ಅಯೋಧ್ಯೆಯಲ್ಲಿ ಸ್ಯಾಂಡಲ್‌ವುಡ್ ಶ್ರೀಮನ್ನಾರಾಯಣ: ರಾಮನ ಕಣ್ಣೇ ಮಹಾದ್ಭುತ ಎಂದ ರಕ್ಷಿತ್ ಶೆಟ್ಟಿ!

ಅಯೋಧ್ಯೆಯಲ್ಲಿ ಸ್ಯಾಂಡಲ್‌ವುಡ್ ಶ್ರೀಮನ್ನಾರಾಯಣ: ರಾಮನ ಕಣ್ಣೇ ಮಹಾದ್ಭುತ ಎಂದ ರಕ್ಷಿತ್ ಶೆಟ್ಟಿ!

Published : Mar 08, 2024, 12:45 PM IST

ರಿಚರ್ಡ್ ಆಂಟನಿ' ಮುಹೂರ್ತಕ್ಕೂ ಮುನ್ನ 'ಬಾಲರಾಮ'ನ ದರ್ಶನ ಮಾಡಿಕೊಂಡಿದ್ದಾರೆ  ನಟ ರಕ್ಷಿತ್ ಶೆಟ್ಟಿ. 'ಅಯೋಧ್ಯೆ'ಯಲ್ಲಿ ಗಂಧದಗುಡಿಯ ಶ್ರೀಮನ್ನಾರಾಯಣ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 

ರಿಚರ್ಡ್ ಆಂಟನಿ' ಮುಹೂರ್ತಕ್ಕೂ ಮುನ್ನ 'ಬಾಲರಾಮ'ನ ದರ್ಶನ ಮಾಡಿಕೊಂಡಿದ್ದಾರೆ  ನಟ ರಕ್ಷಿತ್ ಶೆಟ್ಟಿ. 'ಅಯೋಧ್ಯೆ'ಯಲ್ಲಿ ಗಂಧದಗುಡಿಯ ಶ್ರೀಮನ್ನಾರಾಯಣ ಎಂದು ಅಬಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.  ಕನ್ನಡದ ಸಿಂಪಲ್ ಸ್ಟಾರ್ ಚಾಋ್ಲಿ 333 ಮತ್ತು ಸಪ್ತಸಾಗರದಾಚೆ ಪಾರ್ಟ್ 1 ಪಾರ್ಟ್2 ನಂತರ ರಕ್ಷಿತ್ ಶೆಟ್ಟಿ  ಇದೀಗ ಹೊಸ ಚಿತ್ರ ರಿಚರ್ಡ್ ಆಂಟೋನಿಗಾಗಿ ತಯಾರಿ ನಡೆಸಿದ್ದಾರೆ.  ರಕ್ಷಿತ್ ಸಿನಿಮಾ ಭಕ್ತನೂ ಹೌದು ದೈವ ಭಕ್ತ ಕೂಡ ಹೌದು. ಸಿನಿಮಾಗೆ ಸಂಬಂಧಿಸಿದ ಕೆಲಸಗಳಿಂದ ಬಿಡುವು ಸಿಕ್ಕಾಗಲೆಲ್ಲ ನೆಮ್ಮದಿಯನ್ನ ಅರಸಿ, ದೇವಸ್ಥಾನಕ್ಕೆ ತೆರಳುವುದು ರಕ್ಷಿತ್ ಶೆಟ್ಟಿ ರೂಢಿಸಿಕೊಂಡ ಅಭ್ಯಾಸ. ಇದಕ್ಕೆ ಇನ್ನೊಂದು ಉದಾಹರಣೆ ರಕ್ಷಿತ್ ಶೆಟ್ಟಿ ಅಯೋಧ್ಯೆಗೆ ತೆರಳಿದ್ದಾರೆ. ಬಾಲರಾಮನ ಪಾದಕ್ಕೆರಗಿ ಆಶೀರ್ವಾದವನ್ನೂ ಪಡೆದಿದ್ದಾರೆ. ಶ್ರೀಮನ್ನಾರಾಯಣನನ್ನ ಅಯೋಧ್ಯೆಯಲ್ಲಿ ಕಂಡು ಅಲ್ಲಿನ ಅಭಿಮಾನಿಗಳು ಪುಳಕಿತಗೊಂಡಿದ್ದಾರೆ. 

ಸೆಲ್ಫೀ, ಫೋಟೋ ಕ್ಲಿಕಿಸಿಕೊಂಡು ಸಂಭ್ರಮಿಸಿದ್ದಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅವರ ಅಯೋಧ್ಯೆ ಪ್ರವಾಸದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಈ ವರ್ಷದ ಆರಂಭದಲ್ಲಿ ಮನೆಯ ದೈವ ಕೋಲದಲ್ಲಿ ಭಾಗವಹಿಸಿ ರಕ್ಷಿತ್ ಶೆಟ್ಟಿ ದೈವದ ಆಶೀರ್ವಾದ ಪಡೆದಿದ್ದರು. ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಪಾಲ್ಗೊಂಡಿದ್ದರು. ಕಾಪು ಮಾರಿಗುಡಿ ದೇವಾಲಯಕ್ಕೂ ಸಿಂಪಲ್ ಸ್ಟಾರ್ ಭೇಟಿ ನೀಡಿದ್ದರು. ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನವನ್ನೂ ಪಡೆದಿದ್ದರು. ಪುಂಗನೂರು ತಳಿಯ ಗೋವುಗಳನ್ನು ಮುದ್ದಾಡಿ ತಮ್ಮ ಗೋ ಪ್ರೇಮವನ್ನ ಮೆರೆದಿದ್ದರು ರಕ್ಷಿತ್ ಶೆಟ್ಟಿ. ಇದೀಗ ಅಯೋಧ್ಯೆಗೆ ತೆರಳಿ ಬಾಲ ರಾಮನ ದರ್ಶನ ಪಡೆದಿದ್ಧಾರೆ. ರಿಚರ್ಡ್ ಆಂಟೋನಿಗೆ ಶುಭವಾಗಲಿ ಎನ್ನುತ್ತಿದ್ದಾರೆ ರಕ್ಷಿತ್ ಫ್ಯಾನ್ಸ್.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more