ಇದು ಕಿರಿಕ್ ಪಾರ್ಟಿಯ 'ಬ್ಯಾಚುಲರ್ ಪಾರ್ಟಿ': ಜ.26ಕ್ಕೆ ದಿಗಂತ್, ಲೂಸ್ ಮಾದ ಯೋಗಿ ಸಿನಿಮಾ ರಿಲೀಸ್!

ಇದು ಕಿರಿಕ್ ಪಾರ್ಟಿಯ 'ಬ್ಯಾಚುಲರ್ ಪಾರ್ಟಿ': ಜ.26ಕ್ಕೆ ದಿಗಂತ್, ಲೂಸ್ ಮಾದ ಯೋಗಿ ಸಿನಿಮಾ ರಿಲೀಸ್!

Published : Jan 11, 2024, 08:17 PM IST

ಬ್ಯಾಚ್ಯೂಲರ್ಸ್ ಅಂದ್ರೆ ಬೆಂಗಳೂರಲ್ಲಿ ಮನೆ ಬಾಡಿಕೆ ಕೊಡಲ್ಲ ಅನ್ನೋದು ಅನಾದಿ ಕಾಲದಿಂದಲೂ ಕೆಲವು ಮಾಡಿಕೊಂಡಿರೋ ನಿಯಮ. ಇದಕ್ಕೆ ಕಾರಣ ಬ್ಯಾಚ್ಯೂಲರ್ಸ್ ಮನೆಯಲ್ಲೇ ಪಾರ್ಟಿ ಮಾಡ್ತಾರೆ ಅನ್ನೋದು. ಇದೀಗ ಇದೇ ಬ್ಯಾಚ್ಯೂಲರ್ಸ್ಗಳ ಕತೆಯ ಕನ್ನಡದ ಸಿನಿಮಾ ಬ್ಯಾಚ್ಯೂಲರ್ ಪಾರ್ಟಿ ತೆರೆ ಮೇಲೆ ಬರಲು ರೆಡಿಯಾಗಿದೆ. 

ಬ್ಯಾಚ್ಯೂಲರ್ಸ್ ಅಂದ್ರೆ ಬೆಂಗಳೂರಲ್ಲಿ ಮನೆ ಬಾಡಿಕೆ ಕೊಡಲ್ಲ ಅನ್ನೋದು ಅನಾದಿ ಕಾಲದಿಂದಲೂ ಕೆಲವು ಮಾಡಿಕೊಂಡಿರೋ ನಿಯಮ. ಇದಕ್ಕೆ ಕಾರಣ ಬ್ಯಾಚ್ಯೂಲರ್ಸ್ ಮನೆಯಲ್ಲೇ ಪಾರ್ಟಿ ಮಾಡ್ತಾರೆ ಅನ್ನೋದು. ಇದೀಗ ಇದೇ ಬ್ಯಾಚ್ಯೂಲರ್ಸ್ಗಳ ಕತೆಯ ಕನ್ನಡದ ಸಿನಿಮಾ ಬ್ಯಾಚ್ಯೂಲರ್ ಪಾರ್ಟಿ ತೆರೆ ಮೇಲೆ ಬರಲು ರೆಡಿಯಾಗಿದೆ. ಸ್ಯಾಂಡಲ್ವುಡ್ನ ಚಾಕಲೇಟ್ ಹೀರೋ ನಟ ದಿಗಂತ್ ಹಾಗು ಲೂಸ್ ಮಾದ ಯೋಗಿ ಇಬ್ಬರು ರಿಯಲ್ ಲೈಫ್ನಲ್ಲಿ ಫ್ಯಾಮಿಲಿ ಮ್ಯಾನ್. ಬ್ಯಾಚುಲರ್ ಲೈಫ್ಗೆ ಇಬ್ಬರು ಗುಡ್ಬೈ ಹೇಳಿದ್ದಾರೆ. ಆದ್ರೆ ಈ ಕಿಲಾಡಿ ಜೋಡಿ ರೀಲ್ ಲೈಫ್ನಲ್ಲಿ ಈಗ ಬ್ಯಾಚುಲರ್ಸ್ ಆಗಿದ್ದಾರೆ. ದಿಂಗತ್ ಹಾಗು ಯೋಗಿ ನಟಿಸಿರೋ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಬ್ಯಾಚುಲರ್ ಪಾರ್ಟಿ. ಬ್ಯಾಚುಲರ್ ಪಾರ್ಟಿ ಸೀಸಾ ಸಾದ ಹುಡುಗರ ಕಥೆಯ ಸಿನಿಮಾ. 

ನಟ ಶೈನ್ ಶೆಟ್ಟಿ ಕೊಡೋ ಬ್ಯಾಚುಲರ್ ಪಾರ್ಟಿಗೆ ಹೊಗೋ ಯೋಗಿ ಹಾಗು ದಿಂಗತ್ ಮಧ್ಯೆ ಏನೆಲ್ಲಾ ಆಗುತ್ತೆ ಅನ್ನೋದು ಈ ಸಿನಿಮಾದ ಸ್ಟೋರಿ. ಸ್ಯಾಂಡಲ್‌ವುಡ್‌ನಲ್ಲಿ ಕಿರಿಕ್ ಪಾರ್ಟಿ ಕ್ರೇಜ್ ಹೇಗಿತ್ತು ಅನ್ನೋದು ನೀವೆಲ್ಲಾ ನೋಡಿದ್ದೀರಾ. ಕಿರಿಕ್ ಪಾರ್ಟಿ ಮುಂದುವರೆದ ಭಾಗ ಬರ್ತಿದೆ ಅನ್ನೋ ನಿರೀಕ್ಷೆ ಇನ್ನೂ ಹಾಗೆ ಇದೆ. ಆದ್ರೆ ಅದಕ್ಕೂ ಮೊದಲು ನಾವ್ ಬ್ಯಾಚುಲರ್ ಪಾರ್ಟಿ ಮಾಡೋಣ ಬನ್ನಿ ಅಂತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿಮ್ಮನ್ನೆಲ್ಲಾ ಕರೆಯತ್ತಿದ್ದಾರೆ. ಯಾಕಂದ್ರೆ ಈ ಬ್ಯಾಚುರ್ ಪಾರ್ಟಿ ಸಿನಿಮಾವನ್ನ ಕಿರಿಕ್ ಪಾರ್ಟಿಯ ಮೇಕರ್ಸ್ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಬ್ಯಾಚ್ಯೂಲರ್ ಪಾರ್ಟಿ ಸಿನಿಮಾವನ್ನ ಜಿ.ಎಸ್.ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಜಂಟಿಯಾಗಿಯೇ ನಿರ್ಮಿಸಿದ್ದಾರೆ. ಅಭಿಜಿತ್ ಮಹೇಶ್ ಡೈರೆಕ್ಟ್ ಮಾಡಿದ್ದಾರೆ.  ಜನವರಿ 26ಕ್ಕೆ 'ಬ್ಯಾಚುಲರ್ ಪಾರ್ಟಿ' ರಿಲೀಸ್ ಆಗ್ತಿದೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more