May 4, 2023, 5:07 PM IST
ಡಾಕ್ಟರ್ ರಾಜ್ ಕುಮಾರ್ ರನ್ನ ಎಲ್ಲರೂ ದೇವರು ಅಂತಾರೆ ಯಾಕ್ ಗೊತ್ತಾ.? ಅಣ್ಣಾವ್ರಿಗೆ ಯಾರೋ ಒಬ್ಬ ಕೇಳಿದ್ನಂತೆ. ಅಣ್ಣಾ ನೀವು ಯಾವ್ ಜಾತಿ ಅಂತ. ಅದಕ್ಕೆ ಅಣ್ಣಾವ್ರು ಏನ್ ಹೇಳಿದ್ರಂತೆ ಗೊತ್ತಾ.? ಲೋ ಅಪ್ಪಾ ನಾನು ಕಲಾವಿದರ ಜಾತಿ ಕಣಯ್ಯಾ, ನನಗ ಯಾವ್ದೇ ಜಾತಿ ಇಲ್ಲ ಅಂದಿದ್ರಂತೆ. ಈ ಮಾತು ಈಗ ಯಾಕ್ ನೆನಪಾಗ್ತದೆ ಗೊತ್ತಾ.? ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಜ್ಯಾದ್ಯಂತ ಬಿಜೆಪಿ ಪರ ಮತಯಾಚನೆ ಮಾಡುತ್ತಿದ್ದಾರೆ. ಈ ಭಾರಿ ಚುನಾವಣೆಯಲ್ಲಿ ಜಾತಿ ರಾಜಕಾರಣ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದ್ದು, ಈ ಜಾತಿ ಕಿಚ್ಚನಿಗೂ ಕಾಡುತ್ತಿದ್ದೆ. ಸುದೀಪ್ ಪ್ರಚಾರಕ್ಕೆ ಹೋದಲ್ಲೆಲ್ಲಾ ಸುದೀಪ್ರ ಜಾತಿ ಪ್ರಶ್ನೆ ಎದುರಾಗುತ್ತಿದೆ. ಕಿಚ್ಚ ಬೆಳಗಾವಿಯ ಯಮಕನಮರಡಿಗೆ ಪ್ರಚಾರಕ್ಕೆ ಹೋಗಿದ್ದಾಗ ಮತ್ತೊಮ್ಮೆ ಜಾತಿ ಪ್ರಶ್ನೆ ಎದುರಾಗಿದೆ.ಇದಕ್ಕೆ ಕಿಚ್ಚ ನಾನು ಎಲ್ಲಿ ಹುಟ್ಟಿದೆ. ಯಾವ ಜನಾಂಗ ಅನ್ನೋದು ಮುಖ್ಯ ಅಲ್ಲ. ಒಬ್ಬ ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮೊದಲು ಮುಖ್ಯ. ಆವಾಗ ಮಾತ್ರ ಮನಸ್ಸುಗಳನ್ನು ಗೆಲ್ಲಲು ಸಾಧ್ಯ. ಇಲ್ಲಿ ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ.