
ಡೆವಿಲ್ ಸಿನಿಮಾದ ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಇದೇ ಆಗಸ್ಟ್ 24ರಂದು ರಿಲೀಸ್ ಆಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ದಿನವೇ ಈ ಹಾಡು ರಿಲೀಸ್ ಆಗಬೇಕಿತ್ತು.
ದಿ ಡೆವಿಲ್ ಸಿನಿಮಾದ ಇದ್ರೆ ನಮ್ಮೆದಿಯಾಗ್ ಇರ್ಬೇಕ್ ಸಾಂಗು ಆಗಸ್ಟ್ 15ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ ಅದರ ಮುನ್ನಾ ದಿನವೇ ದರ್ಶನ್ ಬೇಲ್ ರದ್ದಾಗಿ ಜೈಲು ಸೇರುವಂತೆ ಆಯ್ತು. ಈಗ ಈ ಹಾಡಿನ ಬಿಡುಗಡೆಗೆ ಹೊಸ ಡೇಟ್ ಫಿಕ್ಸ್ ಆಗಿದೆ. ಆದ್ರೆ ಅದಕ್ಕೂ ಮುನ್ನಾದಿನವೇ ದಾಸನ ನೆಮ್ಮದಿ ವಿಷ್ಯ ನಿರ್ಧಾರ ಆಗಲಿದೆ. ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಇದೇ ಆಗಸ್ಟ್ 24ರಂದು ರಿಲೀಸ್ ಆಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ದಿನವೇ ಈ ಹಾಡು ರಿಲೀಸ್ ಆಗಬೇಕಿತ್ತು. ಆದ್ರೆ ದುರಂತ ಅಂದ್ರೆ ಅದರ ಮುನ್ನಾದಿನವೇ ಸುಪ್ರೀಂ ಕೋರ್ಟ್ ದರ್ಶನ್ ಌಂಡ್ ಗ್ಯಾಂಗ್ನ ಬೇಲ್ ರದ್ದು ಮಾಡಿ ಜೈಲಿಗೆ ಕಳಿಸಿತು. ಹೌದು ಇದೀಗ ದಿ ಡೆವಿಲ್ ಟೀಂ ಏನೋ ಇದ್ರೆ ನೆಮ್ಮಿದಿಯಾಗ್ ಇರ್ಬೇಕ್ ಹಾಡಿನ ರಿಲೀಸ್ಗೆ ಆಗಸ್ಟ್ 24ರಂದು ಡೇಟ್ನ ಫೈನಲ್ ಮಾಡಿದೆ.
ಆದ್ರೆ ಇದರ ಹಿಂದಿನ ದಿನವೇ ದಾಸನ ನೆಮ್ಮದಿಯ ಕುರಿತ ನಿರ್ಧಾರ ಆಗಲಿದೆ. ಹೌದು ದರ್ಶನ್ನ ಈ ಹಿಂದೆ ಇದ್ದ ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡಬೇಕು ಅಂತ ಸರ್ಕಾರ ಕೋರ್ಟ್ ಮೊರೆ ಹೋಗಿದೆ. ಈ ಕುರಿತ ಆಕ್ಷೇಪಣೆ ಸಲ್ಲಿಗೆ ಕೋರ್ಟ್ ಆಗಸ್ಟ್ 23ರಂದೇ ದಿನಾಂಕ ಫಿಕ್ಸ್ ಮಾಡಿದೆ. ಸೋ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಸಾಂಗ್ ರಿಲೀಸ್ಗೂ ಮೊದಲೇ ದಾಸನಿಗೆ ನೆಮ್ಮದಿ ಸಿಕ್ಕುತ್ತೋ ಇಲ್ಲವೋ ಅನ್ನೋದು ಗೊತ್ತಾಗಲಿದೆ. ಹೌದು ಬಳ್ಳಾರಿಗೆ ಶಿಫ್ಟ್ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ ಅನ್ನೋ ವಿಷ್ಯ ಕೇಳಿ ದಾಸನಿಗೆ ನಿದ್ದೇನೆ ಬರ್ತಾ ಇಲ್ವಂತೆ. ತನ್ನ ವಕೀಲರ ಮುಂದೆ ಶತಾಯ ಗತಾಯ ಏನಾದ್ರೂ ಮಾಡಿ ಅಲ್ಲಿಗೆ ಕಳಿಸದಂತೆ ಮಾಡಿ ಅಂತ ಬೇಡಿಕೊಂಡಿರೋ ಸುದ್ದಿ ಇದೆ. ಅಂತೆಯೇ ದರ್ಶನ್ ಪರ ವಕೀಲರು ಕೋರ್ಟ್ ಎದುರು ದರ್ಶನ್ನ ಪರಪ್ಪನ ಅಗ್ರಹಾರದಲ್ಲಿ ಇರೋದಕ್ಕೆ ಅವಕಾಶ ಮಾಡಿಕೊಡಿ ಅಂತ ಬೇಡಿಕೆ ಇಡಲಿದ್ದಾರೆ.
ಅಸಲಿಗೆ ಕಳೆದ ವರ್ಷ ಜೂನ್ನಲ್ಲಿ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಅರೆಸ್ಟ್ ಆದ ದರ್ಶನ್ನ ವಿಚಾರಣೆ ಮುಗಿಸಿ ಬೆಂಗಳೂರಿನ ಕೇಂದ್ರ ಕಾರ್ಯಾಲಯ ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿತ್ತು. ಈ ಕೇಸ್ನಲ್ಲಿದ್ದ ಇಡೀ ಡಿ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲೇ ಇತ್ತು. ಬೆಂಗಳೂರು ಜೈಲ್ನಲ್ಲಿದ್ದ ರೌಡಿಗಳ ಗೆಳೆತನ ಬೆಳೆಸಿಕೊಂಡ ದರ್ಶನ್ ಌಂಡ್ ಗ್ಯಾಂಗ್ ಜೈಲಿನಲ್ಲೇ ಪಾರ್ಟಿ ಮಾಡೋ ವ್ಯವಸ್ಥೆ ಮಾಡಿಕೊಂಡಿದ್ರು. ಆದ್ರೆ ಯಾವಾಗ ಇವರ ರಾಜಾತಿಥ್ಯದ ವಿಚಾರ ಹೊರಬಂತೋ ಇಡೀ ಡಿ ಗ್ಯಾಂಗ್ನ ಬೇರೆ ಬೇರೆ ಜೈಲಿಗೆ ಕಳಿಸಲಾಗಿತ್ತು. ಆಗಲೇ ದಾಸನನ್ನ ಕಳಿಸಿಕೊಟ್ಟಿದ್ದು ಈ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ. ಬಳ್ಳಾರಿಯಲ್ಲಿರುವ ಸೆಂಟ್ರಲ್ ಜೈಲ್ ನಿರ್ಮಾಣಗೊಂಡಿರೋದು ಬ್ರಿಟೀಷರ ಕಾಲದಲ್ಲಿ. ಈ ಪುರಾತನ ಜೈಲ್ನಲ್ಲಿ ಕುಖ್ಯಾತ ಕೈದಿಗಳು ಇದ್ದಾರೆ. ಇಲ್ಲಿನ ವಾತಾವರಣ, ವ್ಯವಸ್ಥೆ, ಹವಾಗುಣ, ಊಟ ಯಾವುದೂ ಕೂಡ ದರ್ಶನ್ಗೆ ಸೆಟ್ ಆಗಿರಲಿಲ್ಲ. ಇಲ್ಲಿನ ಊಟ ಸೆಟ್ ಆಗ್ತಿಲ್ಲ ಮನೆ ಊಟಕ್ಕೆ ಅವಕಾಶ ಕೊಡಿ ಅಂದ ದಾಸನಿಗೆ ಕೋರ್ಟ್ ನೋ ಅಂದಿತ್ತು.
ಸೊಳ್ಳೆ, ತಿಗಣೆಗಳು ತುಂಬಿದ ಬಳ್ಳಾರಿ ಜೈಲಿನ ಬ್ಯಾರಕ್ ದಾಸನಿಗೆ ಅಕ್ಷರಶಃ ನರಕ ದರ್ಶನ ಮಾಡಿಸಿತ್ತು. ಬೆಂಗಳೂರು ಜೈಲಿನಲ್ಲಿ ಇದ್ದಿದ್ದು ದರ್ಶನ್ ಗೆ ಶಿಕ್ಷೆ ಅಂತಲೇ ಅನ್ನಿಸಿರಲಿಲ್ಲ. ನಿಜವಾದ ಜೈಲ್ ಶಿಕ್ಷೆ ಹೇಗಿರುತ್ತೆ ಅಂತ ನೋಡಿದ್ದೇ ಬಳ್ಳಾರಿ ಜೈಲಿನಲ್ಲಿ. ಸದ್ಯ ಮತ್ತೆ ತನ್ನನ್ನ ಪೊಲೀಸರು ಬಳ್ಳಾರಿಗೆ ಶಿಫ್ಟ್ ಮಾಡ್ತಾರೆ ಅನ್ನೋದನ್ನ ಕೇಳಿ ದಾಸನಿಗೆ ನಿದ್ದೆ ಬರ್ತಾ ಇಲ್ಲವಂತೆ. ಹೌದು ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅನ್ನೋ ಸಾಲಿನ ಸೃಷ್ಟಿಕರ್ತ ಬೇರ್ಯಾರೂ ಅಲ್ಲ ಖುದ್ದು ದರ್ಶನ್. ಹಿಂದೆ ದರ್ಶನ್ ತನ್ನ ಪತ್ನಿಗೆ ಬೈದಿದ್ದ ಆಡಿಯೋವೊಂದರಲ್ಲಿ ಆ ಮಾತು ಇತ್ತು. ಅದನ್ನೇ ದಿ ಡೆವಿಲ್ ಟೀಂ ಸಿನಿಮಾ ಹಾಡಿನ ಸಾಹಿತ್ಯ ಮಾಡಿಕೊಂಡಿದೆ. ನೆಮ್ಮದಿಯಾಗಿ ಇರಬೇಕು ಅನ್ನೋದು ದಾಸನ ಪಾಲಿಸಿ. ಆದ್ರೆ ತಾನೇ ಮಾಡಿಕೊಂಡ ಕೆಲಸಗಳು ದಾಸನ ನೆಮ್ಮದಿ ಹಾಳು ಮಾಡಿ ಜೈಲು ಸೇರುವಂತೆ ಮಾಡಿವೆ. ಈಗ ಆಗಸ್ಟ್ 24ಕ್ಕೆ ದಿ ಡೆವಿಲ್ ಸಿನಿಮಾದ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಹಾಡಂತೂ ಹೊರಬರಲಿದೆ. ಆದ್ರೆ ಬಳ್ಳಾರಿಗೆ ಕಳಿಸಿದ್ರೆ ದಾಸ ಮಾತ್ರ ನೆಮ್ಮದಿಯಾಗಿ ಇರೋದಕ್ಕೆ ಆಗಲ್ಲ..!