
ದಿ ಡೆವಿಲ್ ಮೂವಿ ರಿಲೀಸ್ಗೆ ಇನ್ನೊಂದೇ ವಾರ ಬಾಕಿ. ಸಿನಿಮಾದ ರಿಲೀಸ್ಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿರೋ ಡೆವಿಲ್ ಟೀಂ, ಸಿನಿಮಾದ ಬಗ್ಗೆ, ದರ್ಶನ್ ಜೈಲು ಸೇರಿರೋದ್ರಿಂದ ಆಗಿರೋ ತೊಂದರೆಗಳ ಬಗ್ಗೆ, ಮುಂದಿನ ಪ್ಲಾನ್ ಗಳ ಬಗ್ಗೆ ಒಂದಿಷ್ಟು ವಿಷ್ಯ ಹಂಚಿಕೊಂಡಿದೆ. ಏನದು ಡೆವಿಲ್ ಡಂಗೂರ? ಈ ಸ್ಟೋರಿ ನೋಡಿ..
ದಿ ಡೆವಿಲ್ ಮೂವಿ (The Devil) ರಿಲೀಸ್ಗೆ ಇನ್ನೊಂದೇ ವಾರ ಬಾಕಿ. ಸಿನಿಮಾದ ರಿಲೀಸ್ಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿರೋ ಡೆವಿಲ್ ಟೀಂ, ಸಿನಿಮಾದ ಬಗ್ಗೆ, ದರ್ಶನ್ (Darshan Thoogudeepa) ಜೈಲು ಸೇರಿರೋದ್ರಿಂದ ಆಗಿರೋ ತೊಂದರೆಗಳ ಬಗ್ಗೆ, ಮುಂದಿನ ಪ್ಲಾನ್ ಗಳ ಬಗ್ಗೆ ಒಂದಿಷ್ಟು ವಿಷ್ಯ ಹಂಚಿಕೊಂಡಿದೆ. ಏನದು ಡೆವಿಲ್ ಡಂಗೂರ ನೋಡೋಣ ಬನ್ನಿ.
7 ವರ್ಷಗಳ ಕನಸು.. 2 ವರ್ಷಗಳ ಹೋರಾಟ; ಕೊನೆಗೂ ಫ್ಯಾನ್ಸ್ ಎದುರು ದಿ ಡೆವಿಲ್ ಎಂಟ್ರಿ..!
ಯೆಸ್ ದಿ ಡೆವಿಲ್ ಸಿನಿಮಾ ಇದೇ ಡಿಸೆಂಬರ್ 11ಕ್ಕೆ ತೆರೆಗೆ ಬರ್ತಾ ಇದೆ. ಚಿತ್ರದ ನಾಯಕ ನಟ ದರ್ಶನ್ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಅವರ ಅನುಸ್ಥಿತಿಯಲ್ಲೇ ಚಿತ್ರ ರಿಲೀಸ್ ಮಾಡಬೇಕಿದೆ ಚಿತ್ರತಂಡ. ಚಿತ್ರ ಸೆಟ್ಟೇರಿದ ಮೇಲೆ ಮೊದಲ ಬಾರಿ ಮಾಧ್ಯಮಗಳ ಎದುರು ಬಂದ ಡೆವಿಲ್ ಟೀಂ, ತನ್ನ ಕಷ್ಟ, ನಷ್ಟ, ನೋವು, ನಲಿವುಗಳ ಹೋರಾಟದ ಜರ್ನಿ ತೆರೆದಿಟ್ಟಿದೆ.
2017ರಲ್ಲಿ ನಿರ್ದೇಶಕ ಪ್ರಕಾಶ್ ದರ್ಶನ್ ಜೊತೆಗೆ ತಾರಕ್ ಚಿತ್ರ ಮಾಡಿದ್ರು. ಅದರ ಮರುವರ್ಷವೇ ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆದ್ರೆ ನಾನಾ ಅಡ್ಡಿಗಳು ಬಂದು ಕೊನೆಗೆ ಈಗ 7 ವರ್ಷಗಳ ಬಳಿಕ ಇಬ್ಬರ ಕಾಂಬಿನೇಷನ್ನಲ್ಲಿ ಡೆವಿಲ್ ಬರ್ತಾ ಇದೆ.
ಟೈಟಲ್ ನೆಗೆಟಿವ್ ಅಲ್ಲ.. ಕಷ್ಟಕ್ಕೆ ಕಾರಣ ಅದಲ್ಲ..!
ಚಿತ್ರಕ್ಕೆದುರಾದ ತೊಂದರೆಗಳು, ನಾಯಕನಟನಿಗೆ ಬಂದ ಸಮಸ್ಯೆಗಳಿಗೆಲ್ಲಾ ಟೈಟಲ್ ಕಾರಣ ಅಲ್ಲ. ಅದು ಕಥೆಗೆ ಪೂರಕ ಅಂತ ಇಟ್ಟಿದ್ದೀವಿ ಅಂತಾರೆ ನಿರ್ದೇಶಕ ಕಂ ನಿರ್ಮಾಪಕ ಪ್ರಕಾಶ್. ಇನ್ನೂ ದರ್ಶನ್ ಅದೆಷ್ಟೇ ಒತ್ತಡ, ಸಮಸ್ಯೆಯಲ್ಲಿ ಸಿಲುಕಿದ್ರೂ ಅದ್ರಿಂದ ಚಿತ್ರಕ್ಕೇನೂ ಸಮಸ್ಯೆ ಆಗಿಲ್ಲ ಅಂತಾರೆ.
ದರ್ಶನ್ ಇಲ್ಲ ಅನ್ನುವ ಬೇಸರ.. ಕುಟುಂಬದ ಆಸರೆ..!
ಹೌದು ದರ್ಶನ್ ಜೊತೆಗಿಲ್ಲ ಅನ್ನೋದು ನೋವಿನ ಸಂಗತಿ. ಆದ್ರೆ ಅವರ ಪತ್ನಿ ವಿಜಯಲಕ್ಷ್ಮೀ, ಸೋದರ ದಿನಕರ್ ಸಿನಿಮಾಗೆ ಸಪೋರ್ಟ್ ಮಾಡ್ತಿದ್ದಾರೆ. ಜೊತೆಗೆ ಫ್ಯಾನ್ಸ್ ಬೆಂಬಲ ಇದೆ ಅಂತಾರೆ ಪ್ರಕಾಶ್.
‘ನೆಮ್ಮದಿ’ ಪದ ವೈರಲ್ ವಿಷ್ಯ ಗೊತ್ತೇ ಇರಲಿಲ್ಲ..!
ಸಿನಿಮಾದಲ್ಲಿ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅನ್ನೋ ಸಾಂಗ್ ಇರೋದು ಗೊತ್ತೇ ಇದೆ. ದರ್ಶನ್ ರ ವೈರಲ್ ಆದ ಆಡಿಯೊವೊಂದರಿಂದ ಆ ಪದ ಎತ್ತಿಕೊಂಡಿದ್ದು ಅಂತ ಫ್ಯಾನ್ಸ್ ಅಂದುಕೊಂಡಿದ್ದಾರೆ. ಆದ್ರೆ ಆ ವಿಚಾರ ಗೊತ್ತಿರಲಿಲ್ಲ. ಸಂದರ್ಭಕ್ಕೆ ಹೊಂದಿಕೆಯಾಗುವ ಲಿರಿಕ್ಸ್ ಅದು ಅಂತಾರೆ ನಿರ್ದೇಶಕರು.
ಇನ್ನು, ದರ್ಶನ್ ಸದ್ಯಕ್ಕೆ ರಿಲೀಸ್ ಆಗೋ ಸಾಧ್ಯತೆ ಅಂತೂ ಇಲ್ಲ. ಆದ್ರೆ ರಿಲೀಸ್ಅಪ್ಡೇಟ್ ಅವರಿಗೆ ಗೊತ್ತಿದೆ. ಅರ್ಧ ನೋವು, ಅರ್ಧ ಖುಷಿಯಲ್ಲಿ ಸಿನಿಮಾ ಬಿಡುಗಡೆ ಮಾಡೋದಕ್ಕೆ ಹೊರಟಿದೆ ಚಿತ್ರತಂಡ. ಜೈ ಮಾತಾ ಕಂಬೈನ್ಸ್ನಿಂದಲೇ ಸಿನಿಮಾ ರಿಲೀಸ್ ಮಾಡಲಾಗ್ತಾ ಇದ್ದು, ಡಿಸೆಂಬರ್ 11ರಂದು ಬೆಳಗಿನ 06.30ರಿಂದಲೇ ಚಿತ್ರಮಂದಿರಗಳಲ್ಲಿ ಡೆವಿಲ್ ಆಟ ಶುರುವಾಗಲಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..