ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!

ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!

Published : Oct 25, 2025, 09:08 PM IST

ಇಲ್ಲಿ ಓಂ ಶಾಂತಿ.. ಹೈದರಾಬಾದ್​ನಲ್ಲಿ ಡಿಸ್ಕೋ ಶಾಂತಿ..! ಹೀಗಂತ ಕಿರುತೆರೆ ನಟಿ ಜ್ಯೋತಿ ರೈ ಬಗ್ಗೆ ಒಂಥದ್ದೊಂದು ಟ್ರೋಲ್ ಹರಿದಾಡೋದನ್ನ ನೀವು ನೋಡಿರಬಹುದು. ಜೋಗುಳ ಅನ್ನೋ ಸೀರಿಯಲ್​ನಿಂದ ಕನ್ನಡ ಕಿರುತೆರೆಗೆ ಬಂದ ಜ್ಯೋತಿ, ಇಲ್ಲಿ ಮಿಂಚಿದ್ದೆಲ್ಲಾ ಗೌರಮ್ಮನಂಥಾ ಪಾತ್ರಗಳಲ್ಲಿ. ಯಾಕೆ? ನೋಡಿ ಈ ಸ್ಟೋರಿ..

ಕನ್ನಡ ಕಿರುತೆರೆಯಲ್ಲಿ ಗೌರಮ್ಮನಂತೆ ಮಿಂಚ್ತಾ ಇದ್ದ ನಟಿ ಜ್ಯೋತಿ ರೈ (Jyothi Rai) ಟಾಲಿವುಡ್‌ಗೆ ಹೋದ ಮೇಲೆ ಬಿಚ್ಚಮ್ಮ ಆಗಿ ಬದಲಾಗಿದ್ದಾರೆ. ಸದ್ಯ ಕನ್ನಡ ಚಿತ್ರವೊಂದರಲ್ಲಿ ನಟಿಸೋದಕ್ಕೆ ಮರಳಿ ಬೆಂಗಳೂರಿಗೆ ಬಂದಿರೊ ಜ್ಯೋತಿ ತಮ್ಮ ಬದಲಾದ ಲುಕ್ಕು, ಲಕ್ಕು ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇಲ್ಲಿ ಓಂ ಶಾಂತಿ.. ಹೈದರಾಬಾದ್​ನಲ್ಲಿ ಡಿಸ್ಕೋ ಶಾಂತಿ..! 
ಯೆಸ್ ಕಿರುತೆರೆ ನಟಿ ಜ್ಯೋತಿ ರೈ ಬಗ್ಗೆ ಒಂಥದ್ದೊಂದು ಟ್ರೋಲ್ ಹರಿದಾಡೋದನ್ನ ನೀವು ನೋಡಿರಬಹುದು. ಜೋಗುಳ ಅನ್ನೋ ಸೀರಿಯಲ್​ನಿಂದ ಕನ್ನಡ ಕಿರುತೆರೆಗೆ ಬಂದ ಜ್ಯೋತಿ, ಇಲ್ಲಿ ಮಿಂಚಿದ್ದೆಲ್ಲಾ ಗೌರಮ್ಮನಂಥಾ ಪಾತ್ರಗಳಲ್ಲಿ.

ಕಿರಿತೆರೆಯಲ್ಲಿ ಸೀರೆಯುಟ್ಟು ಸಭ್ಯಗ್ರಹಿಣಿ ಪಾತ್ರಗಳನ್ನ ಮಾಡ್ತಿದ್ದ ಜ್ಯೋತಿ ಕನ್ನಡ ಸಿನಿಮಾಗಳಲ್ಲೂ ಇದೇ ಅವತಾರದಲ್ಲಿ ಮಿಂಚಿದ್ರು. ಆದ್ರೆ ಅದ್ಯಾವಾಗ ಟಾಲಿವುಡ್​ ಕಡೆಗೆ ಹೋದ್ರೋ ಅವರ ವರಸೆಯೇ ಬದಲಾಯ್ತು. ಕನ್ನಡ ಜ್ಯೋತಿ ಆಂಧ್ರಜ್ಯೋತಿಯಾದ ಮೇಲೆ ಭಲೇ ಹಾಟ್ ಆಗ್ಬಿಟ್ರು.

ಸೋಷಿಯಲ್ ಮಿಡಿಯಾದಲ್ಲಿ ಜ್ಯೋತಿ ಹಾಕೋ ಹಸಿಬಿಸಿ ಅವತಾರದ ಪೊಸ್ಟ್ ನೋಡಿದವರು, ಅರೇ ಇವರು ಅವರೇನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ರು. ಇಲ್ಲಿ ಓಂ ಶಾಂತಿ ರೀತಿ ಇದ್ದವರು ಅಲ್ಲೋಗಿ ಡಿಸ್ಕೋ ಶಾಂತಿ ಆದ್ರಲ್ಲಪ್ಪಾ ಅಂತ ಟ್ರೋಲ್ ಕೂಡ ಮಾಡತೊಡಗಿದ್ರು.

ದಿಢೀರ್ ಬದಲಾವಣೆ ಹಿಂದಿನ ಕಾರಣ ಬಿಚ್ಚಿಟ್ಟ ಜ್ಯೋತಿ 
ಯೆಸ್ ಜ್ಯೋತಿ ರೈ ಒಂದು ಲಾಂಗ್ ಗ್ಯಾಪ್ ಬಳಿಕ ಮತ್ತೆ ಕನ್ನಡದ ಕಡೆಗೆ ಬಂದಿದ್ದಾರೆ. ಪ್ರಮೋದ್ ನಟನೆಯ ಹಲ್ಕಾ ಡಾನ್ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡ್ತಿದ್ದಾರೆ. ಈ ಸಮಯದಲ್ಲೇ ತಮ್ಮ ಬದಲಾದ ಲಕ್ಕು, ಲುಕ್ಕು ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.

ಹೌದು ಗೌರಮ್ಮನ ತರಹ ಇದ್ರೆ ಆಗಲ್ಲ ಅಂತ ಕೊಂಚ ವರಸೆ ಬದಲಿಸಿದೆ . ಸೋಷಿಯಲ್ ಮಿಡಿಯಾಗೆ ಬಂದೆ. ಜನಕ್ಕೆ ಇಷ್ಟವಾಯ್ತು. ಜನ ಇಷ್ಟ ಪಡೋ ರೀತಿನೇ ಇರೋಣ ಬಿಡಿ ಅಂತಾರೆ ಜ್ಯೋತಿ. ಜೊತೆಗೆ ಕಲಾವಿದರು ಒಂದೇ ರೀತಿ ಇರಬಾರದು.. ಪಾತ್ರಕ್ಕೆ ತಕ್ಕಂತೆ ಬದಲಾಗಬೇಕು ಅಂತಾರಿವರು.

ತೆರೆ ಮೇಲೆ ಅದೆಷ್ಟೇ ಹಾಟ್ ಆಗಿ ಕಾಣಿಸಿಕೊಂಡರೂ ಒಳಗಡೆ ನಾನೂ ಅಪ್ಪಟ ಟ್ರೆಡಿಷನಲ್ ಅಂತಾರೆ ಜ್ಯೋತಿ. ಜೊತೆಗೆ ಟ್ರೋಲ್ ಮಾಡೋರ ಬಗ್ಗೆ ಐ ಡೋಂಟ್ ಕೇರ್ ಅಂತಾರೆ. ಕಷ್ಟ ಪಟ್ಟು ಇಷ್ಟ ಪಟ್ಟಿದ್ದನ್ನ ಮಾಡ್ತಾ ಇದ್ದೀನಿ ಅಂತಾರೆ.

ಇನ್ನೂ ವೈಯಕ್ತಿಕ ಬದುಕಿನಲ್ಲಿ ಬಂದ ಒಂದಿಷ್ಟು ಏರಿಳಿತಗಳು, ತನ್ನ ಮೇಲೆ ಬಂದ ಗಾಸಿಪ್​ಗಳು ಎಲ್ಲವನ್ನೂ ಬಗ್ಗೆನೂ ಜ್ಯೋತಿ ಹಗುರವಾಗೇ ತೆಗೆದುಕೊಂಡಿದ್ದಾರೆ.

ಹೌದು, ಜ್ಯೋತಿ ರೈ ಮೊದಲ ಪತಿಯಿಂದ ದೂರವಾಗಿದ್ದು, ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಎರಡನೇ ಮದುವೆಯಾಗಿದ್ದಾರೆ. ಈ ನಡುವೆ ಸೋಷಿಯಲ್ ಮಿಡಿಯಾದ ಹಾಟ್ ಅವತಾರಕ್ಕೂ , ಮುರಿದು ಬದ್ದ ಸಂಸಾರಕ್ಕೂ ನಂಟು ಹಾಕಿ.. ಎಲ್ಲವನ್ನೂ ಒಂದಕ್ಕೊಂದು ಬೆಸೆದು ಅನೇಕರು ಕೆಟ್ಟದಾಗಿ ಸೋಷಿಯಲ್ ಮಿಡಿಯಾದಲ್ಲಿ ಬಿಂಬಿಸ್ತಾರೆ. ಅಂಥವರ ಬಗ್ಗೆ ಜ್ಯೋತಿಗೆ ಬೇಸರ ಇದೆ.  ಇವರು ಯಾರನ್ನೂ ಬಿಡಲ್ಲ.. ಅದಕ್ಕೆಲ್ಲಾ ತಲೆಕೆಡಿಸಿಕೊಂಡರೆ ಬದುಕೋದಕ್ಕಾಗಲ್ಲ ಅಂತಾರೆ.

ಹೌದು ಮೊದಲ ವಿಚ್ಛೇಧನಕ್ಕೆ ಕಾರಣ ಇದೆ. ಎರಡನೇ ಪತಿ ಜೊತೆಗೆ ಬದುಕು ಚೆನ್ನಾಗಿದೆ ಅಂತಾರೆ ಜ್ಯೋತಿ ರೈ. ಒಟ್ಟಾರೆ ವೃತ್ತಿ ಬದುಕು- ವೈಯಕ್ತಿಕ ಬದುಕು ಎರಡಲ್ಲೂ ತನಗೀಗ ಸಂತೃಪ್ತಿ ಇದೆ ಅಂತಿದ್ದಾರೆ ಜ್ಯೋತಿ ರೈ. ಮತ್ತೆ ಕನ್ನಡ ಸಿನಿಮಾ ಮಾಡ್ತಿರೋ ಜ್ಯೋತಿ,  ಕನ್ನಡಿಗರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾರೆ. ಜ್ಯೋತಿಯ ಎರಡನೇ ಇನ್ನಿಂಗ್ಸ್ ನೋಡ್ಲಿಕ್ಕೆ ನೀವು ಕೂಡ ಸಜ್ಜಾಗಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more