ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?

ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?

Published : Dec 12, 2025, 10:55 AM IST

ದರ್ಶನ್ ನಟನೆಯ ದಿ ಡೆವಿಲ್ ಗುರುವಾರ ರಾಜ್ಯಾದ್ಯಂತ ತೆರೆಗೆ ಬಂದಿದೆ. ದರ್ಶನ್ ಇಲ್ಲದೇ ಹೋದ್ರೂ ಫ್ಯಾನ್ಸ್ ಅದ್ದೂರಿಯಾಗಿ ಸಿನಿಮಾವನ್ನ ಸ್ವಾಗತ ಮಾಡಿದ್ದಾರೆ. ಬನ್ನಿ ಹಾಗಾದ್ರೆ ಡೆವಿಲ್ ಮೂವಿ ಹೇಗೆ ಮೂಡಿಬಂದಿದೆ.

ದರ್ಶನ್ ನಟನೆಯ ದಿ ಡೆವಿಲ್ ಗುರುವಾರ ರಾಜ್ಯಾದ್ಯಂತ ತೆರೆಗೆ ಬಂದಿದೆ. ದರ್ಶನ್ ಇಲ್ಲದೇ ಹೋದ್ರೂ ಫ್ಯಾನ್ಸ್ ಅದ್ದೂರಿಯಾಗಿ ಸಿನಿಮಾವನ್ನ ಸ್ವಾಗತ ಮಾಡಿದ್ದಾರೆ. ಬನ್ನಿ ಹಾಗಾದ್ರೆ ಡೆವಿಲ್ ಮೂವಿ ಹೇಗೆ ಮೂಡಿಬಂದಿದೆ. ಅಭಿಮಾನಿಗಳ ಡೆವಿಲ್ ಜಾತ್ರೆ ಹೇಗಿದೆ ಅನ್ನೋದನ್ನ ನೋಡಿಕೊಂಡು ಬರೋಣ. ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಗುರುವಾರ ರಾಜ್ಯಾದ್ಯಂತ ರಿಲೀಸ್ ಆಗಿದೆ. ಬೆಳಗಿನ ಆರು ಗಂಟೆಯಿಂದಲೇ ಫ್ಯಾನ್ಸ್ ಶೋ ನಡೆದಿದ್ದು ದಾಸನ ಅಭಿಮಾನಿಗಳ ಸಂಭ್ರಮದಿಂದ ಸಿನಿಮಾವನ್ನ ಸ್ವಾಗತಿಸಿದ್ದಾರೆ. ಕಟೌಟ್ ನಿಲ್ಲಿಸಿ, ಸ್ಟಾರ್ಸ್ ಕಟ್ಟಿ, ಪಟಾಕಿ ಹೊಡೆದು ಹಬ್ಬ ಮಾಡಿದ್ದಾರೆ. ಚಿತ್ರದ ಮೊದಲ ದಿನ ಮ್ಯಾಸಿವ್ ಓಪನಿಂಗ್ ಸಿಕ್ಕಿದೆ.

ದರ್ಶನ್ ಪತ್ನಿ ವಿಜಯಲಕ್ಷ್ನೀ, ಪುತ್ರ ವಿನೀಶ್, ಸೋದರ ದಿನಕರ್ ತೂಗುದೀಪ ಮತ್ತು  ಚಿತ್ರದ ನಾಯಕಿ ರಚನಾ ರೈ ಫ್ಯಾನ್ಸ್ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ. ಹಿಂದೆ ಸಾರಥಿ ಬಿಡುಗಡೆಯಾದಾಗ ದರ್ಶನ್ ಜೈಲಿನಲ್ಲಿ ಇದ್ದಿದ್ದು, ಆಗ ಫ್ಯಾನ್ಸ್ ಕೈ ಹಿಡಿದಿದ್ದನ್ನ ದಿನಕರ್ ನೆನಪು ಮಾಡಿಕೊಂಡಿದ್ದಾರೆ. ಹೌದು ಡೆವಿಲ್ ನೋಡಹೋದ ಫ್ಯಾನ್ಸ್​​ಗೆ ದಾಸನ ಡಬಲ್ ಧಮಾಕಾ ನೋಡೋದಕ್ಕೆ ಸಿಕ್ಕಿದೆ. ದರ್ಶನ್  ದ್ವಿಪಾತ್ರದಲ್ಲಿ ಅಭಿನಯಿಸಿದ್ದು ನಾಯಕನೂ ಹೌದು ಖಳನಾಯಕನೂ ಹೌದು. ಮೆಸ್ ಮಾಲಿಕ ಕೃಷ್ಣನ ಪಾತ್ರದಲ್ಲಿ ಡಿಫ್ರೆಂಟ್ ಗೆಟಪ್​​ ನಲ್ಲಿ ಕಾಣಿಸಿಕೊಂಡ್ರೆ, ಸಿಎಂ ಪುತ್ರ ಧನುಷ್ ಪಾತ್ರದಲ್ಲಿ ಸೈಕೋಪಾತ್ ವಿಲನ್ ಆಗಿ ಮಿಂಚಿದ್ದಾರೆ. ‘ದಿ ಡೆವಿಲ್’ ಸಿನಿಮಾದಲ್ಲಿ ದರ್ಶನ್ ಬಳಿಕ ಹೆಚ್ಚು ಸ್ಕ್ರೀನ್ ಸ್ಪೇಸ್ ಗಿಟ್ಟಿಸಿರುವುದು ನಟ ಅಚ್ಯುತ್ ಕುಮಾರ್.

ಮುಖ್ಯಮಂತ್ರಿಯ ಸಲಹೆಗಾರನ ಪಾತ್ರದಲ್ಲಿ ಅಚ್ಯುತ್ ಕಾಣಿಸಿಕೊಂಡಿದ್ದಾರೆ. ಕಥೆಗೆ ಹಲವು ತಿರುವುಗಳನ್ನ ನೀಡುವ ಪಾತ್ರ ಅವರದ್ದು. ನಟಿ ರಚನಾ ರೈ ಅವರು ತಮಗೆ ಸಿಕ್ಕ ಅವಕಾಶವನ್ನ ಉತ್ತಮವಾಗಿ ಬಳಸಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಕಡಿಮೆ ಹೊತ್ತು ಕಾಣಿಸಿಕೊಂಡರೂ ಕಥೆಗೆ ಟ್ವಿಸ್ಟ್ ಕೊಡ್ತಾರೆ. ಹುಲಿ ಕಾರ್ತಿಕ್ ಮತ್ತು ಗಿಲ್ಲಿ ನಟ  ಕಾಮಿಡಿ ಕಚಗುಳಿ ಇಟ್ಟಿದ್ದಾರೆ. ದಿ ಡೆವಿಲ್ ಒಂಥರಾ ಫ್ಯಾನ್ಸ್ ಗಂತಲೇ ಮಾಡಿರೋ ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ. ಮಿಲನ ಪ್ರಕಾಶ್ ಒಂದು ಮಾಸ್ ಸಿದ್ದಸೂತ್ರದ ಸಿನಿಮಾವನ್ನ ಫ್ಯಾನ್ಸ್ ಎದುರು ತಂದಿದ್ದಾರೆ. ದಾಸನ ಫ್ಯಾನ್ಸ್ ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ದರ್ಶನ್ ಜೈಲಿನಲ್ಲಿದ್ರೂ ದಿ ಡೆವಿಲ್ ಜಾತ್ರೆ ಜೋರಾಗೇ ಶುರುವಾಗಿದೆ. ಹಿಂದೆ ದರ್ಶನ್ ಜೈಲಿನಲ್ಲಿದ್ದಾಗಲೇ ತೆರೆಗೆ ಬಂದ ಸಾರಥಿಯಂತೆ ಡೆವಿಲ್ ಕೂಡ ಬಿಗ್ ಹಿಟ್ ಆಗುತ್ತಾ.. ಕಾದುನೋಡಬೇಕಿದೆ.

04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
Read more