Aug 12, 2023, 9:08 AM IST
ಯಾರೇ ಬಿಗ್ ಸ್ಟಾರ್ ಆಗಿರಲಿ. ಅವರ ಹುಟ್ಟುಹಬ್ಬಕ್ಕೆ ಏನಾದ್ರು ಸರ್ಪ್ರೈಸ್ ಇರುತ್ತೆ ಅಂತ ಕಾಯೋದು ಮತ್ತು ಆಸೆ ಪಡೋದು ಅಭಿಮಾನಿಗಳ ಜನ್ಮಸಿದ್ಧ ಹಕ್ಕು. ಈಗ ಕನ್ನಡಿಗರ ಮಾಣಿಕ್ಯ ಕಿಚ್ಚ ಸುದೀಪ್(Actor Sudeep) ಹುಟ್ಟುಹಬ್ಬ ಬರ್ತಾ ಇದೆ. ಸೆಪ್ಟೆಂಬರ್ 2ಕ್ಕೆ ಹೆಬ್ಬುಲಿ ಬರ್ತ್ಡೇ ಇದೆ. ಕಿಚ್ಚನ ಈ ಜನ್ಮದಿನವನ್ನ ಅದ್ಧೂರಿಯಾಗಿಸೋಕೆ ಫ್ಯಾನ್ಸ್ ಎಲ್ಲಾ ತಯಾರಿ ಮಾಡುತ್ತಿದ್ದಾರೆ. ಹೀಗಿರುವಾಗ ತನ್ನ ಅಭಿಮಾನಿಗಳಿಗೆ ಏನಾದ್ರು ಒಂದು ಸರ್ಪ್ರೈಸ್ ಕೊಡೋ ಜವಾಬ್ಧಾರಿ ಕಿಚ್ಚನದ್ದಲ್ವಾ. ಅದಕ್ಕಾಗಿ ಈಗ ಬಿಗ್ ಸರ್ಪ್ರೈಸ್ ಒಂದು ರೆಡಿಯಾಗಿದೆ. ಅದುವೇ ಕಿಚ್ಚ 46(Kichha 46 ಸರ್ಪ್ರೈಸ್. ಕಿಚ್ಚ 46 ಈ ಮೂವಿ ಮೇಲೆ ಸುದೀಪ್ ಅಭಿಮಾನಿಗಳಿಗೆ ಬೆಟ್ಟದಷ್ಟು ಎಕ್ಸ್ಪಟೇಷನ್ ಇದೆ. ಜಸ್ಟ್ ಒಂದು ಚಿಕ್ಕ ಗ್ಲಿಮ್ಸ್ನಿಂದ ಸೌತ್ ನಾರ್ತ್ ತುಂಬಾ ಸೌಂಡ್ ಮಾಡುತ್ತಿರೋ ಈ ಸಿನಿಮಾದ ಶೂಟಿಂಗ್ ಚೆನ್ನೈನಲ್ಲಿ ನಡೆಯುತ್ತಿದೆ. ಕಿಚ್ಚ 46 ಸಿನಿಮಾ ಮಾಸ್ ಗೆ ಮಾಸ್ ಅಂತ ಈ ಸಿನಿಮಾದ ಚಿಕ್ಕ ಗ್ಲಿಮ್ಸ್ ಹೇಳಿದೆ. ಆದ್ರೆ ಇದುವರೆಗೂ ಸಿನಿಮಾದ ಟೈಟಲ್ ಏನು ಅನ್ನೋ ಸೀಕ್ರೆಟ್ಅನ್ನ ಬಿಟ್ಟುಕೊಟ್ಟಿಲ್ಲ ಸುದೀಪ್. ಆ ಸೀಕ್ರೆಟ್ ಮಾಣಿಕ್ಯನ ಹುಟ್ಟುಹಬ್ಬದ(birthday) ದಿನ ರಿವೀಲ್ ಆಗ್ತಿದೆ. ಕಿಚ್ಚ 46 ಸಿನಿಮಾದ ಫಸ್ಟ್ ಲುಕ್ ಫೋಸ್ಟರ್ ಜೊತೆ ಟೈಟಲ್ ನಾಮಕರಣ ಆಗ್ತಿದೆ.
ಇದನ್ನೂ ವೀಕ್ಷಿಸಿ: Jailer Movie: ಬೆಂಗಳೂರಿನಲ್ಲಿ ದಾಖಲೆ ಬರೆದ ಜೈಲರ್ !