Dec 18, 2022, 3:34 PM IST
ಡಾಲಿ ಧನಂಜಯ್ ನಟನೆಯ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಮೂಡಿಸಿರುವ ಜಮಾಲಿಗುಡ್ಡ ಇದೀಗ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ವಿಲನ್ ಆಗಿ ನಟ ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಮತ್ತು ತನ್ನ ಪಾತ್ರದ ಬಗ್ಗೆ ಯಶ್ ಶೆಟ್ಟಿ ಮಾತನಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಶೂಟಿಂಗ್ ತುಂಬಾ ಕಷ್ಟವಾಗಿತ್ತು. ಧನಂಜಯ್ ಜೊತೆ ಹೆಚ್ಚು ಕಾಂಬಿನೇಷನ್ ಇದೆ. ಈ ಸಿನಿಮಾಗಾಗಿ ನಾನು ಕೂಡ ತುಂಬಾ ಕಾತರದಿಂದ ಕಾಯುತ್ತಿದ್ದೀನಿ ಎಂದು ನಟ ಯಶ್ ಶೆಟ್ಟಿ ಹೇಳಿದ್ದಾರೆ.