ದೇವರ ನಾಡಿನಲ್ಲಿ ದರ್ಶನ್ ಭಕ್ತಿಭಾವ: ದಾಸನ ದಿಢೀರ್ ಭಕ್ತಿಗೆ ಇದೇ ಕಾರಣ?

ದೇವರ ನಾಡಿನಲ್ಲಿ ದರ್ಶನ್ ಭಕ್ತಿಭಾವ: ದಾಸನ ದಿಢೀರ್ ಭಕ್ತಿಗೆ ಇದೇ ಕಾರಣ?

Published : Jun 20, 2025, 11:02 AM IST

ಅಷ್ಟಕ್ಕೂ ದರ್ಶನ್ ಭೇಟಿ ಕೊಟ್ಟಿದ್ದು ಸಾಮಾನ್ಯ ದೇಗುಲಗಳಿಗೆ ಅಲ್ಲವೇ ಅಲ್ಲ. ಈ ಹಿಂದೆ ದರ್ಶನ್ ಹೋಗಿದ್ದ ಮಾಡಾಯಿಕಾವು ಭಗವತಿ ದೇಗುಲ ಶತ್ರಸಂಹಾರ ಪೂಜೆಗೆ ಫೇಮಸ್.

ದರ್ಶನ್ ಜಾಮೀನು ಸಿಕ್ಕು ಹೊರಬಂದ ನಂತರ ಸಿಕ್ಕಾಪಟ್ಟೆ  ದೈವಭಕ್ತನಾಗಿ ಬದಲಾಗಿದ್ದಾರೆ. ಅದ್ರಲ್ಲೂ ದೇವರ ನಾಡು ಕೇರಳದ ಪ್ರಸಿದ್ದ ದೇಗುಲಗಳಿಗೆ ಪದೇ ಪದೇ ಭೇಟಿ ಕೊಡ್ತಾ ಇದ್ದಾರೆ. ಹಿಂದೆ ಭದ್ರಕಾಳಿ ಸನ್ನಿಧಿಗೆ ಹೋದವರು ಈಗ ಮಹಾದೇವನ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ದಾಸನ ಈ ದಿಢೀರ್ ಭಕ್ತಿಭಾವದ ಹಿಂದಿನ ರಹಸ್ಯ ಏನು..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ದರ್ಶನ್ ಕಳೆದ ಮಾರ್ಚ್​ ತಿಂಗಳಲ್ಲಿ ಕೇರಳದ ಮಾಡಾಯಿಕಾವು ಭಗವತಿ ಸನ್ನಿಧಾನಕ್ಕೆ ಹೋಗಿದ್ರು. ಇದೀಗ ಕೇರಳದ ಮತ್ತೊಂದು ಪ್ರಸಿದ್ದ ದೇಗುಲ ಕೊಟ್ಟಿಯೂರು ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಸುರಿಯುವ ಮಳೆಯ ನಡೆವೆ ದಟ್ಟ ಕಾಡಿನಲ್ಲಿರೋ ದೇಗುಲಕ್ಕೆ ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ಅಸಲಿಗೆ ಹೀಗೆ ದೇವರ ನಾಡಿನ ಪ್ರಸಿದ್ದ ದೇಗುಲಗಳಿಗೆ ದರ್ಶನ್ ಅಲೆಯುತ್ತಾ ಇರೋದ್ರ ಹಿಂದೆ ಖ್ಯಾತ ಜ್ಯೋತಿಷಿಯೊಬ್ಬರ ಸಲಹೆ ಇದೆಯಂತೆ.

ಅಷ್ಟಕ್ಕೂ ದರ್ಶನ್ ಭೇಟಿ ಕೊಟ್ಟಿದ್ದು ಸಾಮಾನ್ಯ ದೇಗುಲಗಳಿಗೆ ಅಲ್ಲವೇ ಅಲ್ಲ. ಈ ಹಿಂದೆ ದರ್ಶನ್ ಹೋಗಿದ್ದ ಮಾಡಾಯಿಕಾವು ಭಗವತಿ ದೇಗುಲ ಶತ್ರಸಂಹಾರ ಪೂಜೆಗೆ ಫೇಮಸ್. ಮಾಡಾಯಿಕಾವು ದೇವಸ್ಥಾನ ಅಥವಾ ತಿರುವರ್ಕಾಡು ಭಗವತಿ ದೇವಸ್ಥಾನ ಅಂತ  ಕರೆಯಲ್ಪಡುವ ಇದು ಕೇರಳದ ಒಂದು ಪ್ರಾಚೀನ ಶಕ್ತಿ ದೇವಾಲಯವಾಗಿದ್ದು, ಕಣ್ಣೂರಿನ ಪಳಯಂಗಡಿ ಬಳಿ ಇದೆ. ಮಡಾಯಿಕ್ಕಾವು ದೇವಸ್ಥಾನ ಭದ್ರಕಾಳಿಯ ಉಗ್ರ ರೂಪವನ್ನು ಹೊಂದಿದೆ. ಉತ್ತರ ಕೇರಳದ ಭದ್ರಕಾಳಿ ದೇವಾಲಯಗಳ 'ತಾಯಿ ದೇವಾಲಯ' ಅಂತ ಇದನ್ನ  ಪರಿಗಣಿಸಲಾಗಿದೆ. ದೇವಾಲಯ ಸಂಕೀರ್ಣದಲ್ಲಿ ಶಿವ, ಸಪ್ತ ಮಾತೃಕ, ಗಣಪತಿ, ವೀರಭದ್ರ, ಕ್ಷೇತ್ರಪಾಲ ಮತ್ತು ಶಾಸ್ತವು ದೇವತೆಗಳು ಇದ್ದಾರೆ. ಸ್ಥಳೀಯ ಜಾನಪದ ಕಥೆಗಳ ಪ್ರಕಾರ, ಈ ದೇವಾಲಯವು ಮಾಟಮಂತ್ರ ಮತ್ತು ಅತೀಂದ್ರಿಯ ಕ್ರಮ ತೆಗೆದುಹಾಕಲು ಆಶ್ರಯ ನೀಡುವ ತಾಣವಾಗಿದೆ.

ಇಲ್ಲಿ ಅನೇಕ ರಾಜಕಾರಣಿಗಳು ಬಂದು ಶತ್ರಸಂಹಾರ ಪೂಜೆ ಮಾಡಿಸಿದ್ದಾರೆ. ಇಂಥಾ ಶಕ್ತಿಸ್ಥಳದಲ್ಲಿ ದರ್ಶನ್ ಕೂಡ ಸಂಕಷ್ಟ ಪರಿಹಾರಕ್ಕಾಗಿ ಪೂಜೆ ಸಲ್ಲಿಸಿದ್ದಾರೆ. ಇನ್ನೂ ನಿನ್ನೆ ದರ್ಶನ್ ಹೋಗಿರುವ ಕಣ್ಣೂರಿನ ಕೊಟ್ಟಿಯೂರು   ಮಹಾದೇವ ದೇಗುಲ ಕೂಡ ಬಹಳಾನೇ ವಿಶೇಷವಾದದ್ದು.  ದಕ್ಷರಾಜ ಯಾಗವನ್ನ ಮಾಡಿದ ಜಾಗ ಇದುವೇ ಅಂತ ಹೇಳಲಾಗುತ್ತೆ. ಈ 'ಕೊಟ್ಟಿಯೂರು'   ಹೆಸರು 'ಕತ್ತಿ-ಯೂರ್' ಅನ್ನೋ ಪದದಿಂದ ಬಂದಿದೆ., ಈ ದೇವಾಲಯದ ಶಿವಲಿಂಗವು ಸ್ವಯಂಭು  ಲಿಂಗವಾಗಿದ್ದು ಇಲ್ಲಿ ಪೂಜೆ ಮಾಡಿದ್ರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಅನ್ನೋ ನಂಬಿಕೆ ಇದೆ. ಸದ್ಯ ಕೊಟ್ಟಿಯೂರು ದೇಗುಲದಲ್ಲಿ ವೈಶಾಖ ಮಹೋತ್ಸವ ನಡೀತಾ ಇದ್ದು,  ಜೂನ್ 8 ರಿಂದ ಜುಲೈ 4 ರವರೆಗೆ ಈ ದೇವಸ್ಥಾನ ಭಕ್ತರಿಗಾಗಿ ತೆರೆದಿದೆ. ಈ ಇಪ್ಪತ್ತೆಂಟು ದಿನಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ಕೊಡ್ತಾರೆ.

ದರ್ಶನ್ ಕೂಡ ಇದೇ ಸಮಯದಲ್ಲಿ ಕೊಟ್ಟಿಯೂರಿಗೆ ಭೇಟಿ ಕೊಟ್ಟು ಶಿವನ ದರ್ಶನ ಪಡೆದಿದ್ದಾರೆ. ಸಂಕಟ ಬಂದಾಗ ವೆಂಕಟ ರಮಣನ ಜಪ ಮಾಡೋದು ಸಹಜ, ಸದ್ಯ ದರ್ಶನ್​ರ ಭಕ್ತಿಯ ಹಿಂದಿರೋದು ಕೂಡ ಅದೇ ಕಾರಣ. ದರ್ಶನ್ ಗೆ ಮಂಗಳೂರು ಮೂಲದ ಜ್ಯೋತಿಷಿಯೊಬ್ಬರು ನಿಮ್ಮ ಕಷ್ಟಗಳ ಪರಿಹಾರ ಆಗಬೇಕು ಅಂದ್ರೆ ಇಂತಿಂಥಾ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಅಂತ ಸಲಹೆ ಕೊಟ್ಟಿದ್ದಾರಂತೆ. ಸದ್ಯ ತನ್ನ ಮೇಲೆ ಬಂದಿರೋ ಆರೋಪಗಳು, ಬೆನ್ನು ಬಿದ್ದಿರೋ ಕಾನೂನು ಕಂಟಕಗಳಿಂದ ಹೊರಬರಬೇಕು ಅಂತ ದರ್ಶನ್ ಈ ಸೂಚನೆಗಳನ್ನೆಲ್ಲಾ ಪಾಲಿಸ್ತಾ ಇದ್ದಾರೆ. ದರ್ಶನ್ ಏನೂ ನಾಸ್ತಿಕನಲ್ಲ. ಹಾಗಂತ ತೀರಾ ಪದೇ ಪದೇ ದೇಗುಲಗಳಿಗೆ ಹೋಗ್ತಾ ಅತಿಯಾದ ಭಕ್ತಿಯನ್ನೂ ಪ್ರದರ್ಶನ ಮಾಡ್ತಾ ಇರಲಿಲ್ಲ. ಆದರೆ ಸದ್ಯ ದರ್ಶನ್ ಇರೋ ಸ್ಥಿತಿ ಹೇಗಿದೆ ಅಂದ್ರೆ ಯಾರೇನೇ ಸಲಹೆ ಕೊಟ್ರೂ ಭಕ್ತಭಾವದಿಮದ ಪಾಲಿಸ್ತಾರೆ. ಸೋ ಮತ್ತೆ ಮತ್ತೆ ದರ್ಶನ್ ದೇವರ ನಾಡಿನ ದೈವ ಸ್ಥಾನಗಳಿಗೆ ಹೋಗ್ತಾ ಇರೋದ್ರ ಹಿಂದಿರೋದು ಇದೇ ಕಾರಣ.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more