ದರ್ಶನ್- ಪವಿತ್ರಾ ಗೌಡ ಮದುವೆ ನಡೆದಿದ್ದೆಲ್ಲಿ? ಬುಲ್ ಬುಲ್ ಆಗಲು ಬಂದವಳು ಬೀವಿ ಆದಳಾ?

ದರ್ಶನ್- ಪವಿತ್ರಾ ಗೌಡ ಮದುವೆ ನಡೆದಿದ್ದೆಲ್ಲಿ? ಬುಲ್ ಬುಲ್ ಆಗಲು ಬಂದವಳು ಬೀವಿ ಆದಳಾ?

Published : Nov 01, 2025, 12:44 PM IST

ರೇಣುಕಾಸ್ವಾಮಿ ಮರ್ಡರ್ ಕೇಸ್​ ನಲ್ಲಿ ಎ1 & ಎ2 ಆಗಿರೋ ಪವಿತ್ರಾ ಗೌಡ ಮತ್ತು ದರ್ಶನ್ ಲಿವಿಂಗ್ ಟುಗೆದರ್ ಇದ್ರು ಅನ್ನೋ ವಿಷ್ಯ ಗೊತ್ತಿದೆ. ಖುದ್ದು ತಾವು ಸಹಜೀವನ ನಡೆಸ್ತಾ ಇದ್ವಿ ಅಂತ ಇವರು ಹೇಳಿಕೊಂಡಿದ್ದಾರೆ.

ರೇಣುಕಾಸ್ವಾಮಿ ಮರ್ಡರ್ ಕೇಸ್​ ನಲ್ಲಿ ಎ1 & ಎ2 ಆಗಿರೋ ಪವಿತ್ರಾ ಗೌಡ ಮತ್ತು  ದರ್ಶನ್ ಲಿವಿಂಗ್ ಟುಗೆದರ್ ಇದ್ರು ಅನ್ನೋ ವಿಷ್ಯ ಗೊತ್ತಿದೆ. ಖುದ್ದು ತಾವು ಸಹಜೀವನ ನಡೆಸ್ತಾ ಇದ್ವಿ ಅಂತ ಇವರು ಹೇಳಿಕೊಂಡಿದ್ದಾರೆ. ಅದ್ರೆ ಹೊಸ ವಿಷ್ಯ ಏನಪ್ಪಾ ಅಂದ್ರೆ ದರ್ಶನ್ - ಪವಿತ್ರಾ ಕೊರಳಿಗೆ ತಾಳಿ ಕಟ್ಟಿದ್ರಂತೆ. ಇಬ್ಬರೂ ಶಾಸ್ತೋಕ್ತವಾಗಿ ಸತಿಪತಿಗಳಾಗಿದ್ರು ಅನ್ನೋದಕ್ಕೆ ಸಾಕ್ಷಿಯಾಗಿ ಕೆಲ ಫೋಟೋ ಹರಿದಾಡ್ತಾ ಇವೆ. ಹಾಗಾದ್ರೆ ದರ್ಶನ್ ಪವಿತ್ರಾ ಮದುವೆ ಆಗಿದ್ರಾ..? ಏನಿದು ದಾಸನ ಕಲ್ಯಾಣ ರಹಸ್ಯ..? ಇಲ್ಲಿದೆ ನೋಡಿ ಆ ಕುರಿತ ರೋಚಕ ಸ್ಟೋರಿ. ಯೆಸ್ ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಎ-1 ಅಂಡ್ ಎ-2 ಆಗಿರೋ ಪವಿತ್ರಾ ಮತ್ತು ದರ್ಶನ್ ತೂಗುದೀಪ ನಡುವಿನ ನಂಟು ಏನು ಅನ್ನೋದು ಗೊತ್ತಿರೋ ಸಂಗತಿಯೇ. ದಶಕದಿಂದಲೂ ಈ ಇಬ್ಬರೂ ಒಟ್ಟಿಗೆ ಇದ್ರು. ತಾವು ಮದುವೆಯಾಗದೇ ಸಹಜಜೀವನ ನಡೆಸ್ತಾ ಇದ್ವಿ ಅಂತ ಖುದ್ದು ಈ ಜೋಡಿ ಕೋರ್ಟ್ ಎದುರು ಹೇಳಿಕೆ ನೀಡಿದೆ.

ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ. ದಾಸ ಗೆಳತಿ ಪವಿತ್ರಾ ಕೊರಳಿಗೆ ತಾಳಿ ಕಟ್ಟಿದ್ದ ಅನ್ನೋ ವಿಷ್ಯ ಈಗ ಹೊರಬಂದಿದೆ. ದರ್ಶನ್ - ಪವಿತ್ರಾ ಜೊತೆಗಿರೋ ನೂರಾರು ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿವೆ. ಖುದ್ದು ಪವಿತ್ರಾ ಗೌಡ ಸೋಷಿಯಲ್ ಮಿಡಿಯಾ ಖಾತೆಯಲ್ಲೇ ದರ್ಶನ್ ಜೊತೆಗೆ ಆಪ್ತವಾಗಿರೋ ಅನೇಕ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಆದ್ರೆ ಇವುಗಳನ್ನೂ ಮೀರಿಸೋ ಫೋಟೋಗಳು ಈಗ ಹೊರಬಂದಿವೆ. ದರ್ಶನ್ - ಪವಿತ್ರಾ ಸತಿ ಪತಿಗಳಂತೆ ಪೋಸ್ ಕೊಟ್ಟಿರೋ ಫೋಟೋಗಳು ವೈರಲ್ ಆಗಿವೆ. ದರ್ಶನ್ ಮತ್ತು ಪವಿತ್ರಾ ದೇವರ ಕೋಣೆ ಎದುರು ನಿಂತಿರೋ ಈ ಫೋಟೊದಲ್ಲಿ  ಇಬ್ಬರೂ ಕುಂಕುಮ ಹಚ್ಚಿಕೊಂಡಿದ್ದಾರೆ. ಪವಿತ್ರಾ ಕೊರಳಲ್ಲಿ ಹಸಿರು ದಾರವಿದೆ. ಭರ್ಜರಿ ನೆಕ್​ಲೆಸ್ ಜೊತೆಗೂ ತಾಳಿಯೂ ಎದ್ದು ಕಾಣ್ತಾ ಇದೆ. ದರ್ಶನ್ ಪವಿತ್ರಾ ಆಪ್ತವಾಗಿ ತೆಗೆದುಕೊಂಡಿರೋ ಈ ಸೆಲ್ಫಿನಲ್ಲಿ ಪವಿತ್ರಾ ಕೊರಳಲ್ಲಿ ನೆಕ್​ಲೆಸ್ ಇದೆ, ಸರ ಇದೆ.

ಜೊತೆಗೆ ಹಳದಿ ದಾರ ಕೂಡ ಹೈಲೈಟ್ ಆಗಿದೆ. ಇನ್ನೂ ಹಲವು ಫೋಟೋಗಳಿದ್ದು ಅವುಗಳಲ್ಲಿ ಪವಿತ್ರಾ ಕೊರಳಲ್ಲಿ ತಾಳಿ ಇರೋದನ್ನ ನೋಡಬಹುದು. ಆ ತಾಳಿ ಕಟ್ಟಿದ ನಲ್ಲ ಕೂಡ ಫೋಟೋದಲ್ಲಿ ಪೋಸ್ ಕೊಟ್ಟಿದ್ದಾನೆ. ಈ ಪೋಟೋಗಳು ಬಹುತೇಕ 10 ವರ್ಷಗಳು ಹಿಂದಿನವು ಅಂತ ಹೇಳಲಾಗ್ತಾ ಇದೆ. ಹೌದು ದರ್ಶನ್ ಮತ್ತು ಪವಿತ್ರಾ ಗೌಡ ಕೋರ್ಟ್ ಮುಂದೆ ಸಹಜೀವನ ನಡೆಸ್ತಾ ಇದ್ವಿ ಅಂತ ಹೇಳಿಕೊಂಡಿದ್ದಾರೆ. ಹೀಗೆ ಲಿವಿಂಗ್ ಟು ಗೆದೆರ್ ಅಂತ ಹೇಳದೇ ಮದುವೆ ಆಗಿದ್ವಿ ಅಂತ ಹೇಳಲಿಕ್ಕೆ ಹೇಗೆ ತಾನೇ ಸಾಧ್ಯ. ಯಾಕಂದ್ರೆ ದರ್ಶನ್​ಗೆ ಮೊದಲೊಂದು ಮದುವೆ ಆಗಿದೆ. ಮೊದಲ ಪತ್ನಿಗೆ ವಿಚ್ಛೇಧನ ಕೊಡದೇ ಇನ್ನೊಂದು ಮದುವೆ ಆಗಿದೆ ಅಂತ ಘೋಷಣೆ ಮಾಡಿಕೊಳ್ಳೋದಕ್ಕೆ ಹೇಗೆ ತಾನೇ ಸಾಧ್ಯ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more