ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು

ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು

Published : Dec 11, 2025, 01:23 PM IST

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಇವತ್ತು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ನಾಯಕ ಜೈಲಿನಲ್ಲಿರೋವಾಗ ತೆರೆಗೆ ಬಂದಿರೋ ಡೆವಿಲ್ ಗೆ ಅಭಿಮಾನಿಗಳಿಂದ ಭರ್ಜರಿ ಓಪನಿಂಗ್ ಸಿಕ್ಕಿದೆ.

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಇವತ್ತು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ನಾಯಕ ಜೈಲಿನಲ್ಲಿರೋವಾಗ ತೆರೆಗೆ ಬಂದಿರೋ ಡೆವಿಲ್ ಗೆ ಅಭಿಮಾನಿಗಳಿಂದ ಭರ್ಜರಿ ಓಪನಿಂಗ್ ಸಿಕ್ಕಿದೆ. ಇತ್ತ ಫ್ಯಾನ್ಸ್ ಥಿಯೇಟರ್ ಅಂಗಳಲ್ಲಿ ಸೆಲೆಬ್ರೇಷನ್ ಮಾಡ್ತಾ ಇದ್ರೆ, ಅತ್ತ ಜೈಲಿನಲ್ಲಿ ಟಿವಿ ಪಡೆದುಕೊಂಡಿರೋ ದಾಸನಿಗೆ ಅದನ್ನ ನೋಡೋ ಚಾನ್ಸ್ ಕೂಡ ಸಿಕ್ಕಿದೆ. ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. 400ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಡೆವಿಲ್ ರಿಲೀಸ್ ಆಗಿದ್ದು, ದಾಸನ ಫ್ಯಾನ್ಸ್ ಹಬ್ಬ ಮಾಡ್ತಾ ಇದ್ದಾರೆ. ಚಿತ್ರಮಂದಿರಗಳ ಎದುರು ದರ್ಶನ್ ಕಟೌಟ್​​ಗಳು ರಾಜಾಜಿಸ್ತಾ ಇವೆ. ದರ್ಶನ್ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲ್​ನಲ್ಲೊರೋದು ಗೊತ್ತೇ ಇದೆ.

ದರ್ಶನ್ ಇಲ್ಲ ಅಂತ ಅಭಿಮಾನಿಗಳ ಸಂಭ್ರಮ ಏನೂ ಕಮ್ಮಿಯಾಗಿಲ್ಲ. ರಾಜ್ಯಾದ್ಯಂತ ಅಭಿಮಾನಿ ಬಳಗ ದೊಡ್ಡ ಸೆಲೆಬ್ರೇಷನ್​ನೊಂದಿಗೆ ಡೆವಿಲ್​ನ ಬರಮಾಡಿಕೊಂಡಿದೆ. ಬೆಳಿಗ್ಗೆ 6 ರಿಂದಲೇ ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಶೋಗಳು ಶುರುವಾಗಿವೆ. ಅಡ್ವಾನ್ಸ್ ಬುಕ್ಕಿಂಗ್​ನಿಂದಲೇ 6 ಕೋಟಿಗೂ ಅಧಿಕ ಬಿಜಿನೆಸ್ ಮಾಡಿದ್ದ ಡೆವಿಲ್ ಮೊದಲ ವಾರಾಂತ್ಯದ ವೇಳೆಗೆ ಭರ್ಜರಿ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ. ಹೌದು ಈ ಹಿಂದೆ ಸಾರಥಿ ರಿಲೀಸ್ ಟೈಂನಲ್ಲೂ ದರ್ಶನ್ ಜೈಲಲ್ಲಿ ಇದ್ರು. ನಾಯಕನಟನ ಅನುಪಸ್ಥಿತಿಯಲ್ಲಿ ಬಂದ ಸಿನಿಮಾ ಬಿಗ್ಗೆಸ್ಟ್ ಹಿಟ್ ಆಗಿತ್ತು. ಅಭಿಮಾನಿಗಳು ಸಾರಥಿಯನ್ನ ಗೆಲ್ಲಿಸಿದ್ರು. ಇದೀಗ ದಿ ಡೆವಿಲ್​ಗೂ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡ್ತಾ ಇದ್ದಾರೆ. ದಿ ಡೆವಿಲ್ ಕೂಡ ಸಾರಥಿಯಂತೆ ದೊಡ್ಡ ಸಕ್ಸಸ್ ಆಗುತ್ತಾ..?

ದರ್ಶನ್ ಒಳಗಿರೋವಾಗ, ಹೊರಗೆ ಈ ಸಿನಿಮಾ ಜಯಭೇರಿ ಬಾರಿಸುತ್ತಾ ಕಾದುನೋಡಬೇಕಿದೆ. ಹೌದು ದರ್ಶನ್ ಌಂಡ್ ಗ್ಯಾಂಗ್ ಕೆಲ ದಿನಗಳ ಹಿಂದೆ ತಮಗೆ ಬ್ಯಾರಕ್​ನಲ್ಲಿ ಟಿವಿ ಕೊಡುವಂತೆ ಮನವಿ ಮಾಡಿತ್ತು. ಕೋರ್ಟ್ ಕೂಡ ಅದಕ್ಕೆ ಅಸ್ತು ಅಂದಿತ್ತು. ಡೆವಿಲ್ ರಿಲೀಸ್​ ಮುನ್ನಾದಿನವೇ ದರ್ಶನ್​ಗೆ ಟಿವಿ ಭಾಗ್ಯ ಸಿಕ್ಕಿದೆ. ಸೋ ಜೈಲ್​ನಲ್ಲೇ ದಾಸನಿಗೆ ಡೆವಿಲ್ ಸಂಭ್ರಮ ನೋಡೋ ಚಾನ್ಸ್ ಸಿಕ್ಕಿದೆ. ಮಿಲನ ಪ್ರಕಾಆಶ್ ಡೈರೆಕ್ಟ್ ಮಾಡಿರೋ ಡೆವಿಲ್ ಸಿನಿಮಾದ ಅವಧಿ 2 ಗಂಟೆ 49 ಸಿನಿಷ ಇದೆ. ಈಗಾಗ್ಲೇ ಸೋಷಿಯಲ್ ಮಿಡಿಯಾದಲ್ಲಿ ಸಿನಿಮಾ ಬಗ್ಗೆ ಪಾಸಿಟಿವ್ ರಿವಿವ್ಸ್ ಬರ್ತಾ ಇವೆ. ದಾಸನ ಅವತಾರ ಸೂಪರ್ ಅಂತಿದ್ದಾರೆ ಫ್ಯಾನ್ಸ್. ಒಟ್ಟಾರೆ ದರ್ಶನ್ ಜೈಲಿನಲ್ಲಿದ್ರೂ ಡೆವಿಲ್ ಜಾತ್ರೆ ಮಾತ್ರ ಜೋರಾಗಿದೆ.

04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
Read more