Oct 17, 2022, 2:41 PM IST
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಎನ್ನುತಾ ರಮ್ಯಾ ಮತ್ತೆ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸಿನಿಮಾ ಈವೆಂಟ್ ಗಳಲ್ಲಿಯೂ ರಮ್ಯಾ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಹೆಡ್ ಬುಷ್ ಸಿನಿಮಾದ ಪ್ರಿ ರಿಲೀಸ್ ಈವೆಂಟ್‌ಗೆ ರಮ್ಯಾ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ದಾವಣಗೆರೆಯಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿತು. ಈವೆಂಟ್ ಬಳಿಕ ರಮ್ಯಾ ದಾವಣಗೆರೆಯ ಫೇಮಸ್ ಬೆಣ್ಣೆ ದೊಸೆ ಸವಿದು ಸಂತಸ ಪಟ್ಟಿದ್ದಾರೆ. ಸಿನಿಮಾದ ಪ್ರಿ ರಿಲೀಸ್ ಈವೆಂಟ್‌ನಲ್ಲಿ ಬೆಣ್ಣೆ ದೊಸೆ ಸವಿಯುವುದಾಗಿ ರಮ್ಯಾ ಹೇಳಿದ್ದರು. ಅದರಂತೆ ಅವರು ಹೋಟೆಲ್‌ಗೆ ಹೋಗಿ ಬೆಣ್ಣೆ ದೋಸೆ ತಿಂದಿದ್ದಾರೆ. ರಮ್ಯಾ ದೋಸೆ ತಿಂದು ಹೊರಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ರಮ್ಯಾ ಎಲ್ಲರಿಗೂ ಖುಷಿಯಿಂದನೇ ಸೆಲ್ಫಿ ನೀಡಿದರು.