KGF 2 ನೋಡಿ ಅಲ್ಲು ಅರ್ಜುನ್ ದಿಲ್ಖುಷ್! ತೆರೆ ಮೇಲೆ ಒಂದಾಗ್ತಾರ ಪುಷ್ಪ ರಾಜ್-ರಾಕಿ ಭಾಯ್.?

KGF 2 ನೋಡಿ ಅಲ್ಲು ಅರ್ಜುನ್ ದಿಲ್ಖುಷ್! ತೆರೆ ಮೇಲೆ ಒಂದಾಗ್ತಾರ ಪುಷ್ಪ ರಾಜ್-ರಾಕಿ ಭಾಯ್.?

Published : Apr 24, 2022, 01:42 PM IST

ಕೆಜಿಎಫ್-2 (KGF 2) ಸಿನಿಮಾ ಈಗ ಭಾರತೀಯ ಚಿತ್ರರಂಗದ ಪ್ರೈಡ್ (Pride) ಆಗಿದೆ. ಈ ಚಿತ್ರವನ್ನ ಎಲ್ಲರೂ ಕೊಂಡಾಡುತ್ತಿದ್ದಾರೆ. ಇದೀಗ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. 

ಕೆಜಿಎಫ್-2 (KGF 2) ಸಿನಿಮಾ ಈಗ ಭಾರತೀಯ ಚಿತ್ರರಂಗದ ಪ್ರೈಡ್ (Pride) ಆಗಿದೆ. ಈ ಚಿತ್ರವನ್ನ ಎಲ್ಲರೂ ಕೊಂಡಾಡುತ್ತಿದ್ದಾರೆ. ಇದೀಗ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಸಿನಿಮಾ ಬಗ್ಗೆ ಟ್ವೀಟ್ ಮಾಡಿರೋ ಅಲ್ಲು, 'ಕೆಜಿಎಫ್ ಚಾಪ್ಟರ್ 2 ಚಿತ್ರತಂಡಕ್ಕೆ ದೊಡ್ಡ ಶುಭಾಶಯಗಳು. ಯಶ್ ಗಾರು ತೀವ್ರತೆಯುಳ್ಳ ನಟನೆ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಅತ್ಯುತ್ತಮವಾಗಿದೆ. ರವಿ ಬಸ್ರೂರು ಸಂಗೀತ ಮತ್ತು ಭುವನ್ ಗೌಡ ಛಾಯಾಗ್ರಹಣ ಸೂಪರ್.  ಒಂದು ಅದ್ಭುತ ಸಿನಿಮಾ ಅನುಭವ ನೀಡಿದ್ದಕ್ಕಾಗಿ ಮತ್ತು ಭಾರತದ ಚಿತ್ರರಂಗದ ಧ್ವಜವನ್ನು ಇನ್ನೂ ಎತ್ತರಕ್ಕೆ ಹಾರಿಸಿದ್ದಕ್ಕೆ ಧನ್ಯವಾದಗಳು' ಅಂತ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ. ಅಲ್ಲುರವರ ಟ್ವೀಟ್‌ಗೆ ರೀ ಟ್ವೀಟ್ ಮಾಡಿರೋ ರಾಕಿ, ಧನ್ಯವಾದಗಳು ಅಲ್ಲು ಅರ್ಜುನ್‌ರವರೇ, ನಿಮ್ಮ ಹಾರ್ಡ್ ವರ್ಕ್ ನೋಡಿದ್ರೆ ನನಗೆ ಅಚ್ಚುಮೆಚ್ಚು ಎಂದಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ಹಾಗು ಅಲ್ಲು ಅರ್ಜುನ್ ವಿಶ್ವಾದ್ಯಂತ ದೊಡ್ಡ ಫ್ಯಾನ್ಸ್ ಬೇಸ್ ಇರೋ ಸ್ಟಾರ್ಸ್. ಹಲವು ವಿಷಯಗಳಲ್ಲಿ ಇಬ್ಬರು ಒಂದೇ ರೀತಿ ಕಾಣಿಸ್ತಾರೆ. ಅಭಿನಯ, ಡಾನ್ಸ್, ಫೈಟ್, ಸಿನಿಮಾ ಮೇಲಿನ ಪ್ರೀತಿ, ಬಣ್ಣದ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬೇಕು ಅನ್ನೋ ಗುರಿ ಈ ಎಲ್ಲಾ ಗುಣಗಳು ಇಬ್ಬರ ಮಧ್ಯೆ ಒಂದೇ ತರ ಇದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಹಾಗು ಅಲ್ಲು ಅರ್ಜುನ್ ತೆರೆ ಮೇಲೆ ಅಣ್ತಮ್ಮಂದಿರಾಗ್ಲಿ ಅನ್ನೋದು ಹಲವರ ಬೇಡಿಕೆ. ಅದ್ರಲ್ಲೂ ಆಂಧ್ರ ಕರ್ನಾಟಕದವ್ರು ಯಾವಾಗ್ಲು ಅಣ್ತಮ್ಮಂದಿರ ಹಾಗೆ ಇರ್ತಾರೆ. ಈಗ ಯಶ್ ಅಲ್ಲು ಅರ್ಜುನ್ ಒಟ್ಟಿಗೆ ನಟಿಸಲಿ ಅನ್ನೋ ಆಸೆ ಕನ್ನಡ ಹಾಗು ತೆಲುಗು ಚಿತ್ರರಂಗದಲ್ಲಿ ಮೊಳಕೆ ಒಡೆದಿದೆ.

ರಾಕಿಂಗ್ ಸ್ಟಾರ್ ಯಶ್ ರನ್ನು ಹುಡುಕಿಕೊಂಡು ಬಿಗ್ ಪ್ರೊಡಕ್ಷನ್ ಹೌಸ್ಗಳು ಬರ್ತಿವೆ. ಟಾಲಿವುಡ್ನ ಟಾಪ್ ಪ್ರೊಡ್ಯೂಸರ್ ದಿಲ್ ರಾಜು ಯಶ್ರ ಸಿನಿಮಾ ಮಾಡ್ತಾರೆ ಅನ್ನೋ ಟಾಕ್ ಇದೆ. ದಿಲ್ ರಾಜು ಈ ಹಿಂದೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಿದ್ದಾರೆ. ಮತ್ತೊಂದ್ ಕಡೆ ಅಲ್ಲು ಅರ್ಜುನ್‌ಗೂ ಬಿಗ್ ಪ್ರೊಡಕ್ಷನ್ ಹೌಸ್ ಸಿನಿಮಾ ಮಾಡೋಕೆ ಅಪ್ರೋಚ್ ಮಾಡ್ತಿವೆ. ಎಸ್.ಎಸ್ ರಾಜಮೌಳಿ ಬೇರೆ RRR ಸಿನಿಮಾದಲ್ಲಿ ಇಬ್ಬರು ಬಿಗ್ ಸ್ಟಾರ್ಸನ್ನು ಒಟ್ಟಿಗೆ ತೋರಿಸಿ ಗೆದ್ದಿದ್ದಾರೆ. ಈಗ ಅಲ್ಲು ಅರ್ಜುನ್ ಹಾಗು ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ನಟಿಸೋ ಆಫರ್‌ಗಳು ಸೃಷ್ಟಿಯಾಗ್ತಿವೆ ಅಂತ ಹೇಳಲಾಗ್ತಿದೆ. ಆದ್ರೆ ಈ ಇಬ್ಬರು ಪ್ಯಾನ್ ಇಂಡಿಯಾ ಬಿಗ್ ಸ್ಟಾರ್ ಒಟ್ಟಿಗೆ ನಟಿಸುವಂತಹ ಕಥೆ, ಅದನ್ನ ಚಂದವಾಗಿ ತೋರಿಸೋ ಟ್ಯಾಲೆಂಟೆಡ್ ಡೈರೆಕ್ಟರ್ಸ್ ಸಿಗಬೇಕು. ಅದಕ್ಕೆಲ್ಲಾ ಕಾಲ ಕೂಡಿ ಬರಬೇಕು.


 

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more