ಚಿಕ್ಕಪ್ಪ ಅಪ್ಪುಗಾಗಿ ಸಿದ್ಧವಾಗಿದ್ಧ ಕಥೆಯಲ್ಲಿ ಯುವರಾಜ್ ಕುಮಾರ್...!

ಚಿಕ್ಕಪ್ಪ ಅಪ್ಪುಗಾಗಿ ಸಿದ್ಧವಾಗಿದ್ಧ ಕಥೆಯಲ್ಲಿ ಯುವರಾಜ್ ಕುಮಾರ್...!

Published : Apr 28, 2022, 03:16 PM IST

ಅಪ್ಪು (Puneeth Rajkumr) ಸ್ಥಾನವನ್ನು ಯುವ ರಾಜ್ ಕುಮಾರ್ (Yuvarajkumar) ತುಂಬಬೇಕು ಅನ್ನೋದು ದೊಡ್ಮನೆ ಅಭಿಮಾನಿಗಳ ಆಸೆ. ಹೀಗಾಗಿ ಯುವ ಹೋದಲ್ಲಿ ಬಂದಲ್ಲಿ ಜ್ಯೂನಿಯರ್ ಪವರ್ ಸ್ಟಾರ್ ಗೆ ಜೈ ಅಂತ ಜೈಕಾರ ಹಾಕೋಕೆ ಶುರು ಮಾಡಿದ್ದಾರೆ.

ಅಪ್ಪು (Puneeth Rajkumr) ಸ್ಥಾನವನ್ನು ಯುವ ರಾಜ್ ಕುಮಾರ್ (Yuvarajkumar) ತುಂಬಬೇಕು ಅನ್ನೋದು ದೊಡ್ಮನೆ ಅಭಿಮಾನಿಗಳ ಆಸೆ. ಹೀಗಾಗಿ ಯುವ ಹೋದಲ್ಲಿ ಬಂದಲ್ಲಿ ಜ್ಯೂನಿಯರ್ ಪವರ್ ಸ್ಟಾರ್ ಗೆ ಜೈ ಅಂತ ಜೈಕಾರ ಹಾಕೋಕೆ ಶುರು ಮಾಡಿದ್ದಾರೆ.

ಈ ಜೈಕಾರದ ಸದ್ದು ಇಡೀ ದೇಶಾದ್ಯಂತ ಕೇಳಿಸೋ ದಿನಗಳ ಹತ್ತಿರವಾಗಿದೆ. ಯಾಕಂದ್ರೆ ಬೆಳ್ಳಿತೆರೆ ಬಾನಂಗಳದಲ್ಲಿ ಯುವ ಸಂಭ್ರಮ ಶುರುವಾಗೋ ದಿನ ಬಂದಾಯ್ತು. ಜ್ಯೂ. ಪವರ್ ಸ್ಟಾರ್ ಯುವ ರಾಜ್ ಕುಮಾರ್ರನ್ನ ಇಡೀ ದೇಶದ ಸಿನಿ ರಂಗಕ್ಕೆ ಪರಿಚಯಿಸೋ ದೊಡ್ಡ ಜವಾಬ್ಧಾರಿಯನ್ನ ಹೊತ್ತುಕೊಂಡಿದೆ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ, ಕನ್ನಡಿಗರ ಹೆಮ್ಮೆಯ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್ಂ.

ಡಾ. ರಾಜ್‌ಕುಮಾರ್ ಕುಟುಂಬದ 3ನೇ ತಲೆಮಾರಿನ ಕುಡಿಗಳು ಒಬ್ಬೊಬ್ಬರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್, ಪೂರ್ಣಿಮಾ ರಾಜ್ ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್, ಧನ್ಯಾ ರಾಮ್ ಕುಮಾರ್ ಈಗಾಗ್ಲೆ ಬಣ್ಣ ಹಚ್ಚಿ ಫೇಮಸ್ ಆಗ್ತಿದ್ದಾರೆ. ಈಗ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವ ರಾಜ್ ಕುಮಾರ್ (Yuva Rajkumar) ಬಣ್ಣದ ಲೋಕದ ಎಂಟ್ರಿಗೆ ವೇಧಿಕೆ ಸಿದ್ಧವಾಗಿದೆ. ಕನ್ನಡ ಚಿತ್ರರಂಗದ ಪ್ರತಿಷ್ಠೆಯ ನಿರ್ಮಾಣ ಸಂಸ್ಥೆ ಕೆಜಿಎಫ್ ಸಿನಿಮಾ ಕೊಟ್ಟಿರೋ ಹೊಂಬಾಳೆ ಫಿಲ್ಮ್ಸಂ ಬ್ಯಾನರ್ ಯುವರಾಜ್ ಕುಮಾರ್ರನ್ನ ಬೆಳ್ಳಿತೆರೆಗೆ ಕರೆ ತಂದು ಪಟ್ಟಾಭಿಶೇಕ ಮಾಡುತ್ತಿದೆ. 

 ಪುನೀತ್ ರಾಜ್ ಕುಮಾರ್ , ತನ್ನ ಅಣ್ಣನ ಕಿರಿಯ ಪುತ್ರ ಯುವ ರಾಜ್ ಕುಮಾರ್ರನ್ನ ಬೆಳ್ಳಿತೆರೆಗೆ ಗ್ರ್ಯಾಂಡ್ ಆಗಿ ಇಂಟ್ರಿಡ್ಯೂಸ್ ಮಾಡ್ಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದರು. ಈ ವಿಷಯವನ್ನ ಪುನೀತ್ ಸಾಕಷ್ಟು ಬಾರಿ ಹೇಳಿದ್ರು. ಆದ್ರೆ ಅಷ್ಟರೊಳಗೆ ಆಗಬಾರದ್ದೊಂದು ಘಟನೆ ನಡೆದು ಹೋಯ್ತು. ಈಗ ಅಲ್ಲು ಆಶೀರ್ವಾದದ ಜೊತೆ ಯುವರಾಜ್ ಕುಮಾರ್ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಫೇವರಿಟ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅಪ್ಪುಗಾಗಿ ಸಿದ್ಧಪಡಿಸಿದ್ದ ಕಥೆಯಲ್ಲಿ ಯುವ ರಾಜ್ ಕುಮಾರ್ರ ಮೊದಲ ಹೆಜ್ಜೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅಂತ ಹೊಂಬಾಳೆ ಪ್ರೊಡಕ್ಷನ್ ಅನೌನ್ಸ್ ಮಾಡಿದೆ. 

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more