ನಟ ದರ್ಶನ್ ಕೊಲೆ ಮಾಡಿದ್ದೇ ಆದ್ರೆ ಶಿಕ್ಷೆ ಆಗಲಿ, ಆದರೆ..: ರಾಜ್ ಬಿ ಶೆಟ್ಟಿ ಹೇಳಿದ್ದೇನು?

ನಟ ದರ್ಶನ್ ಕೊಲೆ ಮಾಡಿದ್ದೇ ಆದ್ರೆ ಶಿಕ್ಷೆ ಆಗಲಿ, ಆದರೆ..: ರಾಜ್ ಬಿ ಶೆಟ್ಟಿ ಹೇಳಿದ್ದೇನು?

Published : Jul 18, 2024, 11:29 AM ISTUpdated : Jul 18, 2024, 12:58 PM IST

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ದರ್ಶನ್​ ಬಗ್ಗೆ ಸ್ಯಾಂಡಲ್​ವುಡ್​ ಮಂದಿ ಅವರದ್ದೇ ಆದ ಅಭಿಪ್ರಾಯ ಹೇಳುತ್ತಾರೆ. ಕೆಲವ್ರು ದರ್ಶನ್ ಪರ ನಿಂತ್ರೆ ಇನ್ ಕೆಲವ್ರು ನಾವು ನ್ಯಾಯದ ಪರ, ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ದರ್ಶನ್​ ಬಗ್ಗೆ ಸ್ಯಾಂಡಲ್​ವುಡ್​ ಮಂದಿ ಅವರದ್ದೇ ಆದ ಅಭಿಪ್ರಾಯ ಹೇಳುತ್ತಾರೆ. ಕೆಲವ್ರು ದರ್ಶನ್ ಪರ ನಿಂತ್ರೆ ಇನ್ ಕೆಲವ್ರು ನಾವು ನ್ಯಾಯದ ಪರ, ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಎನ್ನುತ್ತಿದ್ದಾರೆ. ಇದೀಗ ಕನ್ನಡದ ದೊಡ್ಡ ಟ್ಯಾಲೆಂಟ್ ರಾಜ್​ ಬಿ ಶೆಟ್ಟಿ ಕೂಡ ದರ್ಶನ್​ ಕೇಸ್​ ಬಗ್ಗೆ ತನ್ನ ರೂಪಾಂತರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮೌನ ಮುರಿದಿದ್ದಾರೆ.  ರೂಪಾಂತರ ಸಿನಿಮಾ ಟ್ರೈಲರ್​ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿರೋ ರಾಜ್ ಬಿ ಶೆಟ್ಟಿ ದರ್ಶನ್ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ. 

ಒಂದು ವೇಳೆ ತಪ್ಪು ಆಗಿದೆ ಎಂಬುದು ನಿಜವಾದರೆ ಅದಕ್ಕೆ ಕಾನೂನು ಇದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಎಲ್ಲರಿಗೂ ನ್ಯಾಯ ಸಿಗಲೇಬೇಕು. ಅಪರಾಧ ಅವರಿಂದಲೇ ಆಗಿದ್ದರೆ ಶಿಕ್ಷೆ ಆಗಬೇಕು. ಎಂದಿದ್ದಾರೆ ರಾಜ್ ಬಿ ಶೆಟ್ಟಿ. ರಾಜ್ ಬಿ ಶೆಟ್ಟಿ ಈಗ ಲೀಡ್​ ರೋಲ್​ನಲ್ಲಿ ನಟಿಸಿರೋ ಮತ್ತೊಂದು ಸಿನಿಮಾ ರೂಪಾಂತರ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಕನ್ನಡ ಸಿನಿ ಪ್ರೇಕ್ಷಕರು ರೂಪಾಂತರದ ಬಗ್ಗೆ ಮಾತಾಡುವಂತಾಗಿದೆ. ವಿಶೇಷ ಅಂದ್ರೆ ರಾಜ್ ಬಿ ಶೆಟ್ಟಿಯ ಒಂದು ಮೊಟ್ಟೆಯ ಕತೆ ಸಿನಿಮಾ ಮಾಡಿದ್ದ ತಂಡವೇ ರೂಪಾಂತರಕ್ಕೂ ಕೆಲಸ ಮಾಡಿದ್ದಾರೆ. 

ಈ ಟ್ರೈಲರ್ ನೋಡುತ್ತಿದ್ರೆ ರಾಜ್ ಬಿ ಶೆಟ್ಟಿ ಮತ್ತೊಮ್ಮೆ ಪ್ರೇಕ್ಷಕರ ಮನ ಮುಟ್ಟೊದು ಗ್ಯಾರಂಟಿ ಅನ್ನಿಸುತ್ತೆ. ರೂಪಾಂತರ ಸಿನಿಮಾದ ಡೈರೆಕ್ಟರ್ ಮಿಥಿಲೇಶ್ ಎಡವಲತ್.. ಈ ಸಿನಿಮಾದಲ್ಲಿ ನಾಲ್ಕು ಕಥೆಗಳನ್ನ ಹೇಳುತ್ತಿದ್ದಾರೆ. ಈ ಟ್ರೈಲರ್​ ನೋಡಿದ್ರೆ  ಒಂದೊಂದು ಕಥೆನೂ ಜೀವನಕ್ಕೆ ಹತ್ತಿರ ಅನಿಸುತ್ತದೆ. ವ್ಯವಸ್ಥೆಯ ಅಸಲಿ ಮುಖಗಳು ಇಲ್ಲಿ ಅನಾವರಣ ಗೊಂಡಂತಿದೆ. ರೂಪಾಂತರಕ್ಕೆ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಸ್ಕ್ರಿಪ್ಟ್ ಕೆಲಸಕ್ಕೂ ಸಾಥ್ ಕೊಟ್ಟಿದ್ದು, ಈ ಸಿನಿಮಾ ಮೇಲಿನ ನಿರೀಕ್ಷೆಯ ಹೆಚ್ಚಾಗಿದೆ. ರಾಜ್ ಬಿ ಶೆಟ್ಟಿ, ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಈ  ಚಿತ್ರಕ್ಕಿದೆ.  

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more