Oct 27, 2022, 1:01 PM IST
ತುಮಕೂರು(ಅ.27): ಹೆಡ್‌ಬುಶ್ ಚಿತ್ರದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಅಂತ ಆರೋಪಿಸಿ ಡಾಲಿ ಧನಂಜಯ್ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಭಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ಲಕ್ಷ್ಮೀ ಚಿತ್ರಮಂದಿರದಲ್ಲಿ ಇಂದು(ಗುರುವಾರ) ನಡೆದಿದೆ. ನಟ ಡಾಲಿ ಧನಂಜಯ್ ಕಟೌಟ್‌ಗೆ ಮಸಿ ಬಳಿದು ಭಜರಂಗ ದಳ ಕಾರ್ಯಕರ್ತರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. ಡಾಲಿ ಧನಂಜಯ್ ನಟನೆ ಹಾಗೂ ನಿರ್ಮಾಣ ಮಾಡಿರುವ ಹೆಡ್‌ಬುಶ್ ಚಿತ್ರದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಭಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಹೆಡ್ ಬುಷ್ ನೈಜ ಘಟನೆಯೇ?: ಡಾಲಿ ಧನಂಜಯ್‌ಗೆ ಬಂದಿತ್ತಾ ಜೀವ ಬೆದರಿಕೆ?