May 24, 2023, 11:07 AM IST
ಡಲ್ವುಡ್ ನಟ ಧ್ರುವ ಸರ್ಜಾ ಅವರು ‘ಮಾರ್ಟಿನ್’ಮತ್ತು ‘ಕೆಡಿ’ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಗಳ ಜೊತೆಗಿನ ಫೋಟೋವನ್ನ ನಟ ಮೊದಲ ಬಾರಿಗೆ ಹಂಚಿಕೊಂಡಿದ್ದರು. ಈಗ ಮಗಳ ಜೊತೆಗಿನ ಚೆಂದದ ವೀಡಿಯೋವೊಂದನ್ನ ಧ್ರುವ ಶೇರ್ ಮಾಡಿದ್ದಾರೆ. ಇನ್ನೂ ಇತ್ತ ಸುಂದರವಾದ ನೀಲಿ ಡ್ರೆಸ್ ತೊಟ್ಟು ವಿಮಾನ ನಿಲ್ದಾಣಕ್ಕೆ ಬಂದ ಚೆಲುವೆ ಜಾಹ್ನವಿ ಕೈಯಲ್ಲಿ ದಿಂಬು ಹಿಡಿದು ಬಂದಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಜಾನ್ವಿ ವಿಮಾನದಲ್ಲಿ ಪ್ರಯಾಣಿಸುವಾಗ ಆಗಾಗ್ಗೆ ದಿಂಬುಗಳನ್ನು ಒಯ್ಯುತ್ತಾರೆ ಅನ್ನೋದು ಕೆಲವು ಮಂದಿಗೆ ಗೊತ್ತಿಲ್ಲ. ನಿಶ್ವಿಕಾ ನಾಯ್ಡು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಫುಲ್ ಪಾರ್ಟೀ ಮೂಡ್‌ನಲ್ಲಿ ರೆಡಿಯಾಗಿದ್ದಾರೆ. ಗುರುಶಿಷ್ಯರು ಸಿನಿಮಾದ ಪಕ್ಕಾ ಹಳ್ಳಿ ಹುಡುಗಿ ಇದೀಗ ಪ್ಯಾಟೆ ಹುಡುಗಿಯಾಗಿ ಸೇಕ್ವೆನ್ಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇತ್ತೀಚೆಗಿನ ಫೋಟೋಶೂಟ್ ಎಂದು ನಿಶ್ವಿಕಾ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಬಾಲಿವುಡ್‌ನ ಡಾನ್ ಪಟ್ಟಕ್ಕೆ ಭಾರಿ ಪೈಪೋಟಿ : ಶಾರುಖ್, ಯಶ್, ಬಳಿಕ ಡಾನ್ ಪಟ್ಟಕ್ಕೆ ರಣವೀರ್?