Sep 27, 2022, 5:15 PM IST
ಸ್ಯಾಂಡಲ್ ವುಡ್‌ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಬನಾರಸ್ ಸಿನಿಮಾ ಕೂಡ ಒಂದು. ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಇತ್ತೀಚಿಗಷ್ಟೆ ಬನಾಸರ್ ತಂಡ ಟ್ರೈಲರ್ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಅದ್ದೂರಿಯಾಗಿ ನಡೆದ ಈವೆಂಟ್ ನಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್ ಭಾಗಿಯಾಗಿದ್ದರು. ಈವೆಂಟ್ ನಲ್ಲಿ ಮಾತನಾಡಿದ ಝೈದ್ ಖಾನ್, ವಿ ಮಿಸ್ ಯೂ ಅಪ್ಪು ಸರ್, ನೀವು ಸದಾ ನಮ್ಮ ಹೃದಯದಲ್ಲಿರ್ತೀರಾ ಎಂದು ಅಪ್ಪು ನೆನೆಯುತ್ತಾ ಮಾತು ಶುರು ಮಾಡಿದರು.ಬಳಿಕ ರವಿಚಂದ್ರನ್ ಅವರಿಗೆ ಧನ್ಯವಾದ ತಿಳಿಸಿ, ಬಾಲಿವುಡ್ ನಿಂದ ಬಂದಿದ್ದ ಅರ್ಬಾಜ್ ಖಾನ್ ಬಗ್ಗೆ ಮಾತನಾಡಿದ್ರು. ಅರ್ಬಾಜ್ ಭಾಯ್ ತುಂಬಾ ಸಲಹೆ ನೀಡಿದ್ದಾರೆ ಎಂದು ಹೇಳಿದರು.