ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?

ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?

Published : Dec 10, 2025, 05:46 PM IST

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್​​ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಗುರುವಾರ ಬೆಳ್ಳಂ ಬೆಳಿಗ್ಗೆ ರಾಜ್ಯಾದ್ಯಂತ ಸಿನಿಮಾದ ಪ್ರದರ್ಶನ ಶುರುವಾಗಲಿದೆ. ಬೆಳಗಿನ 6 ರಿಂದ ಶೋಗಳು ಆರಂಭ ಅಗಲಿದ್ದು ಈಗಾಗ್ಲೇ ಬೆಳಗಿನ ಆಟ ಗಳ ಟಿಕೆಟ್ಸ್​​ಗಳೆಲ್ಲಾ ಸೇಲ್ ಆಗಿವೆ.

ದರ್ಶನ್ (Darshan Thoogudeepa) ನಟನೆಯ ದಿ ಡೆವಿಲ್ (The Devil) ಮೂವಿ ರಿಲೀಸ್ ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಗುರುವಾರ ಬೆಳ್ಳಂ ಬೆಳಿಗ್ಗೆಯಿಂದಲೇ ಡೆವಿಲ್ ಶೋಗಳು ಶುರುವಾಗಲಿವೆ. ಈಗಾಗ್ಲೇ ಡೆವಿಲ್ ಅಡ್ವಾನ್ಸ್ ಬುಕ್ಕಿಂಗ್ ಹವಾ ಜೋರಾಗಿದೆ. ದರ್ಶನ್ ಜೈಲಿನಲ್ಲಿರೋವಾಗಲೇ ಬರ್ತಾ ಇರೋ ಡೆವಿಲ್ ಮತ್ತೊಂದು ಸಾರಥಿ ಆಗಲಿದೆಯಾ..? ಏನಾಗಲಿದೆ ಡೆವಿಲ್ ಭವಿಷ್ಯ.. ನೋಡೋಣ ಬನ್ನಿ.

‘ದಿ ಡೆವಿಲ್’ ರಿಲೀಸ್​​ಗೆ ಕೌಂಟ್ ಡೌನ್ ಸ್ಟಾರ್ಟ್; ಗುರುವಾರ ಬೆಳ್ಳಂಬೆಳಿಗ್ಗೆ ಫ್ಯಾನ್ಸ್​ಗೆ ದಾಸನ ದರ್ಶನ
ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್​​ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಗುರುವಾರ ಬೆಳ್ಳಂ ಬೆಳಿಗ್ಗೆ ರಾಜ್ಯಾದ್ಯಂತ ಸಿನಿಮಾದ ಪ್ರದರ್ಶನ ಶುರುವಾಗಲಿದೆ. ಬೆಳಗಿನ 6 ರಿಂದ ಶೋಗಳು ಆರಂಭ ಅಗಲಿದ್ದು ಈಗಾಗ್ಲೇ ಬೆಳಗಿನ ಆಟ ಗಳ ಟಿಕೆಟ್ಸ್​​ಗಳೆಲ್ಲಾ ಸೇಲ್ ಆಗಿವೆ.

ಡೆವಿಲ್ ಟ್ರೈಲರ್ ನೋಡ್ತಾ ಇದ್ರೆ ಇದೊಂದು ಮಾಸ್ ಮಸಾಲ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಅದ್ರಲ್ಲೂ ದರ್ಶನ್ ಸಖತ್ ಸ್ಟೈಲಿಶ್ ಅವತಾರದಲ್ಲಿ ಮಿಂಚಿದ್ದಾರೆ. ಈ ಹಿಂದೆ ದರ್ಶನ್​ ಜೊತೆಗೆ ತಾರಕ್ ಸಿನಿಮಾ ಮಾಡಿದ್ದ ಪ್ರಕಾಶ್ ವೀರ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.

2 ವರ್ಷಗಳ ಬಳಿಕ ಬಿಗ್​ಸ್ಕ್ರೀನ್ ಮೇಲೆ ದರ್ಶನ್
ದರ್ಶನ್ ನಟನೆಯ ಹಿಂದಿನ ಸಿನಿಮಾ ತೆರೆಗೆ ಬಂದಿದ್ದು, 2023ರ ಡಿಸೆಂಬರ್​ನಲ್ಲಿ. 29 ಡಿಸೆಂಬರ್ 2023ರಂದು ಕಾಟೇರ ತೆರೆಗೆ ಬಂದಿತ್ತು. ದರ್ಶನ್ ಕರೀಯರ್​ನಲ್ಲೇ ದೊಡ್ಡ ಹಿಟ್ ಅನ್ನಿಸಿಕೊಂಡಿದ್ದ ಈ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿತ್ತು,

ಇಷ್ಟು ದೊಡ್ಡ ಯಶಸ್ಸಿನ ನಂತರ ಸೆಟ್ಟೇರಿದ ದರ್ಶನ್ ಹೊಸ ಚಿತ್ರವೇ ದಿ ಡೆವಿಲ್. ಭರದಿಂದ ಶೂಟಿಂಗ್ ಆರಂಭಿಸಿದ್ದ ದಿ ಡೆವಿಲ್ ಕಳೆದ ವರ್ಷ ಡಿಸೆಂಬರ್​ಗೇನೇ ತೆರೆಗೆ ಬರಬೇಕಿತ್ತು. ಆದ್ರೆ ನಾನಾ ಅಡೆತಡೆಗಳನ್ನ ಎದುರಿಸಿರೋ ಡೆವಿಲ್ ಫೈನಲಿ ನಾಳೆ ರಾಜ್ಯಾದ್ಯಂತ ರಿಲೀಸ್ ಆಗ್ತಾ ಇದೆ.

ಮತ್ತೊಂದು ಸಾರಥಿ ಆಗುತ್ತಾ ದಿ ಡೆವಿಲ್..?
ಹೌದು ಈ ಹಿಂದೆ ಸಾರಥಿ ರಿಲೀಸ್ ಟೈಂನಲ್ಲೂ ದರ್ಶನ್ ಜೈಲಲ್ಲಿ ಇದ್ರು. ನಾಯಕನಟನ ಅನುಪಸ್ಥಿತಿಯಲ್ಲಿ ಬಂದ ಸಿನಿಮಾ ಬಿಗ್ಗೆಸ್ಟ್ ಹಿಟ್ ಆಗಿತ್ತು. ಅಭಿಮಾನಿಗಳು ಸಾರಥಿಯನ್ನ ಗೆಲ್ಲಿಸಿದ್ರು.

ಇದೀಗ ದಿ ಡೆವಿಲ್​ಗೂ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡ್ತಾ ಇದ್ದಾರೆ. ದಿ ಡೆವಿಲ್ ಕೂಡ ಸಾರಥಿಯಂತೆ ದೊಡ್ಡ ಸಕ್ಸಸ್ ಆಗುತ್ತಾ..? ದರ್ಶನ್ ಒಳಗಿರೋವಾಗ, ಹೊರಗೆ ಈ ಸಿನಿಮಾ ಜಯಭೇರಿ ಬಾರಿಸುತ್ತಾ ಕಾದುನೋಡಬೇಕಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more