ಅಲ್ಲು ಅರ್ಜುನ್‌ ತೋಳಿನಲ್ಲಿ ಶ್ರೀಲೀಲಾ: ರಶ್ಮಿಕಾ ಮಂದಣ್ಣರನ್ನು ಹಿಂದಿಕ್ಕಿದ್ರು ಅಂದ್ರು ಫ್ಯಾನ್ಸ್‌!

Jun 15, 2023, 12:49 PM IST

ರಶ್ಮಿಕಾ ಮಂದಣ್ಣ ಅವರು ಟಾಲಿವುಡ್‌ನ ಬೇಡಿಕೆಯ ನಟಿ ಆಗಿದ್ದಾರೆ. ಹಲವು ಸಿನಿಮಾ ಒಪ್ಪಿ ಅವರು ನಟಿಸಿದ್ದಾರೆ. ಈಗ ಟಾಲಿವುಡ್‌ನಲ್ಲಿ ಶ್ರೀಲೀಲಾ ಬೇಡಿಕೆ ಹೆಚ್ಚುತ್ತಿದೆ. ಇದೀಗ ಶ್ರೀಲೀಲಾ ಅವರ ಸಾಲು ಸಾಲು ಸಿನಿಮಾಗಳ ಪೋಸ್ಟರ್‌ ಕಂಡು ಅಂತೂ ರಶ್ಮಿಕಾರನ್ನ ಹಿಂದಿಕ್ಕಿದ್ರು ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾಗಳಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಸಿತಾರಾ ಎಂಟರ್ಟೇನ್‌ಮೆಂಟ್ಸ್‌ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ‘ವಿಡಿ 12’ ಚಿತ್ರದಲ್ಲಿ ಶ್ರೀಲೀಲಾ ವಿಜಯ್‌ ದೇವರಕೊಂಡ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶ್ರೀಲೀಲಾ ಅವರು ‘ಪೆಲ್ಲಿ ಸಂದದ್ʼ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಲಿವುಡ್ ಚಿತ್ರರಂಗದ ನಟ ಉಸ್ತಾದ್ ರಾಮ್ ಪೋತಿನೇನಿ ನಟನೆಯ ‘ಬೋಯಾಪಾಟಿ ರ‍್ಯಾಂಪೋ’  ಚಿತ್ರದಲ್ಲಿ ನಟಿ ನಾಯಕಿಯಾಗಿ ಮಿಂಚಲಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ʻಭಗವಂತ್‌ ಕೇಸರಿʼ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಮತ್ತು ನಟಿ ಶ್ರೀಲೀಲಾ  ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಕಿಚ್ಚ ಸುದೀಪ್ ಅಕ್ಕನ ಮಗ ಸಿನಿಮಾಗೆ ಎಂಟ್ರಿ: ಸಂಚಿತ್ ಸಂಜೀವ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ!