Darshan: ಜೈಲಿನಲ್ಲಿ ಬಯಲಾಯ್ತು ದರ್ಶನ್ ವಿಗ್ ಸ್ಟೋರಿ! 'ಶಿವಾಜಿ' ಲುಕ್‌ನಲ್ಲಿ  ಮೊಟ್ಟೆ ಬಾಸ್ ಆದ ನಟ ?

Darshan: ಜೈಲಿನಲ್ಲಿ ಬಯಲಾಯ್ತು ದರ್ಶನ್ ವಿಗ್ ಸ್ಟೋರಿ! 'ಶಿವಾಜಿ' ಲುಕ್‌ನಲ್ಲಿ ಮೊಟ್ಟೆ ಬಾಸ್ ಆದ ನಟ ?

Published : Jul 17, 2024, 09:09 AM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿರುವ ದರ್ಶನ್ ಈಗಾಗಲೇ 1 ತಿಂಗಳಿಂದ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ. ಜೈಲೂಟ ಸೇರದೆ ನಿದ್ದೆ ಬಾರದೆ ಏಕಾಂಗಿಯಾಗಿ ಒದ್ದಾಡುತ್ತಿದ್ದಾರೆ.

ದರ್ಶನ್‌ರನ್ನು ಇಲ್ಲಿಯವರೆಗೆ ಮೂರ್ನಾಲ್ಕು ಬಾರಿ ಜೈಲಲ್ಲಿ ಭೇಟಿಯಾಗಿರೋ ವಿಜಯಲಕ್ಷ್ಮೀ ದರ್ಶನ್(Vijayalakshmi) ಈಗ ಮತ್ತೊಮ್ಮೆ ಭೇಟಿಯಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ(Parappana Agrahara) ದರ್ಶನ್‌ರನ್ನು ಭೇಟಿಯಾಗಿರೋ ವಿಜಯಲಕ್ಷ್ಮಿ ದರ್ಶನ್‌ಗೆ(Darshan) ಜಾಮೀನು ಸಿಗುವುದು ಸದ್ಯ ಬಹಳ ಕಷ್ಟ ಎಂದಿದ್ದಾರಂತೆ. ಇದು ದರ್ಶನ್ ನುಂಗಲಾರದ ತುತ್ತಾಗಿದೆ. ಲಾಯರ್‌ನ ಬದಲಿಸ್ತೀಯೋ.. ಕೋಟಿ ಕೋಟಿ ಹಣ ಅವರಿಗೆ ಕೊಡ್ತೀಯೋ ಒಟ್ಟಿನಲ್ಲಿ ನಾನು ಆಚೆ ಬರಬೇಕಷ್ಟೆ. ಬೇಗ ಜಾಮೀನು(Bail) ಸಿಗುವಂತೆ ಮಾಡು ಎಂದು  ಪತ್ನಿಯ ಮೇಲೆ ಒತ್ತಡ ಹೇರುತ್ತಿದ್ದಾರಂತೆ ದರ್ಶನ್. ದರ್ಶನ್ ಹೊಡೆದಾಗ ಹೊಡೆಸಿಕೊಂಡು, ನಟಿಯರ ಜೊತೆ ಅಫೇರ್ ಇಟ್ಟುಕೊಂಡಾಗಲೂ ಸಹಿಸಿಕೊಂಡು, ದರ್ಶನ್‌ಗೆ ಅಪಘಾತವಾದಾಗಲೂ ಆಸ್ಪತ್ರೆಗೆ ಹೋಗಿ ಅವರನ್ನು ನೋಡಿಕೊಂಡು ಒಬ್ಬ ಧರ್ಮ ಪತ್ನಿ ಎಷ್ಟೆಲ್ಲಾ ಸಹಿಸಿಕೊಳ್ಳಬಹುದೊ ಅಷ್ಟೂ ಮಾಡುತ್ತಾ ಇದೀಗ ಪವಿತ್ರ ಗೌಡಗಾಗಿ ಕೊಲೆಗೆ ಸಂಚು ರೂಪಿಸಿ ಜೈಲಿಗೆ ಹೋದಾಗಲೂ ಪತಿಯನ್ನು ಕಾಪಾಡಿಕೊಳ್ಳಲು ವಿಜಯಲಕ್ಮೀ ದರ್ಶನ್ ತನ್ನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ದರ್ಶನ್ನನ್ನು ಜೈಲಿಂದ ಬಿಡಿಸಲು ಎಷ್ಟೆ ಪ್ರಯತ್ನ ಪಟ್ಟರು ಎಲ್ಲ ಕಡೆಯಿಂದಲೂ ಹಿನ್ನಡೆಯಾಗುತ್ತಿರುವ ಬಗ್ಗೆ ವಿಜಯಲಕ್ಮಿ ದರ್ಶನ್ಗೆ ತಿಳಿಸಿದಾಗ ದರ್ಶನ್ ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಜೈಲಿನಲ್ಲಿ ದರ್ಶನ್ ದರ್ಪ, ದೌಲತ್ತಿಗೆ ಲಗಾಮು ಬಿದ್ದಿದೆ. ಇದೀಗ ಅವರ ಕೃತಕ ಕೂದಲಿಗೂ ಕತ್ತರಿ ಬಿದ್ದಿದೆ ಎನ್ನುವಂತಹ ಸಂಗತಿ ತಿಳಿದು ಬಂದಿದೆ. ಇದರಿಂದ ದರ್ಶನ್ ವಿಗ್ ಸ್ಟೋರಿ ಗೊತ್ತಿಲ್ಲದವರಿಗೂ ತಿಳಿಯುವಂತಾಗಿದೆ. ತುಂಬಾ ಜನರಿಗೆ ಗೊತ್ತಿಲ್ಲದ ವಿಚಾರ ಅಂದರೆ ದರ್ಶನ್ ತಲೆ ಕೂದಲು ವರ್ಜಿನಲ್ ಅಲ್ಲ ಅನ್ನೋದು. 

ಇದನ್ನೂ ವೀಕ್ಷಿಸಿ:  ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಮನವಿಗೆ ಪೊಲೀಸರ ನಿರ್ಧಾರ.. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಮನವಿ ಮಾಡುವ ಸಾಧ್ಯತೆ

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!