ಆಗ ಸಾರಥಿ.. ಈಗ ಡೆವಿಲ್: ಮರುಕಳಿಸುತ್ತಾ ಇತಿಹಾಸ.. ಅಂದರ್ ಆಗ್ತಾನಾ ದರ್ಶನ್?

ಆಗ ಸಾರಥಿ.. ಈಗ ಡೆವಿಲ್: ಮರುಕಳಿಸುತ್ತಾ ಇತಿಹಾಸ.. ಅಂದರ್ ಆಗ್ತಾನಾ ದರ್ಶನ್?

Published : Jul 26, 2025, 10:35 AM IST

ದರ್ಶನ್ ನಟನೆಯ ‘ದಿ ಡೆವಿಲ್’ ಸೆಪ್ಟೆಂಬರ್ ಅಂತ್ಯಕ್ಕೆ ತೆರೆಗೆ ಬರಲಿದೆ. ಆದ್ರೆ ಡೆವಿಲ್ ರಿಲೀಸ್ ಹೊತ್ತಲ್ಲಿ ದರ್ಶನ್ ಹೊರಗಿರ್ತಾರೋ ಅಥವಾ ಮತ್ತೆ ಜೈಲು ಸೇರ್ತಾರೋ ಗೊತ್ತಿಲ್ಲ.

ದರ್ಶನ್ ನಟನೆಯ ‘ದಿ ಡೆವಿಲ್’ ಸೆಪ್ಟೆಂಬರ್ ಅಂತ್ಯಕ್ಕೆ ತೆರೆಗೆ ಬರಲಿದೆ. ಆದ್ರೆ ಡೆವಿಲ್ ರಿಲೀಸ್ ಹೊತ್ತಲ್ಲಿ ದರ್ಶನ್ ಹೊರಗಿರ್ತಾರೋ ಅಥವಾ ಮತ್ತೆ ಜೈಲು ಸೇರ್ತಾರೋ ಗೊತ್ತಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಈ ಕುರಿತು ಸುಪ್ರೀಂ ತೀರ್ಪು ಹೊರಬೀಳಲಿದೆ. ಹಾಗೇನಾದ್ರೂ ಆದ್ರೆ ಮತ್ತೆ ಸಾರಥಿ ಸಮಯಲ್ಲಿ ನಡೆದ ಘಟನೆ ಮರುಕಳಿಸಿದಂತೆ ಆಗುತ್ತೆ. ಅದು 2011ನೇ ಇಸವಿ ಸೆಪ್ಟೆಂಬರ್ 30ನೇ ತಾರೀಖು. ರಾಜ್ಯಾದ್ಯಂತ ದರ್ಶನ್ ನಟಿಸಿದ್ದ ಸಾರಥಿ ಸಿನಿಮಾ ರಿಲೀಸ್ ಆಗಿತ್ತು. ದರ್ಶನ್ ಆ ಚಿತ್ರದಲ್ಲಿ ಆಟೋ ಚಾಲಕನ ಪಾತ್ರ ಮಾಡಿದ್ರು. ದರ್ಶನ್ ಸೋದರ ದಿನಕರ್ ತೂಗುದೀಪ ಚಿತ್ರವನ್ನ ನಿರ್ದೇಶನ ಮಾಡಿದ್ರು. ಆದ್ರೆ ಸಿನಿಮಾ ರಿಲೀಸ್ ಆಗೋ ಹೊತ್ತಲ್ಲಿ ಚಿತ್ರದ ನಾಯಕ ಮಾತ್ರ ಪರಪ್ಪನ ಅಗ್ರಹಾರದಲ್ಲಿದ್ದ. ಹೌದು ಸೆಪ್ಟೆಂಬರ್ 8 ನೇ ತಾರೀಖು ದರ್ಶನ್ ಪತ್ನಿ ವಿಜಯಲಕ್ಷ್ಮೀ ದಾಖಲಿಸಿದ್ದ ಕೇಸ್​ನಲ್ಲಿ ದರ್ಶನ್​ರನ್ನ ಪೊಲೀಸರು ಅರೆಸ್ಟ್ ಮಾಡಿದ್ರು.

ವರದಕ್ಷಿಣೆ ಕಿರುಕುಳ, ಮತ್ತು ಅಟೆಂಪ್ಟ್ ಮರ್ಡರ್​ ಕೇಸ್ ದಾಖಲಿಸಿ ದರ್ಶನ್​ನ ಜೈಲಿಗಟ್ಟಲಾಗಿತ್ತು. ಇತ್ತ ಸಾರಥಿ ರಿಲೀಸ್​ಗೆ ಮೊದಲೇ ತಯಾರಿ ನಡೆದುಹೋಗಿತ್ತು. ದರ್ಶನ್ ಜೈಲಿನಲ್ಲಿ ಇದ್ದಾಗಲೇ ಸಿನಿಮಾ ಹೊರಗೆ ಬಂದಿತ್ತು. ಅಚ್ಚರಿ ಅಂದ್ರೆ ಹೀರೋ ಜೈಲಿನಲ್ಲಿದ್ದಾಗ ಬಂದ ಚಿತ್ರವನ್ನ ಫ್ಯಾನ್ಸ್ ಅಪ್ಪಿ ಒಪ್ಪಿಕೊಂಡ್ರು. ಸಾರಥಿ ಬಿಗ್ ಹಿಟ್ ಆಯಿತು. ಮುಂದೆ ವಿಜಯಲಕ್ಷ್ಮೀ ಕೇಸ್ ವಾಪಾಸ್ ಪಡೆದ್ರು, ದರ್ಶನ್ ಹೊರಬಂದು ಅಭಿಮಾನಿಗಳ ಕ್ಷಮೆ ಕೇಳಿದ್ರು. ದರ್ಶನ್ ಮತ್ತು ಇತರ ಆರೋಪಿಗಳಿಗೆ ಹೈಕೋರ್ಟ್ ನೀಡಿರೋ ಬೇಲ್ ರದ್ದುಗೊಳಿಸುವ ವಿಚಾರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂ ತೀರ್ಪು ಹೊರಬೀಳಲಿದೆ. ಈಗಾಗ್ಲೇ ಈ ಕುರಿತ ವಿಚಾರಣೆ ನಡೆದಿದ್ದು ತೀರ್ಪನ್ನ ಸುಪ್ರೀಂ ಕೋರ್ಟ್ ಕಾದಿರಿಸಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ್ರೆ ದರ್ಶನ್ ಮತ್ತೆ ಜೈಲು ಸೇರಲೇಬೇಕು.

ಸದ್ಯ ದಿ ಡೆವಿಲ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಈಗಾಗ್ಲೇ ಡಬ್ಬಿಂಗ್ ಕೂಡ ಮುಕ್ತಾಯ ಆಗಿದೆ. ಕೊನೆಯ ಸಾಂಗ್ ಶೂಟ್​ಗೆ ಥೈಲ್ಯಾಂಡ್​ಗೆ ಹಾರಿದ್ದ ದಿ ಡೆವಿಲ್ ಟೀಂ ಕಳೆದ ಭಾನುವಾರವೇ ಸಾಂಗ್ ಶೂಟ್ ಮುಗಿಸಿ ಬೆಂಗಳೂರಿಗೆ ಮರಳಿದೆ. ದಿ ಡೆವಿಲ್ ಸಿನಿಮಾದ ಕೆಲಸಗಳು ಭರದಿಂದ ನಡೀತಾ ಇದ್ದು ಬಹುತೇಕ ಸೆಪ್ಟೆಂಬರ್ ಕೊನೆವಾರ ದಿ ಡೆವಿಲ್ ತೆರೆಗೆ ಬರಲಿದೆ.  ಆದ್ರೆ ಡೆವಿಲ್ ರಿಲೀಸ್ ಟೈಂನಲ್ಲಿ ದರ್ಶನ್ ಹೊರಗಿರ್ತಾರೋ, ಒಳಗಿರ್ತಾರೋ ಗೊತ್ತಿಲ್ಲ. ಅಚ್ಚರಿ ಅಂದ್ರೆ ಸಾರಥಿ ಕೂಡ ಸೆಪ್ಟೆಂಬರ್ ಕೊನೆವಾರವೇ ರಿಲೀಸ್ ಆಗಿತ್ತು. ಆಗಲೂ ದರ್ಶನ್ ಜೈಲು ಸೇರಿದ್ರು. ಮತ್ತೀಗ ದಿ ಡೆವಿಲ್ ಕೂಡ ಸೆಪ್ಟೆಂಬರ್ ಕೊನೆವಾರ ಬರ್ತಾ ಇದೆ. ರಿಲೀಸ್ ಟೈಂ ಹೀರೋ ಎಲ್ಲಿರ್ತಾನೇ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ..!

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more