
ಕಿಚ್ಚ ಸುದೀಪ್, ಮ್ಯಾಕ್ಸ್ ನಿರ್ದೇಶಕರ ಜೊತೆಗೆ ಹೊಸ ಸಿನಿಮಾ ಶುರು ಮಾಡಿದ್ದಾರೆ. ಇದು ಕೂಡ ಪಕ್ಕಾ ಆಕ್ಷನ್ ಸಿನಿಮಾ ಅನ್ನೋ ಸೂಚನೆ ಕೊಟ್ಟಿದ್ದಾರೆ.
ಇದು ಕೂಡ ಪಕ್ಕಾ ಆಕ್ಷನ್ ಸಿನಿಮಾ ಅನ್ನೋ ಸೂಚನೆ ಕೊಟ್ಟಿದ್ದಾರೆ. ಹೀಗೆ ಕಿಚ್ಚ ಬ್ಯಾಕ್ ಟು ಬ್ಯಾಕ್ ಆಕ್ಷನ್ ಸಿನಿಮಾಗಳ ಹಿಂದೆ ಬಿದ್ದಿರೋದ್ರ ಹಿಂದೆ ಒಂದು ಕಾರಣ ಇದೆ. ಅದೇನು ಅಂತ ಖುದ್ದು ಸುದೀಪ್ ಹೇಳಿದ್ದಾರೆ ಕೇಳಿ.
ಯೆಸ್, ಬಿಲ್ಲ ರಂಗ ಬಾಷಾ ಸಿನಿಮಾ ಜೊತೆಗೆ ಕಿಚ್ಚ ಇನ್ನೊಂದು ಸಿನಿಮಾ ಮಾಡ್ತಾ ಇದ್ದಾರೆ. ಬಿಲ್ಲ ರಂಗ ಬಾಷಾ ದೊಡ್ಡ ಕ್ಯಾನ್ವಾಸಿನ ಸಿನಿಮಾ. ಅದು ತೆರೆಗೆ ಬರಲಿಕ್ಕೆ ಬಹಳಷ್ಟು ಸಮಯ ಬೇಕು. ಅದರ ನಡುವೆ ಇನ್ನೊಂದು ಸಿನಿಮಾ ಕ್ವಿಕ್ ಆಗಿ ಮಾಡಬೇಕು ಅಂತ ಸಜ್ಜಾಗಿದ್ದಾರೆ. ಮತ್ತದಕ್ಕೆ ಮ್ಯಾಕ್ಸ್ ಡೈರೆಕ್ಟರ್ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳ್ತಾ ಇದ್ದಾರೆ.