ತೆಲುಗು ನಟಿಯರೂ ಇಂಡಸ್ಟ್ರಿಗೆ ಬರಬೇಕೆಂದ ಸ್ಟೈಲಿಷ್ ಸ್ಟಾರ್: ತೆಲುಗು ನಾಯಕಿಯರೇ ಇಲ್ವಾ?

Aug 13, 2023, 10:04 AM IST

ಪ್ರತಿ ಸಿನಿಮಾ ಇಂಡಸ್ಟ್ರಿಯ ಬಗ್ಗೆಯೂ ಆಯಾ ಕಲಾವಿದರಿಗೆ ಪ್ರೀತಿ, ಅಭಿಮಾನ, ಗೌರವ ಇದ್ದೇ ಇರುತ್ತದೆ. ಹಾಗೆ ನೋಡಿದ್ರೆ ತೆಲುಗು ಸೀರಿಯಲ್ ಮತ್ತು ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವುದೇ ಕನ್ನಡ ನಟಿಯರು(kannada heroines)  ಅನ್ನೋದು ಇಂಟ್ರೆಸ್ಟಿಂಗ್ ವಿಚಾರ. ಪೂಜಾ ಹೆಗ್ಡೆ, ರಶ್ಮಿಕಾ, ಕೃತಿ ಶೆಟ್ಟಿ, ಶ್ರೀಲೀಲಾ ಸೇರಿದಂತೆ ಕನ್ನಡ ಚಿತ್ರರಂಗದ ನಟಿಯರದ್ದೇ ಮೇಲುಗೈ. ಹೀಗಿರುವಾಗ ಅಲ್ಲೂ ಅರ್ಜುನ್ ಇತ್ತೀಚೆಗೆ ಮಾತಾಡಿರೋ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಇದರಲ್ಲಿ ಎಲ್ಲ ಭಾಷೆಯಲ್ಲೂ ಆಯಾ ಭಾಷೆಯ ಹೀರೋಯಿನ್ಸ್ ಇದ್ದಾರೆ. ಆದರೆ ತೆಲುಗು ಭಾಷೆಯಲ್ಲಿ(telugu) ಹೀರೋಯಿನ್ಸ್ ಬಹಳ ಕಡಿಮೆ ಇದ್ದಾರೆ. ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಆಯಾ ಭಾಷೆಯ ನಟಿಯರು ಬಂದು ಅವರ ಭಾಷೆಯಲ್ಲಿ ಮಾತನಾಡಿ ಅವಾರ್ಡ್ ತೆಗೆದುಕೊಂಡರು. ಕನ್ನಡದ ನಟಿಯರೂ  ಕೂಡ ಬೊಂಬಾಟಾಗಿ ಕನ್ನಡದಲ್ಲೆ ಮಾತಾಡಿದರು. ಆದರೆ ತೆಲುಗು ನಟಿಯರು(Telugu actresses) ಇಂಡಸ್ಟ್ರಿಯಲ್ಲಿ ಬೆಳೆಯುತ್ತಿಲ್ಲ. ಆ ಬೇಸರ ಕೊರಗು ನನಗೆ ಬಹಳ ದಿನಗಳಿಂದ ಇತ್ತು. ಇದೀಗ ಶ್ರೀಲೀಲಾ ಮತ್ತು ಬೇಬಿ ಸಿನಿಮಾ ಮೂಲಕ ವೈಷ್ಣವಿ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿರೋದು ಖುಷಿಯ ವಿಚಾರ ಎಂದಿದ್ದಾರೆ. ಹಾಗೆ ನೋಡಿದ್ರೆ ಶ್ರೀಲೀಲಾ ತೆಲುಗು ಹುಡುಗಿಯೆಂದೆ ಅಲ್ಲೂ ಅರ್ಜುನ್ ಮೆನ್ಷನ್ ಮಾಡಿದ್ದಾರೆ. ಶ್ರೀಲೀಲಾ ಮನೆ ಭಾಷೆ ತೆಲುಗು ಆದರೂ ಕರ್ನಾಟಕದವರು(karnataka). ಕನ್ನಡದಲ್ಲೇ ಜರ್ನಿ ಶುರು ಮಾಡಿದವರು. ಏನೇ ಆದರೂ  ಅಲ್ಲೂ ಅರ್ಜುನ್ ಬೇಬಿ ಸಿನಿಮಾದಲ್ಲಿ ನಟಿಸಿರೋ ವೈಷ್ಣವಿ ಕುರಿತು ಖುಷಿಯಿಂದ ಮಾತನಾಡಿದ್ದಾರೆ. ಆಯಾ ಭಾಷೆಯಲ್ಲಿ ಆಯಾ ನಾಯಕಿಯರು ಬೆಳೆಯಬೇಕು ಎನ್ನುವ ಅವರ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ:  ದುಬೈನಲ್ಲಿ ಸೈಮಾ ಸಂಭ್ರಮ: ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಡಾಲಿ, ಶ್ರುತಿ ಹಾಸನ್‌ ಭಾಗಿ..!