Jan 15, 2025, 3:48 PM IST
ಸಂಕ್ರಾಂತಿ ಅಂದ್ರೆ ಸೂರ್ಯದೇವ ತನ್ನ ಪಥ ಬದಲಿಸುವ ಸಮಯ. ದರ್ಶನ್ ಕೂಡ ಈ ಹಬ್ಬದಿಂದ ಬದಲಾಗಬೇಕು ಅಂತ ನಿರ್ಧರಿಸಿದಂತಿದೆ. ಅಂತೆಯೇ ಹಬ್ಬಕ್ಕೂ ಮುನ್ನ ಹುಟ್ಟಿದ ಮನೆಗೆ ಹೋಗಿ ಅಮ್ಮನ ಆಶಿರ್ವಾದ ಪಡೆದಿರೋ ದರ್ಶನ್ , ಫಾರ್ಮ್ ಹೌಸ್ನಲ್ಲಿ ಸಂಭ್ರಮದಿಂದ ಸಂಕ್ರಾಂತಿ ಸೆಲೆಬ್ರೇಟ್ ಮಾಡಿದ್ದಾನೆ.ಇಷ್ಟು ದಿನ ಬದುಕಲ್ಲಿ ನಡೆದ ಕರಾಳ ಅಧ್ಯಾಯಗಳನ್ನ ಮರೆತು ಹೊಸಪಥ ಹಿಡಿಯಬೇಕು ಅಂತ ಹೆಜ್ಜೆ ಇಟ್ಟಿದ್ದಾನೆ. ವಿಶೇಷ ಅಂದ್ರೆ ಬಹುದಿನಗಳ ಬಳಿಕ ತಾಯಿ ವಾಸ ಮಾಡೋ ಮುಪಾ ನಿಲಯಕ್ಕೆ ಹೋಗಿ ಅಮ್ಮನ ಆಶಿರ್ವಾದ ಪಡೆದಿದ್ದಾರೆ. ಅಸಲಿಗೆ ದರ್ಶನ್ ಈ ಮನೆಗೆ ಹೋಗಿ ಯಾವುದೋ ಕಾಲ ಅಗಿತ್ತು. ತಾಯಿ ಮೀನಾ ತೂಗುದೀಪ ಜೊತೆಗೆ ದರ್ಶನ್ ಅಷ್ಟಾಗಿ ಸಂಪರ್ಕವನ್ನೇ ಉಳಿಸಿಕೊಂಡಿರಲಿಲ್ಲ. ಅಪ್ಪಿ ತಪ್ಪಿಯೂ ಅಮ್ಮನ ಮನೆ ಕಡೆಗೆ ತಲೆ ಹಾಕ್ತಾ ಇರಲಿಲ್ಲ. ದರ್ಶನ್ ತಾಯಿ ಕೂಡ ಮಗನ ಮನೆಗೆ ಬರ್ತಾ ಇರಲಿಲ್ಲ. ಆದ್ರೆ ದರ್ಶನ್ ಜೈಲಿಗೆ ಹೋದ ಮೇಲೆ ಮಗನನ್ನ ಹುಡುಕಿಕೊಂಡು ಕಣ್ಣೀರು ಹಾಕಿದ್ದು ಇದೇ ಮೀನಮ್ಮ.ದರ್ಶನ್ಗೆ ಕೂಡ ಬುದ್ದಿ ಬಂದಂತಿದೆ, ಅಂತೆಯೇ ಸಂಕ್ರಾತಿಗೆ ಮುನ್ನ ಅಮ್ಮನ ಮನೆಗೆ ಹೋಗಿ ಕೈ ತುತ್ತು ತಿಂದು ಬಂದಿದ್ದಾನೆ ದಾಸ. ಇನ್ನೂ ದರ್ಶನ್ ಮೈಸೂರಿನ ಫಾರ್ಮ್ ಹೌಸ್ ನಲ್ಲೂ ಸುಗ್ಗಿ ಸಂಭ್ರಮ ಜೋರಾಗಿದೆ.
ಹಲವು ವರ್ಷಗಳ ನಂತರ ಸಹೋದರನ ಜೊತೆ ಸಂಕ್ರಾಂತಿ ಆಚರಿಸಿದ ದರ್ಶನ್; ಫೋಟೋ ವೈರಲ್