
ಬ್ರ್ಯಾಟ್ ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾ. ಕೌಸಲ್ಯ ಸುಪ್ರಜಾ ರಾಮ ಬಳಿಕ ಈ ಜೋಡಿ ಮತ್ತೊಂದು ಸೆನ್ಸಿಬಲ್ ಸಿನಿಮಾ ಕೊಟ್ಟಿದೆ. ಬೆಟ್ಟಿಂಗ್ ಕುರಿತ ಥ್ರಿಲ್ಲಿಂಗ್ ಕಥೆ ಇರೋ ಈ ಸಿನಿಮಾದಲ್ಲಿ ಒಂದು ಮೆಸೇಜ್ ಕೂಡ ಇದೆ.
ಕಳೆದ ವಾರ ತೆರೆಗೆ ಬಂದ ಶಶಾಂಕ್ ನಿರ್ದೇಶನದ , ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಜೂಜಿನ ಅಡ್ಡೆಯ ಥ್ರಿಲ್ಲಿಂಗ್ ಕಥೆಯಿರೋ ಬ್ರ್ಯಾಟ್ನಲ್ಲಿ ಒಂದು ಮೆಸೇಜ್ ಕೂಡ ಇದೆ. ಬ್ರ್ಯಾಟ್ ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾ. ಕೌಸಲ್ಯ ಸುಪ್ರಜಾ ರಾಮ ಬಳಿಕ ಈ ಜೋಡಿ ಮತ್ತೊಂದು ಸೆನ್ಸಿಬಲ್ ಸಿನಿಮಾ ಕೊಟ್ಟಿದೆ. ಬೆಟ್ಟಿಂಗ್ ಕುರಿತ ಥ್ರಿಲ್ಲಿಂಗ್ ಕಥೆ ಇರೋ ಈ ಸಿನಿಮಾದಲ್ಲಿ ಒಂದು ಮೆಸೇಜ್ ಕೂಡ ಇದೆ.
ಕಾನ್ಸ್ಟೇಬಲ್ ಮಹದೇವಯ್ಯ ಪಾತ್ರದಲ್ಲಿ ಅಚ್ಯುತ್ ಕುಮಾರ್, ಬ್ರ್ಯಾಟ್ ಕ್ರಿಸ್ಟಿಯಾಗಿ ಕೃಷ್ಣನ ನಟನೆ ಸೊಗಸಾಗಿದೆ. ಕೃಷ್ಣ-ಮನಿಷಾ ಕೆಮೆಸ್ಟ್ರಿ ಕೂಡ ಚೆಂದವಾಗಿದೆ. ಅರ್ಜುನ್ ಜನ್ಯ ಮ್ಯೂಸಿಕ್ನಲ್ಲಿ ಮೂಡಿಬಂದಿರೋ ಸಾಂಗ್ಸ್ ಕೂಡ ಸಖತ್ ಆಗಿವೆ. ಸದ್ಯ ಪ್ರೇಕ್ಷಕರ ರೆಸ್ಪಾನ್ಸ್ನಿಂದ ಖುಷಿಯಾಗಿರೋ ಬ್ರ್ಯಾಟ್ ಟೀಮ್ ಗೆಲುವಿನ ನಗೆ ಬೀರಿದೆ. ಕನ್ನಡದ ಬಳಿಕ ಪ್ಯಾನ್ ಇಂಡಿಯಾ ರಿಲೀಸ್ ಮಾಡೋ ತಯಾರಿಯಲ್ಲಿದೆ. ಒಟ್ಟಾರೆ ಶಶಾಂಕ್ - ಕೃಷ್ಣ ಕಾಂಬೋ ಮತ್ತೊಮ್ಮೆ ವರ್ಕ್ ಆಗಿದೆ. ಸದ್ಯ ಒಳ್ಳೆಯ ರೆಸ್ಪಾನ್ಸ್ ಪಡೆದಿರೋ ಬ್ರ್ಯಾಟ್ ಮತ್ತಷ್ಟು ಪ್ರೇಕ್ಷಕರ ಮೆಚ್ಚುಗೆಯ ನಿರೀಕ್ಷೆಯಲ್ಲಿದೆ.