ಮದರ್ ಇಂಡಿಯಾ ವಿರುದ್ದ ಮಸಲತ್ತು.. ದಾಸನ ದ್ವೇಷ, ಮುಂದೆ ರಾಜಕೀಯ ವಾರ್?

ಮದರ್ ಇಂಡಿಯಾ ವಿರುದ್ದ ಮಸಲತ್ತು.. ದಾಸನ ದ್ವೇಷ, ಮುಂದೆ ರಾಜಕೀಯ ವಾರ್?

Published : May 14, 2025, 05:16 PM IST

ದರ್ಶನ್ ಸುಮಲತಾಗೆ ಮುಂದೈತೆ ಮಾರಿಹಬ್ಬ ಅನ್ನೋ ಸಿಗ್ನಲ್ ಕೊಟ್ರಾ. ಮದರ್ ಇಂಡಿಯಾಗೆ ಟಾಂಗ್ ಕೊಟ್ರಾ,.? ಅಮ್ಮನ ವಿರುದ್ದದ ರಾಜಕೀಯ ಮಸಲತ್ತಿನಲ್ಲಿ ದರ್ಶನ್ ಭಾಗಿಯಾಗ್ತಾ ಇದ್ದಾರಾ..? 


ದರ್ಶನ್ ಇತ್ತೀಚಿಗೆ ತಮ್ಮ ಆಪ್ತ ಮತ್ತು ರಾಜಕಾರಣಿ ಸಚ್ಚಿದಾನಂದ್ ಬರ್ತ್​ಡೇನಲ್ಲಿ  ಪಾಲ್ಗೊಂಡಿದ್ರು. ಆರಂಭದಲ್ಲಿ ಎಲ್ಲರೂ ಇದು ಬರೀ ಹುಟ್ಟುಹಬ್ಬದ ಆಚರಣೆ ಅಂದುಕೊಂಡಿದ್ರು. ಆದ್ರೆ ಈ ಹುಟ್ಟುಹಬ್ಬದ ಮೂಲಕ ದರ್ಶನ್ ಸುಮಲತಾಗೆ ಮುಂದೈತೆ ಮಾರಿಹಬ್ಬ ಅನ್ನೋ ಸಿಗ್ನಲ್ ಕೊಟ್ರಾ. ಮದರ್ ಇಂಡಿಯಾಗೆ ಟಾಂಗ್ ಕೊಟ್ರಾ,.? ಅಮ್ಮನ ವಿರುದ್ದದ ರಾಜಕೀಯ ಮಸಲತ್ತಿನಲ್ಲಿ ದರ್ಶನ್ ಭಾಗಿಯಾಗ್ತಾ ಇದ್ದಾರಾ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ. ಇತ್ತೀಚಿಗೆ ದಿ ಡೆವಿಲ್ ಸಿನಿಮಾದ ಸೆಟ್​ನಲ್ಲಿ ದರ್ಶನ್ ತಮ್ಮ ಆಪ್ತ, ರಾಜಕಾರಣಿ ಇಂಡವಾಳು ಸಚ್ಚಿದಾನಂದ್ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ರು. ದರ್ಶನ್ ಕ್ಯಾರಾವ್ಯಾನ್​ನಲ್ಲೇ ಸಚ್ಚಿದಾನಂದ್ ಕೇಕ್ ಕತ್ತರಿಸಿ ದಾಸನಿಗೆ ತಿನ್ನಿಸಿದ್ರು. ದರ್ಶನ್ ಸೋದರ ದಿನಕರ್ ಕೂಡ  ಸಾಥ್ ಕೊಟ್ಟಿದ್ರು. ಈ ಹುಟ್ಟುಹಬ್ಬದ ಸೆಲೆಬ್ರೇಷನ್ ಫೋಟೊಗಳು ಎಲ್ಲೆಡೆ ಹರಿದಾಡಿದ್ವು. 

ಅಸಲಿಗೆ ಆರಂಭದಲ್ಲಿ ಇದು ಹುಟ್ಟುಹಬ್ಬದ ಆಚರಣೆ ಅಂತಷ್ಟೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಇದು ಬರೀ ಹುಟ್ಟುಹಬ್ಬ ಅಲ್ಲ. ದರ್ಶನ್ ತನ್ನ ಮದರ್ ಇಂಡಿಯಾ ಸುಮಲತಾಗೆ ಮುಂದೈತೆ ಮಾರಿಹಬ್ಬ ಅಂತ ರವಾನಿಸಿರೋ ಸಂದೇಶ ಅನ್ನೋದು ಈಗ ರಿವೀಲ್ ಆಗಿದೆ. ಅಸಲಿಗೆ ಇಂಡವಾಳು ಸಚ್ಚಿದಾನಂದ್ ಅಂಬರೀಷ್ ಬೆಂಬಲಿಗರಾಗಿದ್ದವರು. 2019ರಲ್ಲಿ ಸುಮಲತಾ ಮಂಡ್ಯ ಲೊಕಸಭೆಗೆ ಸ್ಪರ್ಧೆ ಮಾಡಿದಾಗ ಸುಮಲತಾ ಪರ ಕೆಲಸ ಮಾಡಿದ್ರು. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಚ್ಚಿದಾನಂದ್ ಸ್ಪರ್ಧೆ ಮಾಡಿದಾಗ ಸುಮಲತಾ ಬೆಂಬಲಕ್ಕೆ ಬರಲಿಲ್ಲ. ಸದ್ಯ ಸುಮಲತಾ ಮತ್ತು ಸಚ್ಚಿದಾನಂದ ನಡುವೆ ಒಳ್ಳೆ ಸಂಬಂಧವೇನೂ ಇಲ್ಲ. ಸೋ ಇಂಥಾ ಸಚ್ಚಿದಾನಂದರನ್ನ ಸೆಟ್​ಗೆ ಕರೆಸಿ ಬರ್ತ್​ಡೇ ಸೆಲೆಬ್ರೇಟ್ ಮಾಡಿರೋ ದರ್ಶನ್, ಅಮ್ಮನಿಗೆ ಸೂಚನೆ ಕೊಟ್ರಾ..? ಹೌದು ಅಂತಿವೆ ಮಂಡ್ಯದ ರಾಜಕೀಯ ರಂಗದ ಮೂಲಗಳು. 

ಹೌದು ಸದ್ಯ ದರ್ಶನ್ ಸುಮಲತಾ ಸಂಬಂಧ ಹಳಸಿದೆ ಅನ್ನೋದು ಗೊತ್ತಿರೋ ವಿಚಾರವೇ. ಸುಮಲತಾ 2019ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಾಗ ಅವರ ಪರ ದೊಡ್ಡ ಶಕ್ತಿಯಾಗಿ  ನಿಂತಿದ್ದು ದರ್ಶನ್. ಇಡೀ ಮಂಡ್ಯವನ್ನ ಸುತ್ತಿ ಸುಮಲತಾ ಪರ ಪ್ರಚಾರ ಮಾಡಿ ಅವರನ್ನ ಗೆಲ್ಲಿಸಿಕೊಂಡಿದ್ರು ದರ್ಶನ್. ದರ್ಶನ್, ಸುಮಲತಾರನ್ನ ಮದರ್ ಇಂಡಿಯಾ ಅಂತಿದ್ರು. ಅಭಿಷೇಕ್ ಅಂಬಿಯನ್ನ  ಬ್ರದರ್ ಫ್ರಂ ಎನದರ್ ಮದರ್ ಅಂತಾನೇ ಕರೀತಾ ಇದ್ರು.   ಕಳೆದ ವರ್ಷ ಸುಮಲತಾ ಬಿಜೆಪಿ ಸೇರುವ ಮುನ್ನ ಮಂಡ್ಯದ ಸಭೆಯಲ್ಲಿ ‘ಅಮ್ಮ ಹಾಳು ಬಾವಿಗೆ ಬೀಳು ಅಂದರೂ ನಾನು ಬೀಳೋದಕ್ಕೆ ಸಿದ್ದ  ’ ಅಂದಿದ್ರು. ಆದ್ರೆ ಮುಂದೆ ದರ್ಶನ್ ಹಾಳುಬಾವಿಗೆ ಬಿದ್ರು. 

ಆಗ ಅಮ್ಮ ಬರಲಿಲ್ಲ. ತಮ್ಮನೂ ಬರಲಿಲ್ಲ. ಹೌದು ದರ್ಶನ್ ರೇಣುಕಾಸ್ವಾಮಿ ಮರ್ಡರ್ ಕೇಸ್​ನಲ್ಲಿ ಅರೆಸ್ಟ್ ಆದ ಮೇಲೆ ಸುಮಲತಾ  ಅಂತರ ಕಾಯ್ದುಕೊಂಡ್ರು. ಜೈಲಿಗೆ ಹೋಗಿನ ಮಗನ ಮುಖ ನೋಡ್ಲಿಲ್ಲ. ಬಹುಶಃ ಕೊಲೆ ಆರೋಪಿಯನ್ನ ಬೇಟಿ ಮಾಡಿದ್ರೆ ತಮ್ಮ ರಾಜಕೀಯ ಜೀವನಕ್ಕೆ ಕುತ್ತು ಬರುತ್ತೆ ಅಂದುಕೊಂಡ್ರಾ ಗೊತ್ತಿಲ್ಲ. ಒಟ್ನಲ್ಲಿ ಜೈಲಿನಲ್ಲಿದ್ದಾಗ ದರ್ಶನ ದರ್ಶನಕ್ಕೆ ಸುಮಮ್ಮ ಹೋಗ್ಲಿಲ್ಲ. ಇದು ದರ್ಶನ್​​ಗೆ ಸಿಟ್ಟು ತಂತು ಅಂತಾರೆ ಹತ್ತಿರದವರು. ತಾನು ಅವರಿಗೆ ಅಷ್ಟೆಲ್ಲಾ ಮಾಡಿದೆ. ಆದ್ರೆ ನನ್ನ ಕಷ್ಟದಲ್ಲಿ ತಾಯಿ ಜೊತೆ ನಿಲ್ಲಲಿಲ್ಲವಲ್ಲ ಅಂತ ಬೇಸರಿಸಿಕೊಂಡ ದರ್ಶನ್  ಸುಮಲತಾ ಫ್ಯಾಮಿಲಿಯಿಂದ ಮಾನಸಿಕವಾಗಿ ದೂರವಾದ್ರು ಅನ್ನಲಾಗ್ತಾ ಇದೆ. 

ಅಂತೆಯೇ ಸೋಷಿಯಲ್ ಮಿಡಿಯಾದಲ್ಲಿ ಸುಮಲತಾ, ಅಭಿ, ಅವಿವಾ ಎಲ್ಲರನ್ನೂ ದರ್ಶನ್ ಅನ್​ಫಾಲೋ ಮಾಡಿದ್ದಾರೆ. ಅಷ್ಟೆಲ್ಲಾ ಯಾಕೆ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಅಂಬಿ ಮೊಮ್ಮಗನ ನಾಮಕರಣಕ್ಕೂ ಹೋಗಲಿಲ್ಲ. ಹೌದು ದರ್ಶನ್ ಕೋಪವನ್ನ ಬಲ್ಲವರು ಮುಂದಿನ ದಿನಗಳಲ್ಲಿ ದರ್ಶನ್ ಸುಮಲತಾಗೆ ರಾಜಕೀಯ ಶತ್ರುವಾದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ. ಅದರ ಮೊದಲ ಹೆಜ್ಜೆ ಅನ್ನುವಂತೆ ಸುಮಲತಾರಿಂದ ದೂರವಾಗಿರೋ ರಾಜಕಾರಣಿ ಇಂಡವಾಳು ಸಚ್ಚಿದಾನಂದರನ್ನ ಸೆಟ್ ಗೆ​ ಕರೆಸಿಕೊಂಡು ಬರ್ತ್​ಡೇ ಸೆಲೆಬ್ರೇಟ್ ಮಾಡಿದ್ದಾರೆ ದರ್ಶನ್. ಸೋ ಮುಂದಿನ ದಿನಗಳಲ್ಲಿ ಸುಮಲತಾ ಎದುರೇ ದರ್ಶನ್ ಪ್ರಚಾರ ಮಾಡಿದ್ರೂ ಅಚ್ಚರಿಯಿಲ್ಲ. ಮದರ್ ಇಂಡಿಯಾ ಎದುರೇ ಮಗ ಸವಾಲ್ ಹಾಕಿದ್ರೂ ಅಚ್ಚರಿ ಪಡಬೇಕಿಲ್ಲ.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more