Dec 9, 2024, 3:19 PM IST
ದರ್ಶನ್ ಆಂಡ್ ಗ್ಯಾಂಗ್ ನಿಂದ ಬರ್ಬರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಕ್ಕಿಲ್ವಾ? ದರ್ಶನ್ ಬೆನ್ನು ನೋವಿನ ನೆಪ ಹೇಳಿ ಜೈಲು ಶಿಕ್ಷೆಯಿಂದ ಬಚಾವ್ ಅಗಿ ಆರಾಮ್ ಆಗಿ ಆಸ್ಪತ್ರೆಯಲ್ಲಿ ಮಲಗಿದ್ರೆ ಹೇಗೆ ತಾನೇ ರೇಣುಕಾ ಆತ್ಮಕ್ಕೆ ಶಾಂತಿ ಸಿಗುತ್ತೆ.ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕುಟುಂಬದವರು ಮನೆಯಲ್ಲಿ ಶಾಂತಿ- ಪೂಜೆ ಮಾಡಿಸಿದ್ದನ್ನ ನೋಡಿ ಈ ಕುರಿತ ಚರ್ಚೆ ಹುಟ್ಟಿಕೊಂಡಿವೆ.ರೇಣುಕಾಸ್ವಾಮಿಯವರ ಕುಟುಂಬದ ಗುರುಗಳಾದ ರಂಭಾಪುರಿ ಶ್ರೀಗಳು, ಆತ್ಮಶಾಂತಿ ಮತ್ತು ವಾಸ್ತುಶಾಂತಿ ಪೂಜೆಯನ್ನ ನೆರವೇರಿಸಿಕೊಟ್ಟಿದ್ದಾರೆ. ಒಟ್ಟಾರೆ ಒಂದು ಕಡೆ ದುರಾತ್ಮ ದರ್ಶನ್ ದೊಡ್ಡ ದೊಡ್ಡ ವಕೀಲರನ್ನ ಹಿಡಿದು ಕೇಸ್ನಿಂದ ಬಚಾವ್ ಆಗೋಕೆ ತಂತ್ರ ಹೆಣೀತಾ ಇದ್ದಾನೆ. . ಇನ್ನೊಂದೆಡೆ ರೇಣುಕಾಸ್ವಾಮಿ ಮನೆಯಲ್ಲಿ ಆತ್ಮಶಾಂತಿ-ಮನಶಾಂತಿಗಾಗಿ ಪೂಜೆ ನಡೀತಾ ಇದೆ. ಆದ್ರೆ ನಿಜಕ್ಕೂ ದುರಾತ್ಮ ದರ್ಶನ್ಗೆ ಶಿಕ್ಷೆಯಾಗದ ಹೊರತು ರೇಣುಕಾ ಆತ್ಮಕ್ಕೆ ಶಾಂತಿ ಸಿಗಲ್ಲ ಅನ್ನೋದಂತೂ ಸತ್ಯ.