ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್ ಆಫ್ ದಿ ನೇಷನ್: ದರ್ಶನ್ ಬಗ್ಗೆ ತುಟಿ ಬಿಚ್ಚದ ಪ್ರಕಾಶ್ ರಾಜ್!

ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್ ಆಫ್ ದಿ ನೇಷನ್: ದರ್ಶನ್ ಬಗ್ಗೆ ತುಟಿ ಬಿಚ್ಚದ ಪ್ರಕಾಶ್ ರಾಜ್!

Published : Jul 11, 2024, 05:34 PM IST

ಡೈರೆಕ್ಟರ್ ಆರ್ ಚಂದ್ರು ಕಬ್ಜ ಸಿನಿಮಾ ಮಾಡಿ ಗೆದ್ದಿದ್ದು ಗೊತ್ತೇ ಇದೆ. ಈಗ ಚಂದ್ರು ಗುರಿ ಇಟ್ಟಿರೋದು ಒಟ್ಟಿಗೆ ಐದು ಸಿನಿಮಾಗಳನ್ನ ನಿರ್ಮಾಣ ಮಾಡೋದು. ಈಗ ಚಂದ್ರು ಮೊದಲ ಹೆಜ್ಜೆಯಾಗಿ ಫಾದರ್ ಸಿನಿಮಾ ಶುರುವಾಗಿದೆ. ಅಪ್ಪ, ಮಗನ ಬಾಂಧವ್ಯದ ಕಥೆ ಹೇಳೋ ಫಾದರ್ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ.

ಡೈರೆಕ್ಟರ್ ಆರ್ ಚಂದ್ರು ಕಬ್ಜ ಸಿನಿಮಾ ಮಾಡಿ ಗೆದ್ದಿದ್ದು ಗೊತ್ತೇ ಇದೆ. ಈಗ ಚಂದ್ರು ಗುರಿ ಇಟ್ಟಿರೋದು ಒಟ್ಟಿಗೆ ಐದು ಸಿನಿಮಾಗಳನ್ನ ನಿರ್ಮಾಣ ಮಾಡೋದು. ಈಗ ಚಂದ್ರು ಮೊದಲ ಹೆಜ್ಜೆಯಾಗಿ ಫಾದರ್ ಸಿನಿಮಾ ಶುರುವಾಗಿದೆ. ಅಪ್ಪ, ಮಗನ ಬಾಂಧವ್ಯದ ಕಥೆ ಹೇಳೋ ಫಾದರ್ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ನಟ ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗರ್​ ಭಾಗವಹಿಸಿದ್ದಾರೆ. ಫಾದರ್ ಟೈಟಲ್ಲೇ ಹೇಳುವಂತೆ ಇದು ತಂದೆ ಮಗನ ರಿಲೇಷನ್​​ಶಿಪ್​​​​​ ಜೊತೆ ಮನ ಮುಟ್ಟುವ ಕಥೆ ಇದೆಯಂತೆ. ಈ ಸಿನಿಮಾದಲ್ಲಿ ಪ್ರಕಾಶ್ ರಾಜ್​ ತಂದೆಯಾದ್ರೆ ಮಗನ ರೋಲ್​ನಲ್ಲಿ ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ. 

ಮಿಡಲ್ ಕ್ಲಾಸ್ ಕುಟುಂಬದ ಸಿನಿಮಾ ಫಾದರ್ ಬಗ್ಗೆ ಮಾತನಾಡುತ್ತಾ ಪ್ರಕಾಶ್ ರಾಜ್​​​, ಮಹತ್ಮಾ ಗಾಂಧಿ ಬಿಟ್ಟರೇ ನಾನೇ ಫಾದರ್ ಆಫ್​ ದಿ ನೇಷನ್ ಅಂದ್ರು. ಯಾಕಂದ್ರೆ ಪ್ರಕಾಶ್ ರಾಜ್​ ಬಹುಭಾಷಾ ನಟ. ಎಲ್ಲಾ ಚಿತ್ರರಂಗದ ಸಿನಿಮಾಗಳಲ್ಲೂ ಪ್ರಕಾಶ್ ರಾಜ್ ತಂದೆಯ ರೋಲ್ ಮಾಡಿದ್ದಾರೆ. ಆ ಎಲ್ಲಾ ತಂದೆಯ ಪಾತ್ರಗಳಿಗಿಂತ ಈ ಫಾದರ್ ಡಿಫ್ರೆಂಟ್ ಅಂದ್ರು. ನಟ ದರ್ಶನ್ ಕೊಲೆ ಕೇಸ್​ನಲ್ಲಿ ಅಂದರ್ ಆಗಿ ತಿಂಗಳಾಗಿದೆ. ದರ್ಶನ್​ ಬಗ್ಗೆ ಕೆಲ ಕಲಾವಿಧರು ಅವರಿಗನ್ನಿಸಿದ್ದನ್ನ ಹೇಳುತ್ತಿದ್ದಾರೆ. ಆದ್ರೆ ಫಾದರ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಸಿಕ್ಕ ಪ್ರಕಾಶ್ ರಾಜ್ ಮಾತ್ರ ದರ್ಶನ್ ಬಗ್ಗೆ ಮಾತನಾಡೋ ಮನಸ್ಸು ಮಾಡಲಿಲ್ಲ. 

ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ, ಸೋಷಿಯಲ್ ಮೀಡಿಯಾವನ್ನು ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ, ತಂದೆ-ಮಗನ ಸಂಬಂಧದ ಬಗ್ಗೆ,  ಸ್ಟಾರ್ ಡಮ್ ಸಂಭಾಳಿಸುವ ಬಗ್ಗೆ ಹೀಗೆ ಹಲವು ವಿಷಯಗಳನ್ನು ಹಂಚಿಕೊಂಡ್ರು. ಆರ್​ ಸಿ ಸ್ಟುಡಿಯೋಸ್ ಬ್ಯಾನರ್​ನಲ್ಲಿ ನಿರ್ಮಾಣ ಆಗುತ್ತಿರೋ ಫಾದರ್ ಸಿನಿಮಾವನ್ನ ರಾಜ್ ಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಎರಡನೇ ಭಾರಿಗೆ ನಟ ಡಾರ್ಲಿಂಗ್ ಕೃಷ್ಣ ಹಾಗು ಅಮೃತಾ ಅಯ್ಯಂಗರ್ ಜೊತೆಯಾಗಿದ್ದಾರೆ. ಈ ಹಿಂದೆ ಲವ್ ಮಾಕ್ಟೆಲ್​ ಮಾಡಿ ಎಲ್ಲರ ಮನ ಗೆದ್ದಿದ್ರು ಈ ಜೋಡಿ. ಲವ್ ಮಾಕ್ಟೆಲ್​ನಲ್ಲಿ ಲವರ್ಸ್​ ಆಗಿದ್ದ ಕೃಷ್ಣ ಅಮೃತಾ ಫಾದರ್​ನಲ್ಲಿ ಗಂಡ ಹೆಂಡತಿಯಾಗಿದ್ದಾರೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more