ಆಗ ದೀಪಾ ಸನ್ನಿಧಿ.. ಈಗ 'ದಿ ಡೆವಿಲ್' ಪ್ರಚಾರಕ್ಕೆ ಸಜ್ಜಾಗುತ್ತಿರುವ ರಚನಾ ರೈ!

ಆಗ ದೀಪಾ ಸನ್ನಿಧಿ.. ಈಗ 'ದಿ ಡೆವಿಲ್' ಪ್ರಚಾರಕ್ಕೆ ಸಜ್ಜಾಗುತ್ತಿರುವ ರಚನಾ ರೈ!

Published : Oct 15, 2025, 12:25 PM IST

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್​ಗೆ ಎರಡೇ ತಿಂಗಳು ಬಾಕಿ ಇದೆ. ದರ್ಶನ್ ಸದ್ಯ ಜೈಲಿನಲ್ಲಿದ್ದು ಪ್ರಚಾರದಲ್ಲಿ ಭಾಗಿಯಾಗೋದು ಕೂಡ ಅಸಾಧ್ಯ. ಸೋ ನಾಯಕ ಇಲ್ಲದೇ ಸಿನಿಮಾ ಪ್ರಚಾರ ಮಾಡ್ಲಿಕ್ಕೆ ಡೆವಿಲ್ ಟೀಂ ಸಜ್ಜಾಗ್ತಾ ಇದೆ.

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್​ಗೆ ಎರಡೇ ತಿಂಗಳು ಬಾಕಿ ಇದೆ. ದರ್ಶನ್ ಸದ್ಯ ಜೈಲಿನಲ್ಲಿದ್ದು ಪ್ರಚಾರದಲ್ಲಿ ಭಾಗಿಯಾಗೋದು ಕೂಡ ಅಸಾಧ್ಯ. ಸೋ ನಾಯಕ ಇಲ್ಲದೇ ಸಿನಿಮಾ ಪ್ರಚಾರ ಮಾಡ್ಲಿಕ್ಕೆ ಡೆವಿಲ್ ಟೀಂ ಸಜ್ಜಾಗ್ತಾ ಇದೆ. ಅದ್ರಲ್ಲೂ ನಾಯಕಿ ರಚನಾ ರೈ ಮೇಲೆ ದೊಡ್ಡ ಭಾರ ಇದೆ. ಈ ಹಿಂದೆ ಸಾರಥಿ ರಿಲೀಸ್ ಟೈಂನಲ್ಲಿ ದೀಪಾ ಸನ್ನಿಧಿ ಇಂಥದ್ದೇ ಸನ್ನಿವೇಶ ಎದುರಿಸಿದ್ರು. ಈಗ ರಚನಾ ರೈ ಕೂಡ ಒಂದು ದೊಡ್ಡ ಸವಾಲು ಎದುರಿಸೋದಕ್ಕೆ ಸಜ್ಜಾಗಿದ್ದಾರೆ. ಯೆಸ್ ದರ್ಶನ್​ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್​ಗೆ ಇನ್ನು ಎರಡೇ ತಿಂಗಳು ಬಾಕಿ ಇದೆ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇದ್ರೆ ನೆಮ್ಮಿದಿಯಾಗ್ ಇರ್ಬೇಕ್ ಸಾಂಗ್ ನಂತರ ಒಂದೇ ಒಂದು ಸಲ ಅನ್ನೋ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು , ಸಿನಿಮಾ  ಹೇಗಿರುತ್ತೆ ಅನ್ನೋದರ ಸೂಚನೆ ನೀಡಿವೆ. ಸದ್ಯ ದರ್ಶನ್ ಜೈಲಿನಲ್ಲಿದ್ದು ಸಿನಿಮಾ ರಿಲೀಸ್ ಹೊತ್ತಿಗೆ ಹೊರಬರೋದು ಅಸಾಧ್ಯ.

ಪ್ರಚಾರಕ್ಕೂ ದರ್ಶನ್ ಬರೋದಕ್ಕೆ ಸಾಧ್ಯವಿಲ್ಲ. ಸೋ ಸಿನಿಮಾ ಟೀಂ ದಾಸನ ಅನುಪಸ್ಥಿತಿಯಲ್ಲೇ ಡೆವಿಲ್ ಪ್ರಚಾರ ಮಾಡ್ಲಿಕ್ಕೆ ಸಜ್ಜಾಗ್ತಾ ಇದೆ. ದಿ ಡೆವಿಲ್ ಬಳಿಕ ದರ್ಶನ್ ಯಾವ ಚಿತ್ರದಲ್ಲೂ ನಟಿಸಿಲ್ಲ. ಜೈಲಿಂದ ಹೊರಬಂದು ಮತ್ತೆ ಸಿನಿಮಾದಲ್ಲಿ ನಟಿಸೋದ್ಯಾವಾಗ..? ದರ್ಶನ್ ಮುಂದಿನ ಚಿತ್ರ ಬರೋದ್ಯಾವಾಗ ಗೊತ್ತಿಲ್ಲ. ಸದ್ಯದ ಮಟ್ಟಿಗೆ ಫ್ಯಾನ್ಸ್​ಗೆ ದಾಸನನ್ನ ಬಿಗ್ ಸ್ಕ್ರೀನ್ ಮೇಲೆ ಕೊನೆಯದಾಗಿ ನೋಡೋ ಅವಕಾಶ ಇರೋದು ದಿ ಡೆವಿಲ್ ಸಿನಿಮಾದಲ್ಲಿ ಮಾತ್ರ. ಹೌದು ದಿ ಡೆವಿಲ್​ನ ಎಲ್ಲರೂ ಸಾರಥಿ  ಜೊತೆಗೆ ಹೋಲಿಕೆ ಮಾಡ್ತಾ ಇದ್ದಾರೆ. ಅದು 2011ನೇ ಇಸವಿ ಸೆಪ್ಟೆಂಬರ್ 30ನೇ ತಾರೀಖು. ರಾಜ್ಯಾದ್ಯಂತ ದರ್ಶನ್ ನಟಿಸಿದ್ದ ಸಾರಥಿ ಸಿನಿಮಾ ರಿಲೀಸ್ ಆಗಿತ್ತು. ದರ್ಶನ್ ಆ ಚಿತ್ರದಲ್ಲಿ ಆಟೋ ಚಾಲಕನ ಪಾತ್ರ ಮಾಡಿದ್ರು. ದರ್ಶನ್ ಸೋದರ ದಿನಕರ್ ತೂಗುದೀಪ ಚಿತ್ರವನ್ನ ನಿರ್ದೇಶನ ಮಾಡಿದ್ರು.

ಆದ್ರೆ ಸಿನಿಮಾ ರಿಲೀಸ್ ಆಗೋ ಹೊತ್ತಲ್ಲಿ ಚಿತ್ರದ ನಾಯಕ ಮಾತ್ರ ಪರಪ್ಪನ ಅಗ್ರಹಾರದಲ್ಲಿದ್ದ. ಹೌದು ಸೆಪ್ಟೆಂಬರ್ 8 ನೇ ತಾರೀಖು ಪತ್ನಿ ವಿಜಯಲಕ್ಷ್ಮೀ ದಾಖಲಿಸಿದ್ದ ಕೇಸ್​ನಲ್ಲಿ ದರ್ಶನ್​ನ ಪೊಲೀಸರು ಅರೆಸ್ಟ್ ಮಾಡಿದ್ರು. ವರದಕ್ಷಿಣೆ ಕಿರುಕುಳ, ಮತ್ತು ಅಟೆಂಪ್ಟ್ ಟು ಮರ್ಡರ್​ ಕೇಸ್ ದಾಖಲಿಸಿ ದರ್ಶನ್​ನ ಜೈಲಿಗಟ್ಟಲಾಗಿತ್ತು. ಇತ್ತ ಸಾರಥಿ ರಿಲೀಸ್​ಗೆ ಮೊದಲೇ ತಯಾರಿ ನಡೆದುಹೋಗಿತ್ತು. ದರ್ಶನ್ ಜೈಲಿನಲ್ಲಿ ಇದ್ದಾಗಲೇ ಸಿನಿಮಾ ಹೊರಗೆ ಬಂದಿತ್ತು. ಯೆಸ್ ಆವತ್ತಿಗೆ ಸಾರಥಿ ಸಿನಿಮಾದಲ್ಲಿ ದರ್ಶನ್ ಜೊತೆಗೆ ನಾಯಕಿಯಾಗಿ  ನಟಿಸಿದ್ದು ನವನಟಿ ದೀಪಾ ಸನ್ನಿಧಿ. ಚಿಕ್ಕಮಗಳೂರ ಚೆಲುವೆ ದೀಪಾಗೆ ಅದು ಮೊದಲ ಸಿನಿಮಾ. ತನ್ನ ಮೊಟ್ಟ ಮೊದಲ ಸಿನಿಮಾ ದರ್ಶನ್ ಜೊತೆಗೆ ಅಂತ ಖುಷ್ ಆಗಿದ್ದ ಬೆಡಗಿಗೆ ರಿಲೀಸ್ ಹೊತ್ತಿಗೆ ಶಾಕ್ ಕಾದಿತ್ತು. ದರ್ಶನ್ ಜೈಲು ಸೇರಿದ್ದರಿಂದ ಒಂಟಿಯಾಗಿ ಪ್ರಚಾರ ಮಾಡಬೇಕಿತ್ತು. ನಿರ್ದೇಶಕ ದಿನಕರ್ ಜೊತೆಗೂಡಿ ಆವತ್ತು ದೀಪಾ ಸನ್ನಿಧಿ ಸಿನಿಮಾದ ಪಬ್ಲಿಸಿಟಿಯಲ್ಲಿ ಭಾಗಿಯಾಗಿದ್ರು.

ಅಚ್ಚರಿ ಅಂದ್ರೆ ಆವತ್ತು ಸಾರಥಿ ಸಿನಿಮಾ ಸೆಪ್ಟೆಂಬರ್ 30ಕ್ಕೆ ತೆರೆಗೆ ಬಂದ್ರೆ ಅದರ ಮರುವಾರ ಕೂಡ ದೀಪಾನೇ ನಾಯಕಿಯಾಗಿದ್ದ ಪರಮಾತ್ಮ ಸಿನಿಮಾ ರಿಲೀಸ್ ಆಗೋದಿತ್ತು. ಸೋ ಎರಡೂ ಸಿನಿಮಾಗೂ ದೀಪಾ ಪ್ರಚಾರ ಮಾಡಿದ್ರು. ಮುಂದೆ ಸಾರಥಿ ಸಿನಿಮಾ ಬ್ಲಾಕ್ ಬಸ್ಟರ್ ಅನ್ನಿಸಿಕೊಳ್ತು. ನಾಯಕ ಜೈಲಲ್ಲಿ ಇದ್ದರೂ ಸಿನಿಮಾವನ್ನ ಜನ ಕೈ ಬಿಡಲಿಲ್ಲ. ಯೆಸ್ ಆವತ್ತು ದೀಪಾ ಸನ್ನಿಧಿ ಎದುರಿಸಿದಂಥದ್ದೇ ಸನ್ನಿವೇಶವನ್ನ ಇವತ್ತು ರಚನಾ ರೈ ಎದುರಿಸ್ತಾ ಇದ್ದಾರೆ. ನಾಯಕನ ಅನುಪಸ್ಥಿತಿಯಲ್ಲಿ ಸಿನಿಮಾದ ಪಬ್ಲಿಸಿಟಿ ಜವಾಬ್ದಾರಿಯನ್ನ ರಚನಾ ಹೊತ್ತುಕೊಳ್ಳಬೇಕಿದೆ. ದೀಪಾಗೆ ಕಂಪೇರ್ ಮಾಡಿದ್ರೆ ರಚನಾ ರೈ ಕೊಂಚ ಅನುಭವಿ.  ರೂಪೇಶ್ ಶೆಟ್ಟಿ ನಟನೆಯ ಸರ್ಕಸ್ ಅನ್ನೋ  ತುಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ದುನಿಯಾಗೆ ಎಂಟ್ರಿ ಕೊಟ್ಟಿರೋ ಈ ಬೆಡಗಿ ಧನ್ವೀರ್  ಅಭಿನಯದ 'ವಾಮನ' ಸಿನಿಮಾದಲ್ಲೂ ನಟನೆ ಮಾಡಿದ್ರು.

ಅಲ್ಲಿಗೆ ದಿ ಡೆವಿಲ್ ರಚನಾ ನಟನೆಯ ಮೂರನೇ ಸಿನಿಮಾ. ದರ್ಶನ್ ಜೊತೆ ನಟಿಸೋ ಮೂಲಕ ಸ್ಯಾಂಡಲ್​ವುಡ್ ಕ್ವೀನ್ ಆಗೋ ತಯಾರಿಯಲ್ಲಿದ್ದ ಈ ಚೆಲುವೆಗೆ ದರ್ಶನ್ ಅರೆಸ್ಟ್ ಆಗಿದ್ದು ಆಘಾತ ತಂದಿತ್ತು. ಆದರೇನಂತೆ ಸಿನಿಮಾ ಕಂಪ್ಲೀಟ್ ಆಗಿದೆ. ಆಗ ಸನ್ನಿಧಿ ಮಾಡಿದಂತೆ ತಾನೂ ಒಬ್ಬಂಟಿ ಪ್ರಚಾರ ಮಾಡ್ತಿನಿ ಅಂತ ಈ ನಟಿ ತಯಾರಾಗಿ ನಿಂತಿದ್ದಾರೆ. ಸದ್ಯ ರಿಲೀಸ್ ಆಗಿರೋ ಒಂದೇ ಒಂದು ಸಲ ಹಾಡಲ್ಲಿ ರಚನಾ ರೈ ಗ್ಲಾಮರ್ ಅವತಾರ ನೋಡಿದ ಹುಡುಗರು , ಈಕೆನೇ ನಮ್ಮ ಹೊಸ ಕ್ರಶ್ಶು ಅಂತಿದ್ದಾರೆ. ರಚನಾ - ದರ್ಶನ್ ಕೆಮೆಸ್ಟ್ರಿ ಈ ಹಾಡಲ್ಲಿ ಮಸ್ತ್ ಆಗಿ ವರ್ಕ್ ಆಗಿದೆ. ಒಟ್ಟಾರೆ ಕರಾವಳಿ ಚೆಲುವೆ ರಚನಾ ಎದುರು ಒಂದು ದೊಡ್ಡ ಸವಾಲ್ ಇದೆ. ಆಗ ದೀಪಾ ಸನ್ನಿಧಿ ಸಾರಥಿಗೆ ಸಾಥ್ ಕೊಟ್ಟಂತೆ, ಡೆವಿಲ್​ ಜೊತೆ ಡೇರ್ ಡೆವಿಲ್ ಆಗಿ ನಿಂತು ಗೆಲ್ಲಿಸೋ ಪಣ ತೊಟ್ಟಿದ್ದಾರೆ ರಚನಾ. 

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
Read more