ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಅಪ್ಪು ಸಿನಿಮಾ ರಾಜ್ಯಾದ್ಯಂತ ಮರುಬಿಡುಗಡೆಯಾಗಿದೆ. ಹೊಸ ರೂಪದಲ್ಲಿ ಹೊಸ ತಂತ್ರಜ್ಞಾನದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಚಿತ್ರವನ್ನ ಮರುಬಿಡುಗಡೆ ಮಾಡಿದ್ದಾರೆ.
ಕಳೆದ ವರ್ಷ ಪುನೀತ್ ರಾಜ್ಕುಮಾರ್ ಬರ್ತ್ಡೇಗೆ ಜಾಕಿ ಸಿನಿಮಾ ರೀ-ರಿಲೀಸ್ ಆಗಿತ್ತು. ಈ ಸಾರಿ ಅಪ್ಪು ಬರ್ತ್ಡೇ ಪ್ರಯುಕ್ತ ಪುನೀತ್ ನಟನೆಯ ಚೊಚ್ಚಲ ಸಿನಿಮಾ ಅಪ್ಪು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಹೊಸ ಸಿನಿಮಾಗಳಿಗೂ ಸಿಗದಂತಾ ಓಪನಿಂಗ್ ಅಪ್ಪುಗೆ ಸಿಕ್ಕಿದೆ. ಫ್ಯಾನ್ಸ್ ಅಕ್ಷರಶಃ ಅಪ್ಪು ಉತ್ಸವ ಮಾಡ್ತಾ ಇದ್ದಾರೆ. ಅಷ್ಟಕ್ಕೂ 23 ವರ್ಷಗಳ ಹಿಂದೆ ಈ ಸಿನಿಮಾ ಬಂದ ಹೊತ್ತಲ್ಲಿ ಏನೆಲ್ಲಾ ನಡೆದಿತ್ತು ಗೊತ್ತಾ..? ಸ್ಯಾಂಡಲ್ವುಡ್ ಆಗಸದಲ್ಲಿ ಪವರ್ ಸ್ಟಾರ್ ಅನ್ನೋ ನಕ್ಷತ್ರ ಉದಯಿಸಿದ್ದು ಹೇಗೆ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ. ಸ್ಯಾಂಡಲ್ವುಡ್ನ ಅಜಾತಶತ್ರು.. ಅಭಿಮಾನಿಗಳ ಪ್ರೀತಿಯ ರಾಜರತ್ನ..
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಅಪ್ಪು ಸಿನಿಮಾ ರಾಜ್ಯಾದ್ಯಂತ ಮರುಬಿಡುಗಡೆಯಾಗಿದೆ. ಹೊಸ ರೂಪದಲ್ಲಿ ಹೊಸ ತಂತ್ರಜ್ಞಾನದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಚಿತ್ರವನ್ನ ಮರುಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗೆ ಬೆಳಿಗ್ಗೆ 6 ಗಂಟೆಯಿಂದಲೇ ಶೋಗಳು ಶುರುವಾಗಿದ್ದು ಫ್ಯಾನ್ಸ್ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಕಟೌಟ್, ಹಾರ, ಹಾಲಿನ ಅಭಿಷೇಕ.. ಹೊಸ ಸಿನಿಮಾಗಳಿಗೂ ಪಡದಷ್ಟು ಸಂಭ್ರಮ, ಹುರುಪು ಅಪ್ಪು ಮರುಬಿಡುಗಡೆಯಲ್ಲಿ ಕಾಣ್ತಾ ಇದೆ. ಬಳ್ಳಾರಿಯಲ್ಲಿ ಬೆಳ್ಳಂ ಬೆಳಿಗ್ಗೆ ಜನ ಎತ್ತಿನ ಗಾಡಿ ಕಟ್ಟಿಕೊಂಡು ಬಂದು ಅಪ್ಪು ಸಿನಿಮಾ ನೋಡಿದ್ದಾರೆ. ಅಪ್ಪು ಸಿನಿಮಾದಲ್ಲಿ ಪುನೀತ್ ಎಂಟ್ರಿ ಸೀನ್ಗಂತೂ ಥಿಯೇಟರ್ ಮೇಲ್ಛಾವಣಿ ಹಾರಿಹೋಗುವಂತೆ ಶಿಳ್ಳೆ, ಚಪ್ಪಾಳೆ ಬಿದ್ದಿವೆ.
ಇಂಥದ್ದೊಂದು ಸಂಭ್ರಮದ ವಾತಾವರಣ ಥಿಯೇಟರ್ ಅಂಗಳದಲ್ಲಿ ಮೂಡಿ ಯಾವ ಕಾಲವಾಯ್ತೋ ಗೊತ್ತಿಲ್ಲ. ಹೀಗೆ ಎಲ್ಲಾ ವರ್ಗದ ಫ್ಯಾನ್ಸ್ ಥಿಯೇಟರ್ಗೆ ಕರೆಸುವಂಥಾ ಕೆಪಾಸಿಟಿ ಇದ್ದಿದ್ದು ಒನ್ ಌಂಡ್ ಓನ್ಲಿ ಪವರ್ ಸ್ಟಾರ್ಗೆ. ಈಗಲೇ ಅಪ್ಪು ಕ್ರೇಜ್ ಹೀಗಿದೆ ಅಂದ್ರೆ 23 ವರ್ಷಗಳ ಹಿಂದೆ ಅಪ್ಪು ರಿಲೀಸ್ ದಿನ ಅದ್ಯಾಪರಿ ಕ್ರೇಜ್ ಇತ್ತು ಅನ್ನೋದನ್ನ ನೀವೇ ಊಹೆ ಮಾಡಿಕೊಳ್ಳಿ. ಅಪ್ಪು ಸಿನಿಮಾ ತೆರೆಗೆ ಬಂದಿದ್ದು 26 ಏಪ್ರಿಲ್ 2002ರಂದು. ಎರಡು ದಿನದ ಹಿಂದಷ್ಟೇ ಅಣ್ಣಾವ್ರ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದ ಫ್ಯಾನ್ಸ್ ಅಣ್ಣಾವ್ರ ಕಿರಿಯ ಪುತ್ರನ ಚೊಚ್ಚಲ ಸಿನಿಮಾ ನೋಡೋದಕ್ಕೆ ಕುತೂಹಲದಿಂದ ಸಜ್ಜಾಗಿ ನಿಂತಿದ್ರು. ಅಸಲಿಗೆ ಡಾ.ರಾಜ್ಕುಮಾರ್ ಕಿರಿಮಗ ಅಂತಿಂಥವನಲ್ಲ ಬಾಲನಟನಾಗಿ ಅದಾಗಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದ ಪ್ರತಿಭಾನ್ವಿತ.