
ದೊಡ್ಡ ಆಟಕ್ಕೆ ಜೊತೆಯಾದ ರಾಜವರ್ಧನ್ & ಚಂದ್ರಚೂಡ್.. ರಾಜವರ್ಧನ್ ಹೊಸ ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಆ್ಯಕ್ಷನ್ ಕಟ್.. ಮೇ ತಿಂಗಳಲ್ಲಿ ಸೆಟ್ಟೇರ್ತಿದೆ ಅಚ್ಚರಿ ಕಾಂಬಿನೇಷನ್ ನ ಅದ್ಧೂರಿ ಸಿನಿಮಾ.. ಉದ್ಯಮದ ಇಬ್ಬರು ದಿಗ್ಗರಿಂದ ಈ ಚಿತ್ರ ಲಾಂಚ್ ಆಗಲಿದೆ..
ಸ್ಯಾಂಡಲ್ವುಡ್ನಲ್ಲಿ ಜಮ್ನ ಅನ್ನೋ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಚಂದ್ರಚೂಡ್ ಈಗ ಮತ್ತೆ ಆಕ್ಷನ್ ಕಟ್ ಹೇಳೋಕೆ ಮರಳಿದ್ದಾರೆ. ಚಂದ್ರಚೂಡ್ ನಿರ್ದೇಶನದಲ್ಲಿ ಡಿಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಹೀರೋ ಆಗಿ ನಟಿಸುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಈಗ ಔಟ್ ಅಂಡ್ ಔಟ್ ಮಾಸ್ ಎಂಟರ್ಟೈನ್ಮೆಂಟ್ ಆಗೋ ಕಥೆಯೊಂದನ್ನ ರಾಜವರ್ಧನ್ ಗಾಗಿಯೇ ಹೊತ್ತು ತಂದಿದ್ದಾರೆ. ಮೇ ತಿಂಗಳಲ್ಲಿ ಈ ಸಿನಿಮಾ ಅನೌನ್ಸ್ ಆಗಲಿದ್ದು, ಟೈಟಲ್ ಹಾಗು ನಿರ್ಮಾಣ ಸಂಸ್ಥೆಯನ್ನ ರಿವೀಲ್ ಮಾಡಲಿದ್ದಾರೆ ಚಕ್ರವರ್ತಿ ಚಂದ್ರಚೂಡ್.
ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ಹೊಸ ಹೊಸ ಪ್ರತಿಭೆಗಳು ಅಳತೊಡಗಿವೆ. ಹಲವು ಹಳೆಯ ಪ್ರತಿಭೆಗಳೂ ಕೂಡ ಹೊಸ ದಾರಿ ಹಿಡಿದು ಹೊಸ ಹೊಸ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಈ ಮಾತಿಗೆ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ. ಇದೀಗ ಸದ್ಯದ ಉದಾಹರಣೆ ಎಂದರೆ, ಅದು ಬಹುಮುಖ ಪ್ರತಿಭೆ ಚಂದ್ರಚೂಡ್ (Chakravarthy Chandrachud) ಹಾಗೂ ನಟ ರಾಜವರ್ಧನ್ (Rajavardhan) ಜೋಡಿ. ಹೌದು, ಡಿಂಗ್ರಿ ನಾಗರಾಜ್ ಮಗ ನಟ ರಾಜವರ್ಧನ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಜೋಡಿ ಬಿಗ್ ಬಜೆಟ್ ಸಿನಿಮಾವೊಂದನ್ನು ಬಿಗ್ ಪ್ರೊಡಕ್ಷನ್ ಹೌಸ್ ಮೂಲಕ ಶುರು ಮಾಡಲಿದ್ದಾರೆ.
ನನ್ನ ಮೂಗು-ಮುಖದ ಬಗ್ಗೆ ಕಾಮೆಂಟ್ ಮಾಡ್ತಾರೆ; ತೀರಾ ಮನಸ್ಸಿಗೆ ತಗೊಂಡ್ರೆ ಬಿಟ್ಟು ಓಡಿ ಹೋಗ್ಬೇಕು ಅಷ್ಟೇ!
ದೊಡ್ಡ ಆಟಕ್ಕೆ ಜೊತೆಯಾದ ರಾಜವರ್ಧನ್ & ಚಂದ್ರಚೂಡ್.. ರಾಜವರ್ಧನ್ ಹೊಸ ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಆ್ಯಕ್ಷನ್ ಕಟ್..
ಮೇ ತಿಂಗಳಲ್ಲಿ ಸೆಟ್ಟೇರ್ತಿದೆ ಅಚ್ಚರಿ ಕಾಂಬಿನೇಷನ್ ನ ಅದ್ಧೂರಿ ಸಿನಿಮಾ.. ಉದ್ಯಮದ ಇಬ್ಬರು ದಿಗ್ಗರಿಂದ ಈ ಚಿತ್ರ ಲಾಂಚ್ ಆಗಲಿದೆ..ಈ ಕಾಂಬಿನೇಷನ್ ಹಲವು ಮೊದಲುಗಳಿಗೆ ಸಾಕ್ಷಿಯಾಗೋ ಸೂಚನೆ ಕೊಟ್ಟಿದೆ..
ರಾಜವರ್ಧನ್ ಉದ್ಯಮದಲ್ಲಿ ದೊಡ್ಡ ಆಶಯದೊಂದಿಗೆ ಸತತ ಪರಿಶ್ರಮ ಪಡ್ತಿರೋ 200% ಹೀರೋ ಮೆಟಿರಿಯಲ್... ಒಂದಷ್ಟು ಏಳು ಬೀಳುಗಳ ಆದ್ಮೇಲೆ ಇದೀಗ 'ಪಕ್ಕಾ ಈ ಸಲ ಗೆಲುವು ನಮ್ದೇ' ಅನ್ನೋ ನಂಬಿಕೆ ಹುಟ್ಟಿಸಿರೋ ಕಥೆ ಮತ್ತು ತಂಡ ರಾಜವರ್ಧನ್ ಪಾಲಿಗೆ ಸಿಕ್ಕಿದೆ. ಅದ್ರಂತೆ ಬಹುಮುಖ ಪ್ರತಿಭೆ ಚಕ್ರವರ್ತಿ ಚಂದ್ರಚೂಡ್ ಔಟ್ ಅಂಡ್ ಔಟ್ ನಮ್ಮದೇ ಸೊಗಡಿನ ಮಾಸ್ ಎಂಟರ್ಟೈನ್ಮೆಂಟ್ ಆಗೋ ಕಥೆಯೊಂದನ್ನ ರಾಜವರ್ಧನ್ ಗಾಗಿಯೇ ಹೊತ್ತು ತಂದಿದ್ದಾರೆ...
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..