ಲ್ಯಾಂಬೊರ್ಗಿನಿನೂ ಇಲ್ಲ, ಸಂಭ್ರಮನೂ ಇಲ್ಲ: ಜೈಲಲ್ಲಿ ಹಬ್ಬ ಮಾಡಲು  ದರ್ಶನ್​​ಗೆ 10 ರೂ. ಮಾತ್ರ!

ಲ್ಯಾಂಬೊರ್ಗಿನಿನೂ ಇಲ್ಲ, ಸಂಭ್ರಮನೂ ಇಲ್ಲ: ಜೈಲಲ್ಲಿ ಹಬ್ಬ ಮಾಡಲು ದರ್ಶನ್​​ಗೆ 10 ರೂ. ಮಾತ್ರ!

Published : Oct 02, 2025, 11:47 AM IST

ಜೈಲಿಂದ ಹೊರಗಡೆ ಇದ್ದಿದ್ರೆ ದರ್ಶನ್​​​ ಆಯುಧ ಪೂಜೆಯನ್ನು ಹೇಗೆ ಮಾಡ್ತಿದ್ರು. ಜೈಲಲ್ಲಿ ಸಡಗರವೇ ಇಲ್ಲದೆ ಏನು ಮಾಡ್ತಿದ್ದಾರೆ. ಕಳೆದ ವರ್ಷ ಇದೇ ಹೊತ್ತಿಗೆ ಏನೇನಾಗಿತ್ತು ? ಇದೇ ಇವತ್ತಿ ವಿಶೇಷ ದರ್ಶನ್​​ ‘ಜೈಲು ಪೂಜೆ’.

ರಾಜ್ಯದಲ್ಲಿ ಹಬ್ಬದ ಸಡಗರ ಕಳೆ ಕಟ್ಟಿದೆ. ಆದ್ರೆ, ನಟ ದರ್ಶನ್​​ ಪಾಲಿಗೆ ಮಾತ್ರ ಜೈಲಲ್ಲೇ ಹಬ್ಬ ಮಾಡುವಂತಾಗಿದೆ. ಜೈಲಿಂದ ಹೊರಗಡೆ ಇದ್ದಿದ್ರೆ ದರ್ಶನ್​​​ ಆಯುಧ ಪೂಜೆಯನ್ನು ಹೇಗೆ ಮಾಡ್ತಿದ್ರು. ಜೈಲಲ್ಲಿ ಸಡಗರವೇ ಇಲ್ಲದೆ ಏನು ಮಾಡ್ತಿದ್ದಾರೆ. ಕಳೆದ ವರ್ಷ ಇದೇ ಹೊತ್ತಿಗೆ ಏನೇನಾಗಿತ್ತು ? ಇದೇ ಇವತ್ತಿ ವಿಶೇಷ ದರ್ಶನ್​​ ‘ಜೈಲು ಪೂಜೆ’. ಅದ್ಯಾಕೋ ದರ್ಶನ್​​ ಹಣೆ ಬರಹವೇ ಸರಿಯಿಲ್ಲ. ಕೊಲೆ ಕೇಸ್​​​ನಲ್ಲಿ ಜೈಲು ಸೇರಿರುವ ದರ್ಶನ್​​​ಗೆ ತಮ್ಮ ನೆಚ್ಚಿನ ಹಬ್ಬದ ಸಡಗರ ಇಲ್ಲದಂತಾಗಿದೆ. ಮೈಸೂರಿಗರಿಗೆ ದಸರಾ ಹಾಗೂ ಆಯುಧ ಪೂಜೆ ಅಂದ್ರೆ ಸಂಭ್ರಮ. ಈ ಹಬ್ಬವನ್ನ ದರ್ಶನ್​​ ಈಗ ಜೈಲಲ್ಲೇ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ದರ್ಶನ್​​​​​​ ಹೊರಗಿದಿದ್ರೆ, ಸಡಗರ ಸಂಭ್ರಮವೇ ಬೇರೆಯಾಗಿರ್ತಿತ್ತು. ದೇಶಾದ್ಯಂತ ಇವತ್ತು ಆಯುಧಪೂಜೆ ಸಡಗರ. ಹಳ್ಳಿಗಳಲ್ಲಿ ರೈತರು ತಮ್ಮ ಕೃಷಿ ಸಲಕರಣೆಗಳಿಗೆ ಪೂಜೆ ಸಲ್ಲಿಸಿದ್ರೆ, ಸಿಟಿ ಮಂದೆ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿದ್ದಾರೆ.

ತರಹೇವಾರಿ ಹೂಗಳಿಂದ ಸಿಂಗಾರಗೊಂಡಿರೋ ವಾಹನಗಳು ರಸ್ತೆಯಲ್ಲಿ ಧೂಳೆಬ್ಬಿಸುತ್ತಿವೆ.. ಇನ್ನು ಮಾಲೀಕರು ಅಂಗಡಿ ಪೂಜೆಗಳನ್ನ ಮಾಡಿ ಸಹಿ ಹಂಚಿ ಸಂಭ್ರಮಿಸ್ತಿದ್ದಾರೆ. ಇತ್ತ ಮೈಸೂರಿನಲ್ಲಂತೂ ಸಂಭ್ರಮ ಇನ್ನಷ್ಟು ಕಳೆ ಕಟ್ಟಿದೆ. ಅರಮನೆಯಲ್ಲೂ ಆಯಧ ಪೂಜೆ ವಿಶೇಷವಾಗಿ ಜರುಗಿದ್ದು, ನಾಳೆನ ವಿಜಯದಶಮಿ ಸಡಗರಕ್ಕೆ ಎಲ್ಲರೂ ರೆಡಿಯಾಗ್ತಿದ್ದಾರೆ. ಇಡೀ ಮೈಸೂರಿಗೆ ಮೈಸೂರೇ ದಸರಾ ಸಂಭ್ರಮದಲ್ಲಿ ಮುಳುಗಿದ್ರೆ, ಅದ್ಯಾಕೋ ಇದೊಂದು ಜಾಗದಲ್ಲಿ ಹಬ್ಬದ ಕಳೆಯೇ ಇಲ್ಲದಂತಾಗಿದೆ. ಎಲ್ಲವೂ ಚೆನ್ನಾಗಿದ್ದಿದ್ರೆ, ಇಲ್ಲಿಯೂ ಮೈಸೂರು ಅರಮನೆಯಲ್ಲಿರುವಷ್ಟೆ ಸಡಗರ ಸಂಭ್ರಮ ಮನೆ ಮಾಡಿರೋದು.. ಆದ್ರೆ, ಯಾವ ಸಂಭ್ರಮ ಸಡಗರವೂ ಇಲ್ಲದೆ ಕಳಾಹೀನವಾಗಿದೆ. ದರ್ಶನ್​​ ಜೈಲಿನಿಂದ ಹೊರಗಡೆಯಿದ್ದಿದ್ರೆ, ಆ ಕಥೆಯೇ ಬೇರೆ ಇರ್ತಿತ್ತು. ಇಲ್ಲಿ ಹಬ್ಬದ ಕಳೆ ಮನೆ ಮಾಡಿರುತ್ತಿತ್ತು.

ಅದನ್ನು ಪ್ರತಿ ಸಲದ ಆಯಧ ಪೂಜೆಯಂದು ಎಲ್ಲರೂ ನೋಡಿಯೇ ಇರ್ತಾರೆ. ಆದ್ರೆ, ಈ ಸಲ ಇಲ್ಲಿ ಹಬ್ಬದ ಸಡಗರವೇ ಇಲ್ಲ.. ಏಕೆಂದ್ರೆ, ದರ್ಶನ್​​ ಅಂಡ್​​ ಟೀಮ್​​ ಮಾಡಬಾರದ್ದೊಂದು ಕೆಲಸವನ್ನು ಮಾಡಿ ಈಗ ಕಂಬಿ ಎಣಿಸ್ತಿದ್ದಾರೆ. ದರ್ಶನ್​​ ಇಲ್ಲದೆ ಅವ್ರ ಫಾರ್ಮ್​​ ಹೌಸ್​​​ನಲ್ಲಿ ಹಬ್ಬದ ಸಡಗರವಿಲ್ಲ. ಆರ್​​ ಆರ್​​ ನಗರದ ಮುಂದೆಯೂ ಸಾಲುಗಟ್ಟಿ ನಿಲ್ಲಬೇಕಿದ್ದ ವಾಹನಗಳು ಕಾಣಿಸ್ತಿಲ್ಲ. ಇದಕ್ಕೆಲ್ಲ ಕಾರಣ ದರ್ಶನ್​​ ಜೈಲಿನಲ್ಲಿದ್ದಾರೆ ಅನ್ನೋದು.. ಡಿ ಬಾಸ್​​ ಇಲ್ಲದೆಯೇ ಇಲ್ಲಿ ಸಡಗರ ಮನೆ ಮಾಡೋದಿಲ್ಲ. ಇಲ್ಲಿನ ಪ್ರತಿಯೊಂದು ಸಡಗರಕ್ಕೂ ಒಡೆಯನ ಹಾಜರಾತಿ ಇರಲೇಬೇಕು ಅಗಲೇ ಅದಕ್ಕೊಂದು ಕಳೆ. ಏನ್ಮಾಡೋದು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರೋ ಈ ಯಜಮಾನನ ಪರಿಸ್ಥಿತಿ ಯಾರಿಗೂ ಬೇಡ ಎನ್ನುವಂತದ್ದು... ಕನ್ನಡಿಗರಿಗೆ ಅದ್ರಲ್ಲೂ ಮೈಸೂರಿನವ್ರಿಗೆ ದಸರ ಅಂದ್ರೆ, ಎಲ್ಲಿಲ್ಲದ ಸಡಗರ.

ದರ್ಶನ ಈ ಸಡಗರವನ್ನ ಈಗ ನಿಜಕ್ಕೂ ಮಿಸ್​​ ಮಾಡ್ಕೊಳ್ತಿದ್ದಾರೆ. ಅವ್ರ ಅಭಿಮಾನಿಗಳು ಹಾಗೂ ಜೊತೆಗಾರರು ಕೂಡ ಅವ್ರ ಗೈರಿನಲ್ಲಿ ಹಬ್ಬದ ಸಂಭ್ರಮವನ್ನ ಕಳ್ಕೊಂಡಿದ್ದಾರೆ. ನಿಮಗೆ ನೆನಪಿರಬಹುದು.. 2022ರಲ್ಲಿ ದರ್ಶನ್​​​​ ಆರ್​​ ಆರ್​​ ನಗರದ ಮನೆ ಮುಂದೆ ತಮ್ಮೆಲ್ಲಾ ಗಾಡಿಗಳನ್ನು ನಿಲ್ಲಿಸಿ ಪೂಜೆ ಮಾಡಿದ್ರು. ಅವತ್ತು ಆರ್​​ಆರ್​​ ನಗರದ ಮನೆ ಮುಂದೆ ಸಾವಿರಾರು ಜನ್ರು ಸೇರಿದ್ರು. ಅವ್ರಿಗೆಲ್ಲಾ ಮೂರು ನಾಲ್ಕು ಹಬ್ಬಗಳನ್ನ ಒಟ್ಟೋಟ್ಟಿಗೆ ಆಚರಿಸಿದ ಸಂಭ್ರಮ ಸಡಗರ.. ಒಂದು ವಿಜಯದಶಮಿ ಹಾಗೂ ಅಯುಧಪೂಜಿ.. ಇನ್ನೊಂದು ತಮ್ಮ ಪ್ರೀತಿಯ ನಾಯಕ ದರ್ಶನ್​​​ನನ್ನು ಹತ್ತಿರದಿಂದ ನೋಡೋ ಸಡಗರ.. ಮೊಗದೊಂದು ಐಶರಾಮಿ ಕಾರುಗಳನ್ನು ಒಟ್ಟೊಟ್ಟಿಗೆ ನೋಡಿ ಕಣ್ತುಂಬಿಕೊಳ್ಳುವುದು. ದರ್ಶನ್​​ ಅವತ್ತು ಯಾವೆಲ್ಲಾ ಕಾರುಗಳಿಗೆ ಪೂಜೆ ಮಾಡಿದ್ರು ಗೊತ್ತಾ? ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more