ಡಿಕೆಶಿ ಭೇಟಿ ಮಾಡಿದ ಉಪೇಂದ್ರ, ದಿಢೀರ್ ಭೇಟಿ ಹಿಂದಿನ ರಹಸ್ಯ ಏನು: ಕೊನೆಗೂ ರಿವೀಲ್ ಆಯ್ತು?

ಡಿಕೆಶಿ ಭೇಟಿ ಮಾಡಿದ ಉಪೇಂದ್ರ, ದಿಢೀರ್ ಭೇಟಿ ಹಿಂದಿನ ರಹಸ್ಯ ಏನು: ಕೊನೆಗೂ ರಿವೀಲ್ ಆಯ್ತು?

Published : Nov 06, 2025, 04:38 PM ISTUpdated : Nov 06, 2025, 04:50 PM IST

ರಿಯಲ್ ಸ್ಟಾರ್ ಉಪೇಂದ್ರ ದಿಢೀರ್ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್​​ರನ್ನ ಭೇಟಿ ಮಾಡಿದ್ದಾರೆ. ಡಿಸಿಎಂ ನಿವಾಸಕ್ಕೆ ತೆರಳಿ ಭೇಟಿ ಮಾಡಿರೋ ಉಪ್ಪಿ ಕೆಲ ಹೊತ್ತು ಡಿಕೆಶಿ ಜೊತೆ ಕುಳಿತು ಚರ್ಚೆ ಮಾಡಿದ್ದಾರೆ. ಉಪ್ಪಿಯ ಈ ದಿಢೀರ್ ಭೇಟಿ ಹಿಂದಿನ ರಹಸ್ಯ ಏನು.

ರಿಯಲ್ ಸ್ಟಾರ್ ಉಪೇಂದ್ರ ದಿಢೀರ್ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್​​ರನ್ನ  ಭೇಟಿ ಮಾಡಿದ್ದಾರೆ. ಡಿಸಿಎಂ ನಿವಾಸಕ್ಕೆ ತೆರಳಿ ಭೇಟಿ ಮಾಡಿರೋ ಉಪ್ಪಿ ಕೆಲ ಹೊತ್ತು ಡಿಕೆಶಿ ಜೊತೆ ಕುಳಿತು ಚರ್ಚೆ ಮಾಡಿದ್ದಾರೆ. ಉಪ್ಪಿಯ ಈ ದಿಢೀರ್ ಭೇಟಿ ಹಿಂದಿನ ರಹಸ್ಯ ಏನು. ಅಂತ ಸಿನಿಲೋಕದಲ್ಲಿ-ರಾಜಕೀಯ ಲೋಕದಲ್ಲೂ ಚರ್ಚೆಯಾಗ್ತಾ ಇದೆ. ಯೆಸ್ ರಿಯಲ್ ಸ್ಟಾರ್ ಉಪೇಂದ್ರ , ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ಕುಳಿತು ಕೆಲ ಹೊತ್ತು ಚರ್ಚೆ ಮಾಡಿದ್ದಾರೆ. ಖುದ್ದು ಡಿ.ಕೆ.ಶಿ ಉಪೇಂದ್ರ ಜೊತೆಗಿನ ಭೇಟಿಯ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಈ ಭೇಟಿ ಹಿಂದಿನ ಕಾರಣವನ್ನ ಮಾತ್ರ ಡಿಕೆಶಿನೂ ಹೇಳಿಕೊಂಡಿಲ್ಲ. ಉಪ್ಪಿ ಕೂಡ ಹೇಳಿಲ್ಲ. ಅದ್ಯಾವ್ ಕಾರಣಕ್ಕೆ ಈ ದಿಡೀರ್ ಭೇಟಿ ಅಂತ ಸಿನಿಮಾ ಮತ್ತು ರಾಜಕೀಯ ಅಂಗಳದಲ್ಲಿ ಚರ್ಚೆ ಶುರುವಾಗಿದೆ.

2017ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಕಟ್ಟೋದಕ್ಕೆ ಮುಂದಾದಾಗ ದೊಡ್ಡ ನಿರೀಕ್ಷೆಗಳು ಇದ್ದವು. ಸಿನಿಮಾಗಳಲ್ಲಿ ರಾಜಕಾರಣ, ಸ್ವಸ್ಥ ಸಮಾಜದ ಬಗ್ಗೆ ನಾನಾ ಕನಸು ಬಿತ್ತಿದ್ದ ಉಪ್ಪಿ ರಾಜಕೀಯದಲ್ಲೂ ಕ್ರಾಂತಿ ಮಾಡಬಹುದು ಅಂದುಕೊಂಡಿದ್ರು ಜನ. ಉಪ್ಪಿ ಪ್ರಜಾಕೀಯ ಅನ್ನೋ ಹೊಸ ಆಲೋಚನೆ ಇಟ್ಟುಕೊಂಡು ಹೊಸ ಪಕ್ಷವನ್ನ ಲಾಂಚ್ ಮಾಡಿದ್ರು. ಉಪ್ಪಿ ಐಡಿಯಾ ಏನೋ ಚೆನ್ನಾಗಿತ್ತು. ಆದ್ರೆ ಅದು ವರ್ಕ್ ಆಗ್ಲಿಲ್ಲ. ಇದೂವರೆಗೂ ಒಂದು ಎಂಎಲ್ಎ ಸೀಟ್ ಇರಲಿ ಒಂದು ಪಂಚಾಯತಿ ಎಲೆಕ್ಷನ್​ನಲ್ಲಿ ಕೂಡ ಪ್ರಜಾಕೀಯದ ಅಭ್ಯರ್ಥಿಗಳು ಗೆಲ್ಲೋದಕ್ಕೆ  ಸಾಧ್ಯ ಆಗ್ಲಿಲ್ಲ. ಸೋ ಪ್ರಜಾಕೀಯ ಈಗ ಸೈಲೆಂಟ್ ಆಗಿದೆ. ಹೀಗಾಗಿ ಉಪ್ಪಿ ಏನಾದ್ರೂ ಪ್ರಜಾಕೀಯ ಬಿಟ್ಟು ರಾಜಕೀಯದ ಕಡೆ ಬಂದ್ರಾ ಅಂತ, ಡಿಕೆ ಜೊತೆ ಅವರನ್ನ ನೋಡಿದ ಫ್ಯಾನ್ಸ್ ಯೋಚನೆ ಮಾಡ್ತಾ ಇದ್ದಾರೆ. ಈ ಭೇಟಿ ಹಿಂದಿನ ಗುಟ್ಟೇನು ಖುದ್ದು ಬುದ್ದಿವಂತನೇ ಹೇಳಬೇಕು.!

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more