 25 ವರ್ಷಗಳ ಹಿಂದೆ 2000ನೇ ಇಸವಿಯಲ್ಲಿ ತೆರೆಕಂಡ ಯಜಮಾನ ಸಿನಿಮಾ ಒಂದು ವರ್ಷ ಪ್ರದರ್ಶನ ಕಂಡಿತ್ತು. ಇದೀಗ ಮೆಹರುನ್ನಿಸಾ ರೆಹಮಾನ್ ನಿರ್ಮಾಣದ ಹಾಗೂ ಆರ್ ಶೇಷಾದ್ರಿ - ರಾಧಾ ಭಾರತಿ ನಿರ್ದೇಶನದ "ಯಜಮಾನ" ಚಿತ್ರ ಇದೇ ನವೆಂಬರ್ 7 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಮರು ಬಿಡುಗಡೆಯಾಗುತ್ತಿದೆ. ಜನಮೆಚ್ಚಿದ ಈ ಚಿತ್ರ ಆಧುನಿಕ ತಂತ್ರಜ್ಞಾನದೊಂದಿಗೆ ಹೊಸ ರೂಪದಲ್ಲಿ ತೆರೆ ಮೇಲೆ ಬರುತ್ತಿದೆ.
'ಗತವೈಭವ'ದ ಮೂಲಕ ಗಟ್ಟಿಯಾಗಿ ನಿಲ್ಲುವ ಭರವಸೆಯಲ್ಲಿ ದುಷ್ಯಂತ್: ಸರಳ ಲವ್ ಸ್ಟೋರಿಗಳನ್ನು ಕಟ್ಟುವುದರಲ್ಲಿ ಎತ್ತಿದ ಕೈಯ್ಯಾಗಿರುವ ನಿರ್ದೇಶಕ ಸಿಂಪಲ್ ಸುನಿ, ಹೊಸ ಪ್ರತಿಭೆಗಳನ್ನು ಬೆಳ್ಳಿಪರದೆಗೆ ಪರಿಚಯಿಸುವುದರಲ್ಲಿಯೂ ಪಂಟರ್. ಗತವೈಭವ ಸಿನಿಮಾ ಮೂಲಕ ಸುನಿ ಈಗ ಮತ್ತೊಬ್ಬ ಯುವ ನಟನನ್ನು ಕನ್ನಡ ಪ್ರೇಕ್ಷಕರಿಗೆ ಮಡಿಲಿಗೆ ಹಾಕುತ್ತಿದ್ದಾರೆ. ಅವರೇ ದುಷ್ಯಂತ್. ಟೆಂಟ್ ಸಿನಿಮಾ ಅಭಿನಯ ಶಾಲೆಯಲ್ಲಿ ಅಭಿನಯ ಕಲಿತಿರೋ ದುಷ್ಯಂತ್ ಈಗ ತತವೈಭವ ಸಿನಿಮಾಗಾಗಿ ಸುಮಾರು 20 kg ಗಳಷ್ಟು ತೂಕ ಇಳಿಸಿಕೊಂಡು, ಡಾನ್ಸ್ ಪ್ರಾಕ್ಟೀಸ್, ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ ಕಲಿತಿದ್ದು ಈಗ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಗತವೈಭವ, ಸಂಪೂರ್ಣ ಪ್ರೇಮಕಥೆ. ಪ್ಯಾಂಟಸಿ ಹಾಗು ಸಾನಾತನ ಧರ್ಮದ ಕಥೆಯ ಸಿನಿಮಾ ಆಗಿದ್ದು, ಇದೇ ತಿಂಗಳ 14ಕ್ಕೆ ಸಿನಿಮಾ ತೆರೆಗೆ ಬರಲಿದೆ.
ದಿ ಟಾಸ್ಕ್‌ಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್: ದಿ ಟಾಸ್ಕ್ ಸಿನಿಮಾಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬೆಂಬಲ ಸಿಕ್ಕಿದೆ. ಕಲಾವಿದರ ಸಂಘದಲ್ಲಿ ‘ದಿ ಟಾಸ್ಕ್’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ನಟ ಧ್ರುವ ಸರ್ಜಾ ಅವರು ಮುಖ್ಯ ಅತಿಥಿಯಾಗಿ ಬಂದು ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಸಿನಿಮಾಗೆ ರಾಘು ಶಿವಮೊಗ್ಗ ನಿರ್ದೇಶನವಿದೆ. ‘ಲೋಕಪೂಜ್ಯ ಪಿಕ್ಚರ್ ಹೌಸ್’ ಮೂಲಕ ಸಿನಿಮಾ ನಿರ್ಮಾಣ ಆಗಿದೆ. ‘ಈ ಚಿತ್ರದಿಂದ ಇಬ್ಬರು ಹೊಸ ಹೀರೋಗಳು ಲಾಂಚ್ ಆಗುತ್ತಿದ್ದಾರೆ. ಜಯ ಸೂರ್ಯ ಆರ್ ಅಜಾದ್, ಸಾಗರ್ ರಾಮ್ ಹಾಗೂ ಬಾಲ ನಟಿ ಬೇಬಿ ಶ್ರೀ ಲಕ್ಷ್ಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರಿಯಾ, ಬಾಲಾಜಿ ಮನೋಹರ್, ಬಿ.ಎಂ. ಗಿರಿರಾಜ್ ತಾರಾಬಳಗದಲ್ಲಿದ್ದಾರೆ.
ಮಾರ್ಕ್ ಟೀಸರ್ ರೀಲೀಸ್ಗೆ ಕೌಂಟ್ಡೌನ್: ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಫಸ್ಟ್ ಟೀಸರ್ ರಿಲೀಸ್ಗೆ ಕೌಂಟ್ ಡೌನ್ ಶುರುವಾಗಿದೆ. ಸೈಕೋ ಸೈತಾನ ಸಾಂಗ್ ಬಳಿಕ ಹೊಸ ಅಪ್ಟೇಡ್ ಆಗಿ ಟೀಸರ್ ರಿಲೀಸ್ ಆಗ್ತಾ ಇದ್ದು, ಇಧೇ ವಾರಾಂತ್ಯ ಟೀಸರ್ ಬರುತ್ತೆ ಅನ್ನೋ ಬಿಗ್ ಖಭರ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಮ್ಯಾಕ್ಸ್ ನಿರ್ದೇಶನ ಮಾಡಿದ್ದ ವಿಜಯ್ ಕಾರ್ತಿಕೇಯನ್ ಈ ಮೂವಿಯನ್ನ ಡೈರೆಕ್ಟ್ ಮಾಡ್ತಾ ಇದ್ದು, ಕ್ರಿಸ್ಮಸ್ ಗೆ ಸಿನಿಮಾ ತೆರೆಗೆ ಬರಲಿದೆ.