ಕರುನಾಡಿನ ಪ್ರೀತಿಯ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದೇ ಪ್ರಶಸ್ತಿ ಅವರ ತಂದೆ ಡಾ. ರಾಜ್ ಕುಮಾರ್ ಅವರಿಗೂ ಸಿಕ್ಕಿತ್ತು. ಹೀಗಾಗಿ ತಂದೆಗೆ ತಕ್ಕ ಮಗ ಅನಿಸಿಕೊಂಡಿದ್ದಾರೆ ಅಪ್ಪು.
ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ತಂದೆ ಪಡೆದ ಗೌರವವು ಇಂದು ಮಗನಿಗೆ ಸಿಗುತ್ತಿದೆ. ಅಪ್ಪ ದೇವತಾ ಮನುಷ್ಯ ಆದರೆ, ಅಪ್ಪು ದೇವರಾದ ಮನುಷ್ಯ. ತಂದೆ ಹಾಕಿಕೊಟ್ಟ ದಾರಿಯಲ್ಲೇ ಸಾಗಿದ ಅಪ್ಪು, ಸಾಧಿಸಿದ್ದು ಅಪಾರ. ಈ ಅಪ್ಪ ಮಕ್ಕಳ ಸಂಬಂಧ ಅದ್ಭುತವಾಗಿತ್ತು. ಹಾಗಾಗಿ ಪುನೀತ್ ತಂದೆಗೆ ತಕ್ಕ ರತ್ನ ಅನಿಸಿಕೊಂಡಿದ್ದಾರೆ.
Rambha Car Accident ನಟಿ ರಂಭಾ ಕಾರು ಅಪಘಾತ; ಮಗಳು ಆಸ್ಪತ್ರೆಯಲ್ಲಿ ಸೀರಿಯಸ್