
ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ 4 ವರ್ಷಗಳೇ ಆದವು. ಆದ್ರೆ ಇವತ್ತಿಗೂ ಅಪ್ಪು ಕನ್ನಡಿಗರ ಮನೆ- ಮನಸ್ಸಿಂದ ದೂರವಾಗಿಲ್ಲ. ಸದ್ಯ ‘ಅಪ್ಪು ಫ್ಯಾನ್ ಡಮ್’ ಆ್ಯಪ್ ರಿಲೀಸ್ ಆಗಿದ್ದು, ಇಡೀ ದೇಶದಲ್ಲೆ ಇಂಥದ್ದೊಂದು ವಿಭಿನ್ನ ಪ್ರಯತ್ನ ನಡೆದಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ 4 ವರ್ಷಗಳೇ ಆದವು. ಆದ್ರೆ ಇವತ್ತಿಗೂ ಅಪ್ಪು ಕನ್ನಡಿಗರ ಮನೆ- ಮನಸ್ಸಿಂದ ದೂರವಾಗಿಲ್ಲ. ಸದ್ಯ ‘ಅಪ್ಪು ಫ್ಯಾನ್ ಡಮ್’ ಆ್ಯಪ್ ರಿಲೀಸ್ ಆಗಿದ್ದು, ಇಡೀ ದೇಶದಲ್ಲೆ ಇಂಥದ್ದೊಂದು ವಿಭಿನ್ನ ಪ್ರಯತ್ನ ನಡೆದಿದೆ. ಯೆಸ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸದಾ ಹೊಸ ಹೊಸ ಪ್ರಯೋಗಗಳಿಗೆ ತುಡೀತಾ ಇದ್ರು. ಕನ್ನಡ ಚಿತ್ರರಂಗಕ್ಕೆ , ಕನ್ನಡಿಗರಿಗೆ ಏನಾದ್ರೂ ಒಳಿತು ಮಾಡಬೇಕು ಅಂತ ತುಡೀತಿದ್ದ ಪರಮಾತ್ಮ ಅವರು. ಸದ್ಯ ಪುನೀತ್ರ ಅಂಥಾ ಒಂದು ಕನಸು ಈಡೇರಿದೆ. ಅಪ್ಪು ಫ್ಯಾನ್ಡಮ್ ಆ್ಯಪ್ ಅನಾವರಣಗೊಂಡಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದಲ್ಲಿ ಸಿದ್ಧವಾಗಿರುವ ಆ್ಯಪ್‌ನ್ನ ಡಿಸಿಎಂ ಡಿಕೆ ಶಿವಕುಮಾರ್ ಲೋಕಾರ್ಪಣೆ ಮಾಡಿದ್ದಾರೆ. ಇಡೀ ದೇಶದಲ್ಲೇ ಒಬ್ಬ ನಟನ ಬಗ್ಗೆ ಬಂದಿರುವ ಮೊದಲ ಆ್ಯಪ್ ಇದು. ಜೊತೆಗೆ ಇದ್ರಲ್ಲಿ ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಬರಲಿವೆಯಂತೆ. ಸದ್ಯ ರಿಲೀಸ್ ಆಗಿರೋ ಆ್ಯಪ್ನಲ್ಲಿ ಪುನೀತ್ ರಾಜ್‌ಕುಮಾರ್ ಎಐ ಮೂಲಕ ನಮ್ಮೊಡನೆ ಮಾತನಾಡ್ತಾರೆ. ಒಟ್ನಲ್ಲಿ ಜೊತೆಗಿಲ್ಲದಿದ್ರೂ ಸದಾ ಜೀವಂತ ಅನ್ನುವಂತೆ , ಅವರ ಅನೇಕ ಕನಸು, ಯೋಜನೆಗಳ ಮೂಲಕ ಅಪ್ಪು ನಮ್ಮೊಡನೆ ಜೀವಂತವಾಗಿದ್ದಾರೆ.