ಮಾಸ್ಟರ್ ಪ್ಲಾನ್ ಯೋಜಿಸಿದ 'ಡೆವಿಲ್' ತಂಡ; ದರ್ಶನ್ ಸಿನಿಮಾ ಗೆಲುವಿಗೆ ಮಹಾ ಮಂತ್ರ!

ಮಾಸ್ಟರ್ ಪ್ಲಾನ್ ಯೋಜಿಸಿದ 'ಡೆವಿಲ್' ತಂಡ; ದರ್ಶನ್ ಸಿನಿಮಾ ಗೆಲುವಿಗೆ ಮಹಾ ಮಂತ್ರ!

Published : Aug 27, 2025, 05:38 PM IST

ದಿ ಡೆವಿಲ್ ಸಿನಿಮಾ ತಂಡ ಮೊದಲ ಹಾಡನ್ನ ಬಿಡುಗಡೆ ಮಾಡೋದ್ರ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಡಿಸೆಂಬರ್ 12ಕ್ಕೆ ದಿ ಡೆವಿಲ್ ತೆರೆಗೆ ಬರಲಿದೆ. ಸಿನಿಮಾ ರಿಲೀಸ್ ಟೈಂನಲ್ಲಿ ದರ್ಶನ್ ಹೊರಬರೋದು ಅಸಾಧ್ಯ. ಕನಿಷ್ಟ ಇನ್ನಾರು ತಿಂಗಳು ದರ್ಶನ್​ ಬೇಲ್ ವಿಚಾರ ಎತ್ತಲಿಕ್ಕೂ ಸಾಧ್ಯ ಇಲ್ಲ 


ದರ್ಶನ್ ಜೈಲಿನಲ್ಲಿರೋವಾಗಲೇ ದಿ ಡೆವಿಲ್ ಬಿಡುಗಡೆಯಾಗೋದು ಬಹುತೇಕ ಖಚಿತ. ಸದ್ಯ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ಚಿತ್ರತಂಡ ಪ್ರಮೋಷನ್​ಗೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಅದ್ರಲ್ಲೂ ಫ್ಯಾನ್ಸ್​ನ ತಲುಪೋದಕ್ಕೆ ಚಿತ್ರತಂಡ ಒಂದು ಮಾಸ್ಟರ್ ಪ್ಲಾನ್ ಮಾಡಿದೆ.. ಏನದು..? ಈ ಸ್ಟೋರಿ ನೋಡಿ.

ಯೆಸ್ ದಿ ಡೆವಿಲ್ ಸಿನಿಮಾ ತಂಡ  ಮೊದಲ ಹಾಡನ್ನ ಬಿಡುಗಡೆ ಮಾಡೋದ್ರ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಡಿಸೆಂಬರ್ 12ಕ್ಕೆ ದಿ ಡೆವಿಲ್ ತೆರೆಗೆ ಬರಲಿದೆ. ಸಿನಿಮಾ ರಿಲೀಸ್ ಟೈಂನಲ್ಲಿ ದರ್ಶನ್ ಹೊರಬರೋದು ಅಸಾಧ್ಯ. ಕನಿಷ್ಟ ಇನ್ನಾರು ತಿಂಗಳು ದರ್ಶನ್​ ಬೇಲ್ ವಿಚಾರ ಎತ್ತಲಿಕ್ಕೂ ಸಾಧ್ಯ ಇಲ್ಲ ಅಂದಿದ್ದಾರೆ ಕಾನೂನು ಪಂಡಿತರು. ಸೋ ದಾಸನ ಅನುಪಸ್ಥಿತಿಯಲ್ಲೇ ಸಿನಿಮಾ ತೆರೆಗೆ ಬರಲಿದೆ.

ಸೋ ಸಿನಿಮಾ ಪಬ್ಲಿಸಿಟಿ ಮಾಡೋದು ಹೇಗೆ ಅಂತ ಚಿತ್ರತಂಡ ತಲೆಕೆಡಿಸಿಕೊಂಡು ಒಂದು ಮಾಸ್ಟರ್​​ಪ್ಲಾನ್ ಕೂಡ ಮಾಡಿದೆ. ಚಿತ್ರದ ಪ್ರಮೋಷನಲ್ ಇವೆಂಟ್ಸ್ ಗೆ​​ ವಿಜಯಲಕ್ಷ್ಮೀ ದರ್ಶನ್ ರನ್ನ ಕರೆಸಿಕೊಳ್ಳುವ ಪ್ಲಾನ್ ಮಾಡಿದೆ. ಈಗಾಗ್ಲೇ ದರ್ಶನ್ ಸೋಷಿಯಲ್ ಮಿಡಿಯಾ ಹ್ಯಾಂಡಲ್ ಮಾಡ್ತಾ ಇರೋ ವಿಜಯಲಕ್ಷ್ಮೀ ಚಿತ್ರದ ಪ್ರಚಾರಕ್ಕೂ ಕೈ ಜೋಡಿಸಲಿದ್ದಾರೆ.

ಹೌದು ದರ್ಶನ್ ಪವರ್ ಅಂದ್ರೆ ಅವರ ಫ್ಯಾನ್ಸ್. ಸೋ ಅಭಿಮಾನಿಗಳನ್ನ ಸೇರಿಸಿ ಆಡಿಯೋ ಲಾಂಚ್ ಮತ್ತು ಟ್ರೈಲರ್ ಲಾಂಚ್ ಇವೆಂಟ್ ಮಾಡೋದಕ್ಕೆ ಡೆವಿಲ್ ಟೀಂ ಪ್ಲಾನ್ ಮಾಡಿದೆಯಂತೆ. ಆ ಇವೆಂಟ್​​ನಲ್ಲಿ ದರ್ಶನ್ ಆಪ್ತರಾದ ನಟ, ನಟಿಯರು ಜೊತೆಗೆ ವಿಜಯಲಕ್ಷ್ಮೀ ದರ್ಶನ್​​ರನ್ನ ಕರೆಸಿ ಫ್ಯಾನ್ಸ್​ನ ತಲುಪೋದಕ್ಕೆ ತಂಡ ಪ್ಲಾನ್ ಮಾಡಿದೆ.

2011ರಲ್ಲಿ ಸಾರಥಿ ಸಿನಿಮಾ ತೆರೆಗೆ ಬಂದಾಗಲೂ ಇದೇ ರೀತಿ ಆಗಿತ್ತು. ದರ್ಶನ್ ಜೈಲು ಸೇರಿದ್ದ ವೇಳೆ ಸಾರಥಿ ರಿಲೀಸ್ ಆಗಿತ್ತು. ಆ ಚಿತ್ರವನ್ನ ನಿರ್ದೇಶನ ಮಾಡಿದ್ದ ದಿನಕರ್ ತೂಗುದೀಪ ಮತ್ತು ನಾಯಕಿ ದೀಪಾ ಸನ್ನಿದಿ ಎಲ್ಲೆಡೆ ಓಡಾಡಿ ಪ್ರಚಾರ ಮಾಡಿದ್ರು. ಅಚ್ಚರಿ ಅಂದ್ರೆ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಇದೀಗ ದಿ ಡೆವಿಲ್ ರಿಲೀಸ್ ಟೈಂನಲ್ಲೂ ದರ್ಶನ್ ಜೈಲುವಾಸಿ. ಸೋ ನಿರ್ದೇಶಕ ಪ್ರಕಾಶ್ ವೀರ್ ಮತ್ತು ನಾಯಕಿ ರಚನಾ ರೈ ಚಿತ್ರದ ಪ್ರಚಾರದ ಹೊಣೆ ಹೊತ್ತಿದ್ದಾರೆ. ರಚನಾ ರೈ ಸೋಷಿಯಲ್ ಮಿಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದು, ಡೆವಿಲ್ ಪ್ರಮೋಷನ್​ಗೆ ಸಜ್ಜಾಗ್ತಾ ಇದ್ದಾರೆ.

ಒಟ್ಟಾರೆ ದರ್ಶನ್ ಇಲ್ಲದೇ ಹೋದ್ರೂ ಜೋರಾಗಿ ಪ್ರಚಾರ ಮಾಡಬೇಕು ಅಂತ ದಿ ಡೆವಿಲ್ ಚಿತ್ರತಂಡ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಈ ಪ್ಲಾನ್ ವರ್ಕ್ ಆಗುತ್ತಾ..?  ಸಾರಥಿಯಂತೆ ದಿ ಡೆವಿಲ್ ಕೂಡ ದೊಡ್ಡ ಹಿಟ್ ಆಗುತ್ತಾ..? ಕಾದುನೋಡಬೇಕಿದೆ.

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more