
ದರ್ಶನ್ಗೆ ಮತ್ತೆ ಬೆನ್ನು ನೋವು ಬೆನ್ನು ಬಿದ್ದಿದೆಯಂತೆ. ಬೇಲ್ ರದ್ದಾಗಿ ಜೈಲು ಸೇರಿದ ಎರಡು ತಿಂಗಳ ಬಳಿಕ ದಾಸ ಮತ್ತೆ ಬೆನ್ನುನೋವು ಅಂತ ದೂರನ್ನಿತ್ತಿದ್ದಾನೆ. ಸದ್ಯ ಜೈಲಿನಲ್ಲಿರೋ ವೈದ್ಯರೇ ದರ್ಶನ್ಗೆ ಚಿಕಿತ್ಸೆ ನೀಡಿದ್ದಾರೆ.
ದರ್ಶನ್ಗೆ ಮತ್ತೆ ಬೆನ್ನು ನೋವು ಬೆನ್ನು ಬಿದ್ದಿದೆಯಂತೆ. ಬೇಲ್ ರದ್ದಾಗಿ ಜೈಲು ಸೇರಿದ ಎರಡು ತಿಂಗಳ ಬಳಿಕ ದಾಸ ಮತ್ತೆ ಬೆನ್ನುನೋವು ಅಂತ ದೂರನ್ನಿತ್ತಿದ್ದಾನೆ. ಸದ್ಯ ಜೈಲಿನಲ್ಲಿರೋ ವೈದ್ಯರೇ ದರ್ಶನ್ಗೆ ಚಿಕಿತ್ಸೆ ನೀಡಿದ್ದಾರೆ. ಮುಂದೆ ಇದೇ ನೆಪ ಇಟ್ಟುಕೊಂಡು ಕಳೆದ ಬಾರಿಯಂತೆ ದರ್ಶನ್ ಬೇಲ್ಗೆ ಅರ್ಜಿ ಸಲ್ಲಿಸಬಹುದಾ..? ದರ್ಶನ್ ಮುಂದಿನ ದಾರಿ ಏನು..? ಆ ಕುರಿತ ಸ್ಟೋರಿ ನೋಡಿ. ಯೆಸ್ ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ ಮೇಲೆ ದರ್ಶನ್ ಮತ್ತೆ ಜೈಲು ಸೇರಿ ಎರಡು ತಿಂಗಳು ಕಂಪ್ಲೀಟ್ ಆಗಿವೆ. ಈ ಎರಡು ತಿಂಗಳಲ್ಲಿ ದರ್ಶನ್ ಪರ ವಕೀಲರು ಮೂರು ಮೂರು ಬಾರಿ ಹಾಸಿಗೆ, ಬ್ಲಾಂಕೆಟ್, ದಿಂಬು ಕೊಡಿ ಅಂತ ಅರ್ಜಿ ಸಲ್ಲಿಸಿದ್ದಾರೆ. ದಾಸನ ಈ ಹಾಸಿಗೆ, ದಿಂಬಿನ ಸಮಸ್ಯೆ ಇನ್ನೂ ಬಗೆಹರೆದಿಲ್ಲ. ಅದರ ನಡುವೆ ಈಗ ಮತ್ತೆ ದರ್ಶನ್ಗೆ ಬೆನ್ನುನೋವು ಬೆನ್ನುಬಿದ್ದಿದೆ.
ಈ ಎರಡು ತಿಂಗಳ ಅವಧಿಯಲ್ಲಿ ದರ್ಶನ್ ಬೆನ್ನು ನೋವಿನ ಬಗ್ಗೆ ಕಂಪ್ಲೆಂಟ್ ಮಾಡಿರಲಿಲ್ಲ. ಆದ್ರೆ ಎರಡು ದಿನಗಳ ಹಿಂದೆ ಜೈಲಾಧಿಕಾರಿಗಳ ಮುಂದೆ ತನಗೆ ವಿಪರೀತ ನೋವು ಕಾಡ್ತಾ ಇದೆ ಕಂಪ್ಲೆಂಟ್ ಮಾಡಿರೋ ದಾಸನಿಗೆ, ಜೈಲು ಅಧಿಕಾರಿಗಳಿಂದಲೇ ಟ್ರೀಟ್ಮೆಂಟ್ ಕೊಡಿಸಲಾಗಿದೆ. ಹೌದು ಈ ಸಾರಿ ಅದೆಷ್ಟೇ ದೊಡ್ಡ ಆರೋಗ್ಯ ಸಮಸ್ಯೆ ಕಾಡಿದ್ರೂ ದರ್ಶನ್ಗೆ ಬೇಲ್ ಸಿಗೋದು ಅನುಮಾನ. ಈ ಹಿಂದೆ ದರ್ಶನ್ ಬೆನ್ನು ನೋವಿನ ನೆಪ ಹೇಳಿ ಮೆಡಿಕಲ್ ಗ್ರೌಂಡ್ಸ್ ಮೇಲೆ ಮೊದಲ ಬಾರಿ ಬೇಲ್ ಪಡೆದುಕೊಂಡಿದ್ರು. ಆಗ ದರ್ಶನ್ ಪರ ವಕೀಲರು ದಾಸನಿಗೆ ಸರ್ಜರಿ ಮಾಡದೇ ಹೋದ್ರೆ ಸ್ಟ್ರೋಕ್ ಆಗಬಹುದು ಅಂತ ವಾದ ಮಂಡಿಸಿದ್ರು. ಇದನ್ನ ಪುರಸ್ಕರಿಸಿ ಹೈಕೋರ್ಟ್ ಬೇಲ್ ನೀಡಿತ್ತು. ಆದ್ರೆ ಸರ್ಜರಿ ನೆಪ ಹೇಳಿ ಹೊರಬಂದ ದರ್ಶನ್ ಸರ್ಜರಿ ಮಾಡಿಸಲಿಲ್ಲ. ಬದಲಾಗಿ ಪತ್ನಿ ಜೊತೆ ಌನವರ್ಸಿರಿ ಪಾರ್ಟಿ ಮಾಡಿದ್ರು.
ದಿ ಡೆವಿಲ್ ಶೂಟಿಂಗ್ ಮಾಡಿಕೊಂಡು, ಥೈಲ್ಯಾಂಡ್ಗೆ ಹೋಗಿ ಡ್ಯುಯೆಟ್ ಹಾಡಿ ಬಂದ್ರು. ಸೋ ಮತ್ತೆ ಬೆನ್ನುನೋವಿನ ನೆಪ ಹೇಳಿಕೊಂಡು ಬೇಲ್ ಗೆ ಅರ್ಜಿ ಸಲ್ಲಿಸೋದು ಕಷ್ಟ. ಅಲ್ಲದೇ ದರ್ಶನ್ ಬೇಲ್ ಸುಪ್ರೀಂನಲ್ಲಿ ರದ್ದಾಗಿರೋದ್ರಿಂದ ಈ ಸಾರಿ ಸುಪ್ರೀಂನಲ್ಲೇ ಜಾಮೀನಿಗೆ ಅರ್ಜಿ ಸಲ್ಲಿಸಬೇಕಾಗುತ್ತೆ. ಸೋ ಸದ್ಯಕ್ಕೆ ದಾಸನ ಪರ ವಕೀಲರು ಅಂಥಾ ಸಾಹಸ ಮಾಡಲಾರರು. ದರ್ಶನ್ಗೆ ಬೆನ್ನು ನೋವು ಇರೋದು ಸುಳ್ಳೇನೂ ಅಲ್ಲ. ಅಸಲಿಗೆ ಬೃಂದಾವನ ಸಿನಿಮಾ ಟೈಂನಲ್ಲಿ ಕುದುರೆ ಸವಾರಿ ಮಾಡೋವಾಗ ಬಿದ್ದು ಪೆಟ್ಟು ಮಾಡಿಕೊಂಡ ದಾಸನಿಗೆ ಆಗಿನಿಂದಲೇ ಬೆನ್ನುನೋವು ಅಂಟಿಕೊಂಡಿತ್ತು. ಈ ನಡುವೆ ಅನೇಕ ಬಾರಿ ಸಿನಿಮಾ ಸಾಹಸ ಸನ್ನಿವೇಶಗಳಲ್ಲಿ ಪೆಟ್ಟಾಗಿ ಮತ್ತೆ ಮತ್ತೆ ಬೆನ್ನು ನೋವು ಮರುಕಳಿಸಿತ್ತು. ದಿ ಡೆವಿಲ್ ಶೂಟ್ ಟೈಂನಲ್ಲೇ ಮಿತಿಮೀರಿದ ಬೆನ್ನು ನೋವಿನಿಂದ ದರ್ಶನ್ ಬಿದ್ದು ಒದ್ದಾಡಿದ ದೃಶ್ಯಗಳು ಹರಿದಾಡಿದ್ವು. ಸೋ ದರ್ಶನ್ ಬೆನ್ನು ನೋವು ಅಂತ ಸುಳ್ಳೇನೂ ಹೇಳ್ತಿಲ್ಲ. ಆದ್ರೆ ಸತ್ಯ ಹೇಳಿದ್ರೂ ಪ್ರಯೋಜನ ಏನೂ ಇಲ್ಲ. ಜೈಲಿನ ವೈದ್ಯರು ಕೊಡುವ ಚಿಕಿತ್ಸೆ ಪಡೆದುಕೊಂಡು ತೆಪ್ಪಗಿರಬೇಕಷ್ಟೇ. ಮಾಡಿದುಣ್ಣೋ ಮಹರಾಯ ಅಂತ ನಿತ್ಯ ನೋವು ಉಣ್ಣಲೇಬೇಕು.