
ರಚಿತಾ ರಾಮ್ ದೊಡ್ಡ ಪೇಮೆಂಟ್ ಕೊಟ್ಟಿದ್ದೀವಿ. ಪೇಮೆಂಟ್ ಪಡೆದು ನಟನೆ ಮಾಡೋದ್ರ ಜೊತೆಗೆ ಪ್ರಚಾರಕ್ಕೂ ಬರಬೇಕಾಗಿದ್ದು ಕಲಾವಿದರ ಕೆಲಸ. ಸೋ ರಚಿತಾ ಮಾತು ತಪ್ಪಿದ್ದಾರೆ. ಅವರ ನಡೆಯಿಂದ ತಮಗೆ ನಷ್ಟವಾಗಿದೆ. ಅವರ ವಿರುದ್ದ ಕ್ರಮ ಕೈಗೊಳ್ಳಿ ಅಂತ ಚಿತ್ರತಂಡ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.
ಸಂಜು ವೆಡ್ಸ್ ಗೀತಾ-2 ವಿವಾದ ಜೋರಾಗಿ ನಡೀತಾ ಇರೋ ಹೊತ್ತಲ್ಲೇ ರಚಿತಾ ವಿರುದ್ದ ಮತ್ತೊಂದು ದೂರು ದಾಖಲಾಗಿದೆ. 2017ರಲ್ಲಿ ಸೆಟ್ಟೇರಿದ್ದ ಉಪ್ಪಿ ರುಪ್ಪಿ ಅನ್ನೋ ಸಿನಿಮಾದಲ್ಲಿ ಉಪೇಂದ್ರ ಜೊತೆ ರಚಿತಾ ರಾಮ್ ನಾಯಕಿಯಾಗಿ ನಟಿಸಬೇಕಿತ್ತು. ಈ ಚಿತ್ರಕ್ಕಾಗಿ 23 ಲಕ್ಷ ಸಂಭಾವನೆ ಮಾತನಾಡಿದ್ದ ರಚಿತಾ 13 ಲಕ್ಷ ಅಡ್ವಾನ್ಸ್ ಕೂಡ ಪಡೆದಿದ್ದರಂತೆ. ಆದ್ರೆ ಚಿತ್ರೀಕರಣಕ್ಕೆ ಬಾರದೇ ನಿರ್ಮಾಪಕರನ್ನ ಸತಾಯಿಸಿದ್ದಾರೆ.
ರಚಿತಾ ಅಸಹಕಾರದಿಂದ ಈ ಚಿತ್ರ ಶೇ.35ರಷ್ಟು ಕಂಪ್ಲೀಟ್ ಆಗಿ ನಿಂತುಹೋಗಿದೆ. ಸದ್ಯ ಈ ಸಿನಿಮಾದ ನಿರ್ಮಾಪಕಿ ವಿಜಯ ಲಕ್ಷ್ಮೀ ಅರಸ್ ವಾಣಿಜ್ಯಮಂಡಳಿಗೆ ಲಿಖಿತ ದೂರು ಕೊಟ್ಟು ರಚಿತಾ ವಿರುದ್ದ ಕ್ರಮ ಕೈಗೊಳ್ಳಿ ಅಂತ ಕೇಳಿಕೊಂಡಿದ್ದಾರೆ.
ಬುಲ್ ಬುಲ್ ಸಿನಿಮಾದಿಂದ ಸಿನಿರಂಗಕ್ಕೆ ಬಂದ ರಚಿತಾ , ಕಳೆದೊಂದು ದಶಕದಿಂದ ಕನ್ನಡದ ನಂ.1 ನಟಿ ಮಣಿ ಅನ್ನಿಸಿಕೊಂಡಿದ್ದಾರೆ. ಕನ್ನಡದ ಬಿಗ್ ಸ್ಟಾರ್ ಗಳ ಜೊತೆಗೆಲ್ಲಾ ನಟಿಸಿದ್ದಾರೆ. ಕನ್ನಡ ಸಿನಿರಸಿಕರ ಮನದಲ್ಲಿ ಡಿಂಪಲ್ ಕ್ವೀನ್ ಆಗಿ ಪಟ್ಟ ಪಡೆದಿದ್ದಾರೆ.
ಇಷ್ಟು ದಿನ ರಚಿತಾ ರಾಮ್ ಬಗ್ಗೆ ಯಾವುದೇ ದೂರುಗಳು ಬಂದಿರಲಿಲ್ಲ. ಆದ್ರೆ ಈಗ ಒಂದಾದ ಮೇಲೊಂದು ಆರೋಪಗಳು ಕೇಳಿ ಬರ್ತಾ ಇವೆ. ಜನ ಇದೆಲ್ಲಾ ಏನು ಬುಲ್ ಬುಲ್ ಅಂತ ಕೇಳ್ತಾ ಇದ್ದಾರೆ. ಬುಲ್ ಬುಲ್ ಮಾತನಾಡಿ ಇದಕ್ಕೆ ಉತ್ತರ ಕೊಡಬೇಕಿದೆ.