KD ಕಿರಿಕ್:  ಮಲ್ಟಿಸ್ಟಾರರ್ ಕೆಡಿ ತೆರೆಗೆ ಬರೋದ್ಯಾವಾಗ? ಕಾದು ಕಾದು ಸುಸ್ತಾದ ಧ್ರುವ ಸರ್ಜಾ ಫ್ಯಾನ್ಸ್!

KD ಕಿರಿಕ್: ಮಲ್ಟಿಸ್ಟಾರರ್ ಕೆಡಿ ತೆರೆಗೆ ಬರೋದ್ಯಾವಾಗ? ಕಾದು ಕಾದು ಸುಸ್ತಾದ ಧ್ರುವ ಸರ್ಜಾ ಫ್ಯಾನ್ಸ್!

Published : Oct 11, 2025, 04:36 PM ISTUpdated : Oct 11, 2025, 04:38 PM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಂಡ್ ಶೋ ಮ್ಯಾನ್ ಪ್ರೇಮ್ ಜೋಡಿಯ ಮೆಗಾ ಸಿನಿಮಾ ಕೆಡಿ ರಿಲೀಸ್ ಯಾವಾಗ..? ಅಭಿಮಾನಿಗಳನ್ನ ಈ ಪ್ರಶ್ನೆ ಕಾಡ್ತಾನೇ ಇದೆ. ದೀಪಾವಳಿಗೆ ಬರಬಹುದು.. ಡಿಸೆಂಬರ್​ಗೆ ರಿಲೀಸ್ ಆಗಬಹುದು ಅಂತ ಕಾದಿದ್ದವರಿಗೆ ನಿರಾಸೆ ಆಗಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಂಡ್ ಶೋ ಮ್ಯಾನ್ ಪ್ರೇಮ್ ಜೋಡಿಯ ಮೆಗಾ ಸಿನಿಮಾ ಕೆಡಿ ರಿಲೀಸ್ ಯಾವಾಗ..? ಅಭಿಮಾನಿಗಳನ್ನ ಈ ಪ್ರಶ್ನೆ ಕಾಡ್ತಾನೇ ಇದೆ. ದೀಪಾವಳಿಗೆ ಬರಬಹುದು.. ಡಿಸೆಂಬರ್​ಗೆ ರಿಲೀಸ್ ಆಗಬಹುದು ಅಂತ ಕಾದಿದ್ದವರಿಗೆ ನಿರಾಸೆ ಆಗಿದೆ. ಕೆಡಿ ಈ ವರ್ಷ ತೆರೆಗೆ ಬರೋದಿಲ್ಲ. 2026ಕ್ಕೆ ಕೆಡಿ ಮುಂದಕ್ಕೆ ಹೋಗಿದೆ. ಹಾಗಾದ್ರೆ ಕೆಡಿ ರಿಲೀಸ್ ಇಷ್ಟೊಂದು ತಡವಾಗ್ತಾ ಇರೋದ್ಯಾಕೆ..? ಇಲ್ಲಿದೆ ನೋಡಿ ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ. ಯೆಸ್ ಆಕ್ಷನ್ ಪ್ರಿನ್ಸ್ ಧ್ರುವ ಮತ್ತು ಶೋ ಮ್ಯಾನ್ ಪ್ರೇಮ್ ಕಾಂಬಿನೇಷನ್​​ನಲ್ಲಿ ಕೆಡಿ ಸಿನಿಮಾ ಸೆಟ್ಟೇರಿದಾಗ ಫ್ಯಾನ್ಸ್ ಫುಲ್ ಖುಷ್ ಆಗಿದ್ರು.

ಕೆಡಿ ಅನ್ನೋ ಮಾಸ್ ಟೈಟಲ್ ಜೊತೆಗೆ ಪ್ರೇಮ್-ಧ್ರುವ ಡೆಡ್ಲಿ ಕಾಂಬೋ.. ಈ ಜೋಡಿಯಿಂದ ಮೋಡಿ ಮಾಡುವಂಥಾ ಮಸ್ತ್ ಸಿನಿಮಾ ಬರುತ್ತೆ ಅಂತ ಫ್ಯಾನ್ಸ್ ಕಾದುಕುಳಿತಿದ್ರು. ಕೆಡಿ ಅನೌನ್ಸ್​ಮೆಂಟ್ ಟೀಸರ್ ನೋಡಿದವರು ವಾರೇವ್ಹಾ ಅಂದಿದ್ರು. ಆ ಬಳಿಕ ಕೆಡಿ ಅಡ್ಡಕ್ಕೆ ಒಬ್ಬೊಬ್ರೆ ಘಟಾನುಘಟಿಗಳು ಎಂಟ್ರಿ ಕೊಟ್ರು. ಬಾಲಿವುಡ್​ನಿಂದ ಸಂಜಯ್​ ದತ್, ಶಿಲ್ಪಾ ಶೆಟ್ಟಿ. ನಮ್ಮ ಸ್ಯಾಂಡಲ್​ವುಡ್ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಕೂಡ ಸಿನಿಮಾದಲ್ಲಿದ್ದಾರೆ. ಇದೆಲ್ಲದರ ಜೊತೆಗೆ ಕಿಚ್ಚ ಸುದೀಪ್ ಬೇರೆ ಕೆಮಿಯೋ ರೋಲ್ ಮಾಡಿದ್ದಾರೆ. ಸೋ ಇಂಥಾ ಮಲ್ಟಿಸ್ಟಾರರ್ ಮೂವಿ ಅದ್ಯಾವಾಗ ರಿಲೀಸ್ ಅಂತ ಫ್ಯಾನ್ಸ್  ಕಾದುಕುಳಿತಿದ್ದಾರೆ. ಶಿವ ಶಿವ ಸಾಂಗ್, ಟೀಸರ್ ಫ್ಯಾನ್ಸ್ ನಿರೀಕ್ಷೆಯನ್ನ ಹೆಚ್ಚು ಮಾಡಿವೆ. ಆದ್ರೆ ಆ ನಿರೀಕ್ಷೆ ತಣಿಸೋದಕ್ಕೆ ಸಿನಿಮಾ ಮಾತ್ರ ತೆರೆಗೆ ಬರ್ತಾ ಇಲ್ಲ.

ಕಳೆದ ಜುಲೈನಲ್ಲಿ ಕೆಡಿ ಟೀಮ್ ದೇಶದ ಪ್ರಮುಖ ನಗರಗಳಲ್ಲಿ ಇವೆಂಟ್ ಮಾಡಿ ಟೀಸರ್ ರಿಲೀಸ್ ಮಾಡಿತ್ತು. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ , ರಮೇಶ್ ಅರವಿಂದ್ ಕೂಡ ಪ್ರಮೋಷನ್​ನಲ್ಲಿ ಭಾಗಿಯಾಗಿದ್ರು. ಹೀಗೆ ಅದ್ದೂರಿ ಪಬ್ಲಿಸಿಟಿ ಶುರುಮಾಡಿದ್ದನ್ನ ನೋಡಿ ಕೆಡಿ ಸದ್ಯದಲ್ಲೇ ತೆರೆಗೆ ಬರಲಿದೆ ಅಂತ ಫ್ಯಾನ್ಸ್ ಖುಷ್ ಆಗಿದ್ರು. ದೀಪಾವಳಿಗೆ ಸಿನಿಮಾ ತೆರೆಗೆ ಬರುತ್ತೆ ಅನ್ನಲಾಗಿತ್ತು. ಆದ್ರೀಗ ದೀಪಾವಳಿಗೂ ಇಲ್ಲ, ಡಿಸೆಂಬರ್​ಗೂ ಇಲ್ಲ ಸಿನಿಮಾ ಮುಂದಿನ ವರ್ಷಕ್ಕೆ ಮುಂದಕ್ಕೆ ಹೋಗಿದೆ. 2022ರಲ್ಲಿ ಸೆಟ್ಟೇರಿದ ಸಿನಿಮಾ 2026ಕ್ಕೆ ಬರ್ತಾ ಇದೆ. ಅಲ್ಲಿಗೆ ಭರ್ತಿ 4 ವರ್ಷ. ಅಷ್ಟಕ್ಕೂ ಸಿನಿಮಾ ಇಷ್ಟು ತಡವಾಗೋದಕ್ಕೆ ಕಾರಣ ಏನು ಅಂತ ನೋಡಹೋದ್ರೆ ಅದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ.

ಹೌದು ಮೂಲಗಳ ಪ್ರಕಾರ ಕೆಡಿ ಟೀಂ ನಡುವೆ ಒಂದು ಕಿರಿಕ್ ಆಗಿದೆ. ಇತ್ತೀಚಿಗೆ ಧ್ರುವ ಬರ್ತ್​ಡೇ ಟೈಂನಲ್ಲಿ ಸಿನಿಮಾ ರಿಲೀಸ್ ಯಾವಾಗ ಅಂತ ಕೇಳಿದಾಗ ಅದನ್ನ ಪ್ರೇಮ್ ಬಳಿ ಕೇಳಿ ಅಂದಿದ್ರು ಧ್ರುವ. ಅಸಲಿಗೆ ಪ್ರೇಮ್​ಗೂ ಆ ಪ್ರಶ್ನೆಗೆ ಉತ್ತರ ಗೊತ್ತಿಲ್ಲ. ಅಸಲಿಗೆ ನಿರ್ದೇಶಕ ಪ್ರೇಮ್ ಮತ್ತು ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಮೇಲೆ ಕೆಲ ವಿಚಾರಗಳಲ್ಲಿ ಅಸಮಾಧಾನಗೊಂಡಿರೋ ನಿರ್ಮಾಪಕ ವೆಂಕಟ್,  ರಿಲೀಸ್ ವಿಷ್ಯದಲ್ಲಿ ಸೈಲೆಂಟ್ ಆಗಿದ್ದಾರಂತೆ. ಸೋ ಪ್ಯಾನ್ ಇಂಡಿಯಾ ಪ್ರಚಾರ ಶುರುಮಾಡಿದ ಕೆಡಿ ಟೀಂ ಮತ್ತೆ ಸೈಲೆಂಟ್ ಆಗಿದೆ. ಈ ಗೊಂದಲ ಬಗೆಹರಿಯದೇ ಸಿನಿಮಾ ರಿಲೀಸ್ ಆಗಲ್ಲ. ಆ ಗೊಂದಲ ಬಗೆಹರಿಯೋದು ಯಾವಾಗ ಯಾರಿಗೂ ಗೊತ್ತಿಲ್ಲ..! ಫ್ಯಾನ್ಸ್​​ ಕೆಡಿ ನೋಡೋ ಭಾಗ್ಯ ಯಾವಾಗ ಬರುತ್ತೋ ಗೊತ್ತಿಲ್ಲ..!

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more