ದರ್ಶನ್ ಬೇಲ್​ ಭವಿಷ್ಯ ಸದ್ಯದಲ್ಲೇ ನಿರ್ಧಾರ: ಪವಿತ್ರಾ ಗೌಡ ಲಿಖಿತ ವಾದದಲ್ಲಿ ಏನಿದೆ?

ದರ್ಶನ್ ಬೇಲ್​ ಭವಿಷ್ಯ ಸದ್ಯದಲ್ಲೇ ನಿರ್ಧಾರ: ಪವಿತ್ರಾ ಗೌಡ ಲಿಖಿತ ವಾದದಲ್ಲಿ ಏನಿದೆ?

Published : Aug 07, 2025, 12:04 PM IST

ಪವಿತ್ರಾ ತನಗೆ ದರ್ಶನ್ ಬಿಟ್ರೆ ಉಳಿದ ಆರೋಪಿಗಳ ಪರಿಚಯವೇ ಇಲ್ಲ. ತನಗೆ ಮಗಳು ಮತ್ತು ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಬೇಲ್ ರದ್ದು ಮಾಡಬೇಡಿ ಅಂತ ವಿನಂತಿಸಿಕೊಂಡಿದ್ದಾಳೆ.

ದರ್ಶನ್ & ಗ್ಯಾಂಗ್​ನ ಬೇಲ್ ಭವಿಷ್ಯ ನಿರ್ಧಾರವಾಗುವ ಸಮಯ ಬಂದಿದೆ. ಸುಪ್ರೀಂ ಕೋರ್ಟ್​ಗೆ ಡಿ ಗ್ಯಾಂಗ್ ಮತ್ತು ಸರ್ಕಾರದ ಪರ ಲಿಖಿತ ವಾದ ಸಲ್ಲಿಕೆಯಾಗಿದ್ದು ಇನ್ನೇನು ಅಂತಿಮ ತೀರ್ಪು ಬರೋದು ಮಾತ್ರ ಬಾಕಿ ಇದೆ. ಹಾಗಾದ್ರೆ ಏನಾಗಲಿದೆ ದಾಸನ ಬೇಲ್ ಭವಿಷ್ಯ.. ವಾಚ್ ದಿಸ್ ಸ್ಟೋರಿ. ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ದರ್ಶನ್ ಅಂಡ್​​ ಗ್ಯಾಂಗ್​ಗೆ ನೀಡಿರುವ ಬೇಲ್ ರದ್ದು ಮಾಡಬೇಕು ಅಂತ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರ ಮತ್ತು ದರ್ಶನ್​  ಗ್ಯಾಂಗ್​ಗೆ ಲಿಖಿತ ವಾದ ಸಲ್ಲಿಸೋಕೆ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿತ್ತು. ಇದೀಗ ಲಿಖಿತ ವಾದ ಕೋರ್ಟ್​ಗೆ ತಲುಪಿದ್ದು ಅತೀ ಶಿಘ್ರದಲ್ಲೇ ಅಂತಿಮ ತೀರ್ಪು ಹೊರಬೀಳಲಿದೆ.  ಹೌದು ಪೊಲೀಸ್ ತನಿಖೆಯ ಲೋಪಗಳನ್ನು ಉಲ್ಲೇಖಿಸಿ ದರ್ಶನ್ ಪರ ವಕೀಲರು ಲಿಖಿತ ವಾದವನ್ನ ಸಲ್ಲಿಸಿದ್ದಾರೆ. ಇನ್ನೂ ಪವಿತ್ರಾ ಗೌಡ ಪರವಾಗಿ ಪ್ರತ್ಯೇಕವಾಗಿ ವಾದಮಂಡಿಸಲಾಗಿದೆ.

ಹೌದು ಪವಿತ್ರಾ ತನಗೆ ದರ್ಶನ್ ಬಿಟ್ರೆ ಉಳಿದ ಆರೋಪಿಗಳ ಪರಿಚಯವೇ ಇಲ್ಲ. ತನಗೆ ಮಗಳು ಮತ್ತು ವಯಸ್ಸಾದ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಇದ್ದು ಬೇಲ್ ರದ್ದು ಮಾಡಬೇಡಿ ಅಂತ ವಿನಂತಿಸಿಕೊಂಡಿದ್ದಾಳೆ. ಆದ್ರೆ ಪೊಲೀಸರು ಕೂಡ ಈ ಕೊಲೆ ಆರೋಪಿಗಳ   ಬೇಲ್ ಯಾಕೆ ರದ್ದು ಮಾಡಬೇಕು ಅನ್ನೋದಕ್ಕೆ ಲಿಖಿತ ಕಾರಣಗಳನ್ನ ಕೊಟ್ಟಿದ್ದಾರೆ. ದರ್ಶನ್ ಮತ್ತು ಇತರ ಆರೋಪಿಗಳ ಬೇಲ್​ನ ಯಾಕೆ ರದ್ದು ಮಾಡಬೇಕು ಅನ್ನೋದನ್ನ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ ಪೊಲೀಸರು. ಸದ್ಯ ಎರಡೂ ಕಡೆಯ ವಾದವನ್ನ ಪಡೆದುಕೊಂಡಿರೋ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸೋದು ಮಾತ್ರ ಬಾಕಿ ಉಳಿದಿದೆ. ಹೌದು ಸುಪ್ರೀಂ ಕೋರ್ಟ್​ನಲ್ಲಿ ಲಿಖಿತ ವಾದ ಮಂಡನೆ ಆದ ಬೆನ್ನಲ್ಲೇ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಬೇಲ್ ರದ್ದಾಗುವ ಭೀತಿಯಲ್ಲಿರೋ ದರ್ಶನ್ ‘ತನ್ನನ್ನ ದೇವರೇ ಕಾಪಾಡಬೇಕು’ ಅಂತ  ದೇವಸ್ಥಾನಗಳಿಗೆ ಅಲೀತಾ ಇದ್ದಾರೆ. ಆದ್ರೆ ನ್ಯಾಯದೇಗುಲ ಏನು ತೀರ್ಪು ಕೊಡುತ್ತೆ ಅನ್ನೋದರ ಮೇಲೆ ಡಿ ಗ್ಯಾಂಗ್ ಭವಿಷ್ಯ ನಿಂತುಕೊಂಡಿದೆ.

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more